»   » ಪಾರದರ್ಶಕ ಉಡುಗೆಯಲ್ಲಿ ಶೆರ್ಲಿನ್ ಚೋಪ್ರಾ

ಪಾರದರ್ಶಕ ಉಡುಗೆಯಲ್ಲಿ ಶೆರ್ಲಿನ್ ಚೋಪ್ರಾ

By: ರವಿಕಿಶೋರ್
Subscribe to Filmibeat Kannada

ಪ್ಲೇಬಾಯ್ ಗರ್ಲ್, ಕಾಮಸೂತ್ರ ಬೆಡಗಿ ಶೆರ್ಲಿನ್ ಚೋಪ್ರಾ ಕ್ಯಾನೆ ಚಿತ್ರೋತ್ಸವದಲ್ಲೂ ಸದ್ದು ಮಾಡಿದ್ದಾರೆ. ಅಲ್ಲೂ ತಮ್ಮ ಮೈಮಾಟವನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲಿ ಅವರ 'ಕಾಮಸೂತ್ರ 3d' ಚಿತ್ರವೂ ಪ್ರದರ್ಶನ ಕಂಡಿದೆ.

ಶೆರ್ಲಿನ್ ರೆಡ್ ಕಾರ್ಪೆಟ್ ಮೇಲೆ ಪಾರದರ್ಶಕ ಉಡುಗೆಯಲ್ಲಿ ಬರುತ್ತಿದ್ದಂತೆ ಅವರ ರಂಗುರಂಗಿನ ಚಿತ್ರಗಳು ಕ್ಯಾಮೆರಾಗಳಲ್ಲಿ ಬಂಧಿಯಾದವು. ಅವರ ಕಾಮಸೂತ್ರ ಚಿತ್ರ ಪ್ರದರ್ಶಿಸುವುದಕ್ಕೂ ಮುನ್ನ ಅವರು ಈ ಗೆಟಪ್ ನಲ್ಲಿ ಎಲ್ಲರ ಕಣ್ಣಿಗೆ ಬಿದ್ದದ್ದು ವಿಶೇಷ.


ಚಿತ್ರ ಪ್ರದರ್ಶನಕ್ಕೂ ಮುನ್ನವೇ ಶೆರ್ಲಿನ್ ಎಲ್ಲರನ್ನೂ ಕೆಣಕಿದರು. ಇನ್ನು 'ಕಾಮಸೂತ್ರ 3d' ಚಿತ್ರ ನೋಡಿದವರ ಪಾಡು ಏನಾಯಿತೋ ಏನೋ ತಿಳಿದುಬಂದಿಲ್ಲ. 66ನೇ ಕ್ಯಾನೆ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶೆರ್ಲಿನ್ ಅಭಿನಯ ಚೊಚ್ಚಲ ಚಿತ್ರ ಪ್ರದರ್ಶನ ಕಾಣುತ್ತಿದೆ.

ತಮ್ಮ ಚೊಚ್ಚಲ ಅಭಿನಯದ ಚಿತ್ರವನ್ನು ಪ್ರೊಮೋಟ್ ಮಾಡಿಕೊಳ್ಳಲು ಶೆರ್ಲಿನ್ ಪಾರದರ್ಶಕ ಉಡುಪು ತೊಟ್ಟು ಬಂದದ್ದು ವಿಶೇಷವಾಗಿತ್ತು. ಕಡುಗಪ್ಪು ಪಾರದರ್ಶಕ ಮೇಲುಡುಗೆ, ಅದಕ್ಕೆ ಒಪ್ಪುವಂತಹ ರಾಜಸ್ಥಾನದ ಆಭರಣ ಎಲ್ಲರ ಕಣ್ಣುಕುಕ್ಕುತ್ತಿದ್ದವು.

'ಕಾಮಸೂತ್ರ 3d' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು ರೂಪೇಶ್ ಪೌಲ್. ಚಿತ್ರದ ಪ್ರದರ್ಶನಕ್ಕಾಗಿ ಮೇ 15ರಿಂದ ಕ್ಯಾನೆಯಲ್ಲಿ ಚಿತ್ರತಂಡ ಉಳಿದುಕೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ರೂಪೇಶ್, ಹಾಲಿವುಡ್ ತಾರೆಯೊಂದಿಗೆ ಮತ್ತೊಂದು ಕಾಮಸೂತ್ರ ಚಿತ್ರ ಮಾಡುವುದಾಗಿ ತಿಳಿಸಿದ್ದಾರೆ. ಆ ಚಿತ್ರಕ್ಕೆ ಕಾಮಸೂತ್ರ 4d ಎಂದು ಹೆಸರಿಡುವುದಾಗಿಯೂ ಹೇಳಿದ್ದಾರೆ.

English summary
Actress Sherlyn Chopra, who posed for adult magazine Playboy last year, wore a transparent ensemble for a red carpet event at the 66th Cannes International Film Festival. She is there to promote her debut film "Kamasutra 3D" with the team.
Please Wait while comments are loading...