»   » ನೈಟ್ ಕ್ಲಬ್ ನಲ್ಲಿ ಸೆಕ್ಸಿ ಬ್ಯೂಟಿ ರಿಹಾನಾ ಮೇಲೆ ದಾಳಿ

ನೈಟ್ ಕ್ಲಬ್ ನಲ್ಲಿ ಸೆಕ್ಸಿ ಬ್ಯೂಟಿ ರಿಹಾನಾ ಮೇಲೆ ದಾಳಿ

Posted By:
Subscribe to Filmibeat Kannada

ಪಾಪ್ ತಾರೆ ರಿಹಾನಾ ಮೇಲೆ ಅಭಿಮಾನಿಯೊಬ್ಬ ದಾಳಿ ಮಾಡಿದ ಘಟನೆ ಲಂಡನ್ ನಲ್ಲಿ ನಡೆದಿದೆ. ನೈಟ್ ಕ್ಲಬ್ ನಿಂದ ಆಕೆ ಹಿಂತಿರುಗುತ್ತಿರಬೇಕಾದರೆ ಈ ಘಟನೆ ನಡೆದಿದ್ದು, ಆಕೆಯ ಮೊಳಕಾಲಿಗೆ ಬಲವಾದ ಪೆಟ್ಟು ಬಿದ್ದಿದೆ.

ಇಪ್ಪತ್ತ ನಾಲ್ಕರ ಹರೆಯದ ರಿಹಾನಾ ತನ್ನ ಗೆಳೆತಿಯೊಂದಿಗೆ ಹಿಂತಿರುಗುತ್ತಿರಬೇಕಾದರೆ ಅಭಿಮಾನಿಯೊಬ್ಬ ಆಕೆಯ ಮೇಲೆ ಎನರ್ಜಿ ಡ್ರಿಂಗ್ ಬಾಟಲ್ ಎಸೆದಿದ್ದಾನೆ. ಆ ಬಾಟಲಿ ಸೀದಾ ಆಕೆಯ ಮೊಳಕಾಲಿಗೆ ಬಡಿದಿದೆ. ಬಾಟಲಿ ಬಿದ್ದ ರಭಸಕ್ಕೆ ಗಾಯವಾಗಿದ್ದು ರಕ್ತಸ್ರಾವವೂ ಆಗಿದೆ.

Rihana injured by fan

ಲೋಹದ ಬಾಟಲಿಯಾದ ಕಾರಣ ಅದರ ಹೊಡೆತಕ್ಕೆ ರಿಹಾನಾ ತತ್ತರಿಸಿದ್ದಾರೆ. ಕೂಡಲೆ ಆಕೆಯನ್ನು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ ದಾಳಿ ಮಾಡಿದ ವ್ಯಕ್ತಿ ಇನ್ನೂ ಸಿಕ್ಕಿಲ್ಲ. ಆತನಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.

ಆದರೆ ರಿಹಾನಾ ಅವರ ಬಾಡಿಗಾರ್ಡ್ ದಾಳಿ ಮಾಡಿದ ವ್ಯಕ್ತಿಯನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದನಾದರೂ ಸಾಧ್ಯವಾಗಿಲ್ಲ. ಆತನೂ ಬಿದ್ದು ಗಾಯಗೊಂಡಿದ್ದಾನೆ. ಬಾಟಲಿ ಎಸೆದವ ರಿಹಾನಾ ಮಾಜಿ ಬಾಯ್ ಫ್ರೆಂಡ್ ಕ್ರಿಸ್ ಬ್ರೌನ್ ಬಗ್ಗೆ ಜೋರಾಗಿ ಕೂಗಿ ಅದೇನೋ ಹೇಳಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಹಿಂದೆ 2009ರಲ್ಲಿ ರಿಹಾನಾ ಮೇಲೆ ಬ್ರೌನ್ ದೈಹಿಕವಾಗಿ ಹಲ್ಲೆ ಮಾಡಿದ ಆರೋಪಗಳು ಇವೆ. ಸದ್ಯಕ್ಕೆ ಬ್ಯಾಸ್ಕೆಟ್ ಬಾಲ್ ಕ್ರೀಡಾಪಟು ಜೂನಿಯರ್ ಸ್ಮಿತ್ ಜೊತೆ ರಿಹಾನಾ ಡೇಟಿಂಗ್ ಮಾಡುತ್ತಿದ್ದಾರೆ. ಈ ಬಗ್ಗೆ ಹಾಲಿವುಡ್ ನಲ್ಲಿ ಭಾರಿ ಗುಸುಗುಸು ಸುದ್ದಿಗಳು ಹರಿದಾಡುತ್ತಿವೆ.

English summary
Pop singer Rihanna was forced to seek medical attention after a fan threw a bottle of energy drink Lucozade at her due to which she fell and hurt her knee. It happened when the 24-year-old was leaving a night club here with her model friend Cara Delevingne Saturday night.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada