»   » ಸೀಕ್ರೆಟ್ ಫ್ಯಾಷನ್ ಶೋನಲ್ಲಿ ಧುಮ್ಮುಕ್ಕಿದ ಸೌಂದರ್ಯ

ಸೀಕ್ರೆಟ್ ಫ್ಯಾಷನ್ ಶೋನಲ್ಲಿ ಧುಮ್ಮುಕ್ಕಿದ ಸೌಂದರ್ಯ

Posted By: ರವಿಕಿಶೋರ್
Subscribe to Filmibeat Kannada

ಹಲವಾರು ಫ್ಯಾಷನ್ ಶೋಗಳನ್ನು ನೋಡಿರುತ್ತೀರಿ, ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಬಳ್ಳಿಯಂತೆ ಬಳುಕುವ ಬಾಲೆಯರನ್ನು ಕಣ್ತುಂಬಿಕೊಂಡಿರುತ್ತೀರಾ. ಆದರೆ ವಿಕ್ಟೋರಿಯಾಸ್ ಸೀಕ್ರೆಟ್ ಫ್ಯಾಷನ್ ಶೋ ಎಂದಾದರೂ ನೋಡಿದ್ದರೆ ಮನಸ್ಸು ಚಿಟ್ಟೆಯಂತೆ ಹಾರಾಡುತ್ತದೆ.

ಲಂಡನ್ ನಗರದಲ್ಲಿ ಪ್ರತಿವರ್ಷ ನಡೆದುಕೊಂಡು ಬರುತ್ತಿರುವ ಶೋ ಇದು. ಈ ಬಾರಿಯೂ ಹಲವಾರು ತಾರೆಗಳು ಶೋನಲ್ಲಿ ಸೊಂಟ ಬಳುಕಿಸಲಿದ್ದಾರೆ. ಈ ಶೋನ ವಿಶೇಷತೆ ಎಂದರೆ ಹೆಸರೇ ಹೇಳುವಂತೆ ಇದೊಂದು ಒಳಉಡುಪುಗಳನ್ನು ಪ್ರದರ್ಶಿಸುವ ಶೋ. ಈ ಶೋನಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ ಎಂಬುದೂ ಒಂದು ರಹಸ್ಯ.

ಈ ಬಾರಿ ಯಾರೆಲ್ಲಾ ತಾರೆಗಳು ವೇದಿಕೆ ಮೇಲೆ ಹೆಜ್ಜೆ ಹಾಕಬಹುದು ಎಂಬ ರಹಸ್ಯ ಬಯಲಾಗಿದೆ. ಹದಿಮೂರು ದೇಶಗಳ 27 ರೂಪದರ್ಶಿಯರು ಇಲ್ಲಿ ತಮ್ಮ ಒನಪು ಒಯ್ಯಾರ ತೋರಲಿದ್ದಾರೆ. ಇವರಲ್ಲಿ ಐದು ಮಂದಿ ತಾಯಂದಿರು ಎಂಬುದು ವಿಶೇಷ.

ಏಂಜಲ್ಸ್, ಅಲೆಸ್ಸಾಂಡ್ರಾ ಆಂಬ್ರೋಸಿಯೋ ಹಾಗೂ ಆಡ್ರಿಯಾನಾ ಲಿಮಾ ಈ ಶೋನಲ್ಲಿ ಕಾಣಿಸುತ್ತಿರುವ ಎಂದಿನ ರೂಪದರ್ಶಿಯರು. ಇವೆರೆಲ್ಲಾ 2 ದಶಲಕ್ಷ ಡಾಲರ್ ಬೆಲೆ ಬಾಳುವ ಬ್ರಾ ಧರಿಸಿ ತಮ್ಮ ಅಂದಚೆಂದ ತೋರಲಿದ್ದಾರೆ. ಏನಿದೆ ಈ ಬ್ರಾನಲ್ಲಿ ಅಂತಹ ವಿಶೇಷ ಎಂದರೆ ವಜ್ರ ವೈಡೂರ್ಯಗಳಿಂದ ಮಾಡಲಾಗಿದೆಯಂತೆ.

ಲಂಡನ್ ಕಾಲಮಾನದ ಪ್ರಕಾರ ಮಂಗಳವಾರ ರಾತ್ರಿ ವಿಕ್ಟೋರಿಯಾಸ್ ಸೀಕ್ರೆಟ್ ಫ್ಯಾಶನ್ ಶೋ ರಾತ್ರಿ ಆರಂಭವಾಗಲಿದೆ. ಆದರೆ ಈ ಶೋ ಪ್ರಸಾರವಾಗುವುದು ಮಾತ್ರ ಡಿಸೆಂಬರ್ 11ರಂದು ರಾತ್ರಿ 7.30ಕ್ಕೆ ಫಾಕ್ಸ್ 8 ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಈ ಬ್ರಾ ಬೆಲೆ 2 ದಶಲಕ್ಷ ಡಾಲರ್
  

ಈ ಬ್ರಾ ಬೆಲೆ 2 ದಶಲಕ್ಷ ಡಾಲರ್

ರೂಪದರ್ಶಿ ಏಂಜಲ್ ಅವರು ತೊಡಲಿರುವ ಫ್ಯಾಂಟಸಿ ಬ್ರಾ ಇದು. ಇದರ ಬೆಲೆ 2 ದಶಲಕ್ಷ ಡಾಲರ್.

ವಜ್ರಖಚಿತ ಫ್ಯಾಂಟಸಿ ಬ್ರಾ ಇದು
  

ವಜ್ರಖಚಿತ ಫ್ಯಾಂಟಸಿ ಬ್ರಾ ಇದು

ಏಂಜಲ್ ಅಲೆಸ್ಸಾಂಡ್ರಾ ಆಂಬ್ರೋಸ್ ಅವರು ವಜ್ರಖಚಿತ ಫ್ಯಾಂಟಸಿ ಬ್ರಾವನ್ನೂ ಶೋನಲ್ಲಿ ಪ್ರದರ್ಶಿಸಲಿದ್ದಾರೆ.

ಶೋಹೆಜ್ಜೆ ಹಾಕುತ್ತಿರುವ ಹೊಸ ಬೆಡಗಿ
  

ಶೋಹೆಜ್ಜೆ ಹಾಕುತ್ತಿರುವ ಹೊಸ ಬೆಡಗಿ

ಆಡಂ ಲಿವೈನ್ಸ್ ಪತ್ನಿ ಹಾಗೂ 2009ರ ವಿಕ್ಟೋರಿಯಾಸ್ ಸೀಕ್ರೆಟ್ ಏಂಜಲ್ ಈ ಬಾರಿ ಫ್ಯಾಷನ್ ಶೋಹೆಜ್ಜೆ ಹಾಕುತ್ತಿರುವ ಹೊಸ ಬೆಡಗಿ.

ಸೌಂದರ್ಯ ತೆರೆದಿಡಲಿರುವ ಕ್ಯಾನ್ ಡೈಸ್
  

ಸೌಂದರ್ಯ ತೆರೆದಿಡಲಿರುವ ಕ್ಯಾನ್ ಡೈಸ್

ಕಳೆದ ಬಾರಿ ಈ ಆಕರ್ಷಕ ಬ್ರಾ ಪ್ರದರ್ಶಿಸಿದ್ದ ಕ್ಯಾನ್ ಡೈಸ್ ಈ ಬಾರಿಯೂ ತಮ್ಮ ಸೌಂದರ್ಯವನ್ನು ತೆರೆದಿಡಲಿದ್ದಾರೆ.

ಇಪ್ಪತ್ತೈದರ ಹರೆಯದ ತಾಜಾ ಮುಖ
  

ಇಪ್ಪತ್ತೈದರ ಹರೆಯದ ತಾಜಾ ಮುಖ

ಇಪ್ಪತ್ತೈದರ ಹರೆಯದ ತಾಜಾ ಮುಖ ಎಡ್ ಮೋಂಟನ್ ಸಹ ಈ ಬಾರಿ ಶೋನಲ್ಲಿ ಹೆಜ್ಜೆ ಹಾಕಲಿದ್ದಾರೆ.

ಪ್ರಮುಖ ಆಕರ್ಷಣೆಯಾಗಿ ನಿಲ್ಲಲಿರುವ ಬೆಡಗಿ
  

ಪ್ರಮುಖ ಆಕರ್ಷಣೆಯಾಗಿ ನಿಲ್ಲಲಿರುವ ಬೆಡಗಿ

ಹುಟ್ಟಿದ್ದು ಉಜ್ಬೇಕಿಸ್ತಾನದಲ್ಲಿ ಬೆಳೆದದ್ದು ತಾತರ್ ಸ್ತಾನ್ ಗಣತಂತ್ರ ರಾಷ್ಟ್ರದಲ್ಲಿ. ಆಂಡ್ರಿನಾ ಲಿಮಾ ಹಾಗೂ ನಟಾಶಾ ಪೋಲಿ ಅವರನ್ನು ಹೋಲುವ ಈ ಬೆಡಗಿ ಈ ಬಾರಿ ಪ್ರಮುಖ ಆಕರ್ಷಣೆಯಾಗಿ ನಿಲ್ಲಲಿದ್ದಾರೆ.

ಇನ್ನೊಬ್ಬ ಸೀಕ್ರೆಟ್ ಏಂಜಲ್
  

ಇನ್ನೊಬ್ಬ ಸೀಕ್ರೆಟ್ ಏಂಜಲ್

ಈ ಬಾರಿ ಬೆಕ್ಕಿನ ನಡಿಗೆ ಹಾಕಲಿರುವ ಇನ್ನೊಬ್ಬ ಸೀಕ್ರೆಟ್ ಏಂಜಲ್.

ಈಜುಡುಗೆಯೂ ಉಂಟು
  

ಈಜುಡುಗೆಯೂ ಉಂಟು

ಕೇವಲ ಒಳಉಡುಪುಗಳಷ್ಟೇ ಅಲ್ಲದೆ ಈ ಬಾರಿ ಈಜುಡುಗೆಯೂ ಎಲ್ಲರ ಕಣ್ಣು ಕುಕ್ಕಲಿದೆ.

ಡಚ್ ಸುಂದರಿ ಮೈಮಾಟ
  

ಡಚ್ ಸುಂದರಿ ಮೈಮಾಟ

ಈ ಬಾರಿ ಹೆಜ್ಜೆ ಹಾಕುತ್ತಿರುವ ಡಚ್ ಸುಂದರಿ.

ಬಿಕಿನಿಯಲ್ಲಿ ಎಲ್ಲರ ಗಮನಸೆಳೆಯಲಿದ್ದಾರೆ
  

ಬಿಕಿನಿಯಲ್ಲಿ ಎಲ್ಲರ ಗಮನಸೆಳೆಯಲಿದ್ದಾರೆ

2008ರಿಂದ ವಿಕ್ಟೋರಿಯಾಸ್ ಸೀಕ್ರೆಟ್ ಏಂಜಲ್ ಆಗಿ ಹೆಜ್ಜೆ ಹಾಕುತ್ತಿರುವ ಡಚ್ ರೂಪದರ್ಶಿ ಹಾಗೂ ತಾರೆ ಈ ಬಾರಿ ಬಿಕಿನಿಯಲ್ಲಿ ಎಲ್ಲರ ಗಮನಸೆಳೆಯಲಿದ್ದಾರೆ.

ಹತ್ತೊಂಬತ್ತರ ಹರೆಯದ ಬೆಲ್ಜಿಯಂ ಬ್ಯೂಟಿ
  

ಹತ್ತೊಂಬತ್ತರ ಹರೆಯದ ಬೆಲ್ಜಿಯಂ ಬ್ಯೂಟಿ

ಹತ್ತೊಂಬತ್ತರ ಹರೆಯದ ಬೆಲ್ಜಿಯಂ ಬ್ಯೂಟಿ ಈ ಸಲದ ಸೀಕ್ರೆಟ್ ಫ್ಯಾಷನ್ ಶೋನಲ್ಲಿ ತಮ್ಮ ಸೊಂಟ ಬಳುಕಿಸಲಿದ್ದಾರೆ.

English summary
Victoria's Secret Fashion Show 2014 is all set to glam up in London. Before the biggest fashion show kicks off, we are really excited to know who all are going to walk the runway this year for the show. The parade of Angels and supermodels will kick off on Tuesday night London time, but you can catch the broadcast on Thursday December 11 at 7.30pm on Fox 8.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada