»   » ವಿಮರ್ಶೆ: 'ಬೇವಾಚ್'ಗಿಂತ ಪ್ರಿಯಾಂಕ ಚೋಪ್ರಾದೇ ಆರ್ಭಟ, ಆಕರ್ಷಣೆ ಹೆಚ್ಚು

ವಿಮರ್ಶೆ: 'ಬೇವಾಚ್'ಗಿಂತ ಪ್ರಿಯಾಂಕ ಚೋಪ್ರಾದೇ ಆರ್ಭಟ, ಆಕರ್ಷಣೆ ಹೆಚ್ಚು

Posted By:
Subscribe to Filmibeat Kannada

ನಟಿ ಪ್ರಿಯಾಂಕ ಚೋಪ್ರಾ ಮೊಟ್ಟ ಮೊದಲ ಬಾರಿಗೆ ಹಾಲಿವುಡ್ ಅಂಗಳದಲ್ಲಿ ನಟಿಸಿರುವ 'ಬೇವಾಚ್' ಚಿತ್ರ ಇಂದು ಭಾರತದಲ್ಲಿ ತೆರೆಕಂಡಿದೆ. ಹಾಲಿವುಡ್ ಖ್ಯಾತ ನಟ ಡ್ವೇನ್ ಜಾನ್ಸನ್ ಜೊತೆ ಅಭಿನಯಿಸಿರುವ ಪಿಗ್ಗಿ, ಹಾಲಿವುಡ್ ಕಲಾವಿದರಿಗಿಂತ ಒಂದು ಕೈ ಮೇಲಾಗಿಯೇ ಚಿತ್ರದಲ್ಲಿ ಗಮನಸೆಳೆದಿದ್ದಾರೆ. ಈ ಆಕ್ಷನ್-ಕಾಮಿಡಿ ಚಿತ್ರದ ವಿಮರ್ಶೆ ಇಲ್ಲಿದೆ ಓದಿರಿ.

ಚಿತ್ರ: 'ಬೇವಾಚ್
ನಿರ್ಮಾಣ: ಡ್ವೇನ್ ಜಾನ್ಸನ್ ಮತ್ತು ಇತರರು
ನಿರ್ದೇಶನ: Seth Gordon
ತಾರಾಗಣ: ಡ್ವೇನ್ ಜಾನ್ಸನ್, ಪ್ರಿಯಾಂಕ ಚೋಪ್ರಾ, ಜ್ಯಾಕ್ ಎಫ್ರಾನ್, ಅಲೆಕ್ಸಾಂಡ್ರಾ ಡಾಡೇರಿಯಾ, ಕೆಲ್ಲಿ ರೋಬ್ರಾಚ್ ಮತ್ತು ಇತರರು
ಬಿಡುಗಡೆ ದಿನಾಂಕ: ಭಾರತದಲ್ಲಿ ಜೂನ್ 2, 2017

'ಬೇವಾಚ್' ಚಿತ್ರಕಥೆ

ಬೇವಾಚ್ ಎಂಬ ಬೀಚ್ ರಕ್ಷಕ ಮಿಚ್ ಬುಚಾನನ್(ಡ್ವೇನ್ ಜಾನ್ಸನ್), ಹಂಟ್ಲಿ ಕ್ಲಬ್ ಎಂಬ ಬೀಚ್ ಕ್ಲಬ್ ಓನರ್ ವಿಕ್ಟೋರಿಯಾ ಲೀಡ್ಸ್(ಪ್ರಿಯಾಂಕ ಚೋಪ್ರಾ) ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ಸಂಶಯ ಪಡುತ್ತಾನೆ. ಡ್ರಗ್ ಸ್ಮಗ್ಲಿಂಗ್ ಬಗ್ಗೆ ತನಿಖೆ ಕೈಗೊಳ್ಳುವ ಮಿಚ್ ಬುಚಾನನ್‌ಗೆ, ವಿಕ್ಟೋರಿಯಾ ಲೀಡ್ಸ್ ಡ್ರಗ್ಸ್ ಕಳ್ಳಸಾಗಣೆ ಮಾತ್ರವಲ್ಲದೇ ಇನ್ನೂ ಹಲವು ಚುಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ತಿಳಿಯುತ್ತದೆ. ಇದೇ ವೇಳೆ ಮಿಚ್ ಬುಚಾನನ್ ರನ್ನು ತನಿಖೆಯಿಂದ ವಜಾಮಾಡಲಾಗಿ ಮ್ಯಾಟ್ ಬ್ರೂಡಿ(ಜಾಕ್ ಎಫ್ರಾನ್) ತನಿಖೆ ಮುಂದುವರೆಸುತ್ತಾರೆ. ಆದರೆ ಈತನು ಸಹ ತೊಂದರೆಯಲ್ಲಿ ಸಿಕ್ಕಿಬೀಳುತ್ತಾನೆ. ಕಾರಣ ಯಾರೇ ತನಿಖೆ ಕೈಗೊಂಡರು ಅವರನ್ನು ವಿಕ್ಟೋರಿಯಾ ಲೀಡ್ಸ್ ಕೊಲೆ ಮಾಡುವುದರಲ್ಲಿ ತೊಡಗಿಕೊಂಡಿರುತ್ತಾಳೆ. ಆದರೆ ಚಿತ್ರದಲ್ಲಿನ ಟ್ವಿಸ್ಟ್ ಏನು, ಹೇಗೆ ಕೊನೆಗೊಳ್ಳುತ್ತದೆ ಎಂಬುದನ್ನು ಚಿತ್ರ ನೋಡಿಯೇ ತಿಳಿಯಿರಿ.

ಸ್ಕ್ರಿಪ್ಟ್‌ ಮತ್ತು ಚಿತ್ರದ ಉದ್ದೇಶದಲ್ಲಿ ಗಟ್ಟಿತನವಿಲ್ಲ

ಸ್ಕ್ರಿಪ್ಟ್ ತೀರ ವೀಕ್ ಆಗಿದೆ. ಚಿತ್ರ ಪ್ರಮುಖವಾಗಿ ಒಂದು ಉದ್ದೇಶವಿಲ್ಲದೇ ಸಾಗುತ್ತದೆ. ಸಂಭಾಷಣೆಯಲ್ಲಿ ಹಾಸ್ಯವಿದ್ದರೂ ಚಿತ್ರ ಅಷ್ಟೊಂದು ಜೋಶ್ ನೀಡುವುದಿಲ್ಲ. ಸೂಪರ್ ಸ್ಟಾರ್ ಗಳ ಚಿತ್ರ ಹೇಗೆಲ್ಲಾ ಇರುತ್ತದೆ ಎಂದು ಕಲ್ಪಿಸಿಕೊಳ್ಳಬಹುದೋ ಹಾಗೆ ಇದೆ. ಚಿತ್ರದಲ್ಲಿ ವಿನ್ ಆಗೋದು ದಿ ರಾಕ್ ಎಂಬುದು ಹೈಲೈಟ್.

ಪಿಗ್ಗಿ ಅಭಿನಯ

ಪ್ರಿಯಾಂಕ ಚೋಪ್ರಾ ಬಾಲಿವುಡ್‌ಗಿಂತಲೂ ಒಂದು ಕೈ ಮೇಲೆ ಎಂಬುವಂತೆ ಹಾಲಿವುಡ್ ನ ಚೊಚ್ಚಲ ಚಿತ್ರದಲ್ಲಿ ಮಿಂಚಿದ್ದು ಸಖತ್ ಹಾಟ್ ಆಗಿ, ಪಡ್ಡೆ ಹುಡುಗರಂತು ಕಣ್ಣು ಮುಚ್ಚದೇ ನೋಡುವಷ್ಟು ಸ್ಪೈಸಿಯಾಗಿ ಕಾಣಿಸಿಕೊಂಡಿದ್ದಾರೆ. ಪಿಗ್ಗಿಯ ವಿಲನ್ ರೋಲ್ ಹಾಲಿವುಡ್ ಚೊಚ್ಚಲ ಚಿತ್ರಕ್ಕೆ ನ್ಯಾಯ ಒದಗಿಸಿದ್ದು, ಅವರ ಪಾತ್ರ ಪ್ರಭಾವಶಾಲಿಯಾಗಿದೆ.

ಡ್ವೇನ್ ಜಾನ್ಸನ್ ಮತ್ತು ಇತರರು

ಡ್ವೇನ್ ಜಾನ್ಸನ್ ಮತ್ತು ಜಾಕ್ ಎಫ್ರಾನ್ ಸಾಧ್ಯವಾದಷ್ಟು ತಮ್ಮ ಎಫರ್ಟ್ ಹಾಕಿದ್ದರು, ಅವರ ಪಾತ್ರಗಳು ಚಿತ್ರದ ಅರ್ಧ ಕಳಪೆಗೆ ಕಾರಣವಾಗಿವೆ. ಇತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ನಿರ್ದೇಶನ ಮತ್ತು ಸಂಗೀತ

ನಿರ್ದೇಶಕ ಹೆಚ್ಚಾಗಿ ಪಾತ್ರಧಾರಿಗಳು ಬೀಚ್ ನಲ್ಲಿ ಓಡಾಡಿಕೊಂಡು ಉಡುಪುಗಳನ್ನು ತೋರ್ಪಡಿಸುವುದರ ಮೇಲೆಯೇ ಕ್ಯಾಮೆರಾ ಫೋಕಸ್ ಮಾಡಿದ್ದಾರೆ ಹೊರತು ಮುಖದ ಮೇಲೆ ಅಲ್ಲ. ಅಭಿನಯಕ್ಕೆ ಹೆಚ್ಚು ಒತ್ತು ನೀಡಿಲ್ಲ ಎಂಬುದು ಕಂಡುಬಂದಿದೆ. Seth Gordon ಆಕ್ಷನ್ ಕಾಮಿಡಿ ಚಿತ್ರಕ್ಕೆ ಡೈರೆಕ್ಷನ್ ಮಾಡುವಲ್ಲಿ ಎಡವಿದ್ದು, ಪಾತ್ರ ಮತ್ತು ಜವಾಬ್ದಾರಿ ಎರಡರ ನಡುವೆ ಗೊಂದಲ ಉಂಟುಮಾಡಿಕೊಂಡಿದ್ದಾರೆ. ಕೆಲವು ಆಕ್ಷನ್ ದೃಶ್ಯಗಳು ಕಂಪ್ಯೂಟರ್ ಗೇಮ್ ರೀತಿ ಫೀಲ್ ನೀಡುತ್ತವೆ.

ಫೈನಲ್ ಸ್ಟೇಟ್‌ಮೆಂಟ್

'ಬೇವಾಚ್' ಕಂಪ್ಲೀಟ್ ಆಗಿ ಬಾಲಿವುಡ್ ಮಸಾಲ ಎಂಟರ್‌ ಟೈನ್‌ಮೆಂಟ್. ನೀವೇನಾದ್ರು ಬೇವಾಚ್ ಟಿವಿ ಶೋ ಅಭಿಮಾನಿ ಆಗಿದ್ರೆ ನಿರಾಸೆ ಖಂಡಿತ. ಆಕ್ಷನ್ ದೃಶ್ಯಗಳು ಸೂಪರ್. ಪ್ರಿಯಾಂಕ ಚೋಪ್ರಾ ಮತ್ತು ದಿ ರಾಕ್ ಡ್ವೇನ್ ಜಾನ್ಸನ್ ಅಭಿಮಾನಿಗಳು ನೋಡಬಹುದು. ಮಕ್ಕಳು ಸಹ ಚಿತ್ರ ಎಂಜಾಯ್ ಮಾಡುತ್ತಾರೆ.

English summary
Bollywood Actress Priyanka Chopra and Hollywood Actor Dwayne Johnson Starrer Hollywood Movie 'Baywatch' has hit the indian screens today (June 2nd). The Movie is out and out action-comedy and is a treat for Priyanka Chopra fans. 'Baywatch' Review is here

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada