For Quick Alerts
  ALLOW NOTIFICATIONS  
  For Daily Alerts

  ರಾಜಕಾರಣಿಗಳ ಜೊತೆ ರಾಸಲೀಲೆ ಮಾಡಿದ ತಾರೆ

  By Rajendra
  |

  ಕೆಲವು ಸಿನಿಮಾ ತಾರೆಗಳ ಅಕ್ರಮ ಲೈಂಗಿಕ ಚಟುವಟಿಕೆಗಳು ಆಗಾಗ ಬಯಲಾಗುತ್ತಲೇ ಇವೆ. ಆದರೆ ಈ ಬಾರಿ ಹಾಲಿವುಡ್ ತಾರೆಯೊಬ್ಬಳು ಲೈಂಗಿಕ ಹಗರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಆಕೆಯ ಹೆಸರು ಝಾಂಗ್ ಝಿಯಾ. ಈಕೆ ಚೀನಾ ಮೂಲದ ಹಾಲಿವುಡ್ ತಾರೆ.

  ಈಕೆಯ ಕ್ರೌಂಚಿಂಗ್ ಟೈಗರ್ ಹಿಡ್ಡನ್ ಡ್ರಾಗನ್ ಚಿತ್ರ ನೆನಪಿರಬಹುದು. ಚೀನಾದ ಪುಡಾರಿ ಬೋ ಕ್ಸಿಲೈ ಜೊತೆ ಈಕೆಯ ಹೆಸರು ಈಗ ಕೇಳಿಬಂದಿದೆ. ಮೂವತ್ತುಮೂರರ ಹರೆಯದ ಈ ತಾರೆ ರಾಜಕಾರಣಿಗಳ ಜೊತೆ ರಾಸಲೀಲೆ ಆಡುತ್ತಾ ಲಕ್ಷಾಂತರ ಡಾಲರ್ ಹಣವನ್ನು ಗಳಿಸಿದ್ದಾರೆ.

  ಈ ರಾಜಕಾರಣಿಗಳ ಹೆಸರಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ಚೀನಾದ ಬೋ ಕ್ಸಿಲೈ. 2007ರಿಂದ 2011ರತನಕ ಈ ರಾಜಕಾರಣಿ ಜೊತೆ ಈಕೆ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದಳು ಎಂದು ಚೀನಾ ಮಾಧ್ಯಮಗಳ ವರದಿ ಹೇಳುತ್ತದೆ.

  ಈ ನಾಲ್ಕು ವರ್ಷಗಳಲ್ಲಿ ಝಾಂಗ್ ಝಿಯಾ ಗಳಿಸಿದ್ದು 100 ಮಿಲಿಯನ್ ಯುಸ್ ಡಾಲರ್. ಆಕೆ ಅಭಿನಯಿಸಿದ ಚಿತ್ರಗಳಿಗಿಂತ ಈ ಮೊತ್ತ ಸಾಕಷ್ಟು ಪಟ್ಟು ದೊಡ್ಡದು. ಆದರೆ ಝಾಂಗ್ ಝಿಯಾ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ.

  ಅತ್ತ ಬೋ ಕ್ಸಿಲೈ ಕೂಡ ಪ್ರಶಸ್ತಿ ವಿಜೇತ ತಾರೆಯೊಬ್ಬಳ ವಿರುದ್ಧ ಈ ರೀತಿ ಸುದ್ದಿ ಹಬ್ಬಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ಬ್ರಿಟಿಷ್ ಉದ್ಯಮಿ ನೀಲ್ ಹಾಯ್‌ವುಡ್ ಎಂಬುವವರ ಅಸ್ವಾಭಿವಿಕ ಸಾವಿಗೆ ಸಂಬಂಧಿಸಿದಂತೆ ಬೋ ಕ್ಸಿಲೈ ವಿರುದ್ಧ ಪ್ರಕರಣ ದಾಖಲಾಗಿದ್ದು ಚೀನಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  ಅಂದಹಾಗೆ ಇತ್ತೀಚೆಗೆ ವೇಶ್ಯಾವಾಟಿಕೆಯಲ್ಲಿ ಕನ್ನಡ ಕಿರುತೆರೆ ತಾರೆಯೊಬ್ಬರು ಸಿಕ್ಕಿಬಿದ್ದದ್ದು. ಹೈಟೆಕ್ ವೇಶ್ಯಾವಾಟಿಕೆಯಲ್ಲಿ ಕನ್ನಡ ಕಿರುತೆರೆ ನಟಿ ರೂಪಾ ಸೇರಿದಂತೆ ನಾಲ್ಕು ಮಂದಿಯನ್ನು ಸಂಜಯನಗರ ಪೊಲೀಸರು ಬಂಧಿಸಿದ್ದರು. ಬೆಂಗಳೂರು ಸಂಜಯನಗರ ಪೊಲೀಸರು ಗುರುವಾರ (ಏ.26) ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ಈ ದಂಧೆ ಬಯಲಾಗಿತ್ತು. ಮುಂದೆ ಓದಿ ಪೂರ್ಣ ಸುದ್ದಿ. (ಏಜೆನ್ಸೀಸ್)

  English summary
  Crouching Tiger Hidden Dragon fame Zhang Ziyi's name is the latest to be dragged in the growing illegal scandals surrounding famous Chinese politician Bo Xilai. The 33-year-old actress is accused of getting millions of dollars to indulge in illegal relations with many of the top politicians, including Bo Xilai, in China.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X