»   » ಸೈಲೆಂಟ್ ಸುನೀಲ 'ಆ ದಿನಗಳ' ನೆನೆದ ಅಗ್ನಿ ಶ್ರೀಧರ್

ಸೈಲೆಂಟ್ ಸುನೀಲ 'ಆ ದಿನಗಳ' ನೆನೆದ ಅಗ್ನಿ ಶ್ರೀಧರ್

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಆಗ್ನಿ ಶ್ರೀಧರ್ ಕ್ಯಾಂಪ್ ನಿಂದ ಹೊಸ ಸಿನಿಮಾ ಸೆಟ್ಟೇರಿದೆ. ಮೊದಲ ಬಾರಿ ನಿರ್ದೇಶಕ ದುನಿಯಾ ಸೂರಿ ಜೊತೆಯಾಗಿರುವ ಅಗ್ನಿ ಶ್ರೀಧರ್, ರಿಯಲ್ ರೌಡಿ 'ಸೈಲೆಂಟ್ ಸುನೀಲ'ನ ನಿಜ ಬದುಕಿನ ಕರಾಳ ಕಥೆಯನ್ನ ತೆರೆಮೇಲೆ ತರುತ್ತಿದ್ದಾರೆ.

  'ಆ ದಿನಗಳು', 'ಎದೆಗಾರಿಕೆ' ಚಿತ್ರಗಳ ನಂತ್ರ ಮತ್ತೊಂದು ರೌಡಿಸಂ ಸಿನಿಮಾ ನಿರ್ಮಾಣ ಮಾಡುತ್ತಿರುವ ಅಗ್ನಿ ಶ್ರೀಧರ್ 'ಸೈಲೆಂಟ್ ಸುನೀಲ'ನ ಬಗ್ಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ವಿಶೇಷ ಸಂದರ್ಶನ ನೀಡಿದ್ದಾರೆ.

  Agni Shridhar Interview on his next venture Silent Sunila

  * ನಿಮ್ಮ 'ಮೇಘ ಮೂವೀಸ್' ಬ್ಯಾನರ್ ನಲ್ಲಿ 'ಸೈಲೆಂಟ್ ಸುನೀಲ' ಚಿತ್ರ ಸಿದ್ಧವಾಗುತ್ತಿದೆ. ರೌಡಿಸಂ ಆಧಾರಿತ ಚಿತ್ರಗಳನ್ನ ನೀವು ಈಗಾಗಲೇ ತೆರೆಗೆ ತಂದಿದ್ದೀರಾ. ಅದೇ ಪಟ್ಟಿಯಲ್ಲಿ ಈಗ ಈ ಚಿತ್ರ. ಆದ್ರೆ, 'ಸೈಲೆಂಟ್ ಸುನೀಲ'ನೇ ಯಾಕೆ?

  - ಸಿನಿಮಾ ಮಾಡಬೇಕು ಅಂತ ಅಂದುಕೊಂಡಿದ್ವಿ. ಅದಕ್ಕೊಂದು ಕಥೆ ಹುಡುಕಾಟದಲ್ಲಿದ್ದಾಗ 'ಸೈಲೆಂಟ್ ಸುನೀಲ' ಬೆಸ್ಟ್ ಅಂತ ನಮಗೆ ಅನಿಸ್ತು.

  * 'ಸೈಲೆಂಟ್ ಸುನೀಲ' ಬದುಕಿನ ಬಗ್ಗೆ ನೀವು ಅಟ್ರ್ಯಾಕ್ಟ್ ಆಗುವುದಕ್ಕೆ ಕಾರಣ?

  - ಸಮಾಜದ ಎಲ್ಲಾ ವಲಯಗಳಲ್ಲೂ ಸರಿ-ತಪ್ಪು ಅನ್ನೋದು ಇದ್ದೇ ಇರುತ್ತದೆ. ಇವತ್ತಿನ ನಮ್ಮ ವ್ಯವಸ್ಥೆಯಲ್ಲಿ ಮಾನವೀಯ ಸಂವೇದನೆ ಅನ್ನೋದು ಏನಿದೆ ಅದನ್ನ ತೆರೆಮೇಲೆ ತರೋದು ನನ್ನ ಆಶಯ. ನನ್ನ 'ಆ ದಿನಗಳು' ಮತ್ತು 'ಎದೆಗಾರಿಕೆ' ಚಿತ್ರಗಳೂ ಕೂಡ ರೌಡಿಸಂ ಕಥೆಗಳೇ. ಅದನ್ನ ಇಲ್ಲೂ ಮುಂದುವರಿಸಿದ್ದೀವಿ. ಸೈಲೆಂಟ್ ಸುನೀಲ ಬದುಕಿನ ಬಗ್ಗೆ ಯಾರೂ ತಿಳಿಯದ ಸತ್ಯ ಹೊರಹಾಕಬೇಕು ಅಂದುಕೊಂಡಿದ್ದೀವಿ.

  Agni Shridhar Interview on his next venture Silent Sunila

  * ನಿಜವಾದ ರೌಡಿ 'ಸೈಲೆಂಟ್ ಸುನೀಲ'ನನ್ನೇ ಕನ್ನಡ ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದೀರಾ. ಯಾರ ಐಡಿಯಾ ಇದು?

  - 'ಸೈಲೆಂಟ್ ಸುನೀಲ' ಚಿತ್ರದ ಬಗ್ಗೆ ಡಿಸ್ಕಷನ್ ನಡೆಯುತ್ತಿದ್ದಾಗ, ಕಥೆಗೆ ಮೂಡ್ ಬೇಕು ಅನ್ನುವ ಕಾರಣಕ್ಕೆ ಸೈಲೆಂಟ್ ಸುನೀಲ ಅವರನ್ನ ಕರೆಸಿದ್ವಿ. ಸುಮನಾ ಕಿತ್ತೂರು was fascinated with that boy. ಇವರ ಕೈಯಲ್ಲೇ ಯಾಕೆ ಆಕ್ಟ್ ಮಾಡಿಸಬಾರದು ಅನ್ನುವ ಐಡಿಯಾ ಬಂದಿದ್ದು ಅಲ್ಲೇ. ಮುಂಚೆ ಸ್ಟಾರ್ ಗಳು ಅಂತ ಪ್ಲಾನ್ ಇತ್ತು. ಆದ್ರೆ, ಸ್ಟಾರ್ಸ್ ಅಂತ ತೆಗೆದುಕೊಂಡರೆ, ಹೊಡೆದಾಟ, ಸಾಂಗ್ ಗಳೆಲ್ಲಾ ನಾವು ತರಬೇಕಾಗುತ್ತೆ. ಸ್ಟಾರ್ ಗಳ ಲಿಮಿಟ್ ನಲ್ಲೇ ನಾವು ಸಿನಿಮಾ ಮಾಡಬೇಕು. ಹಾಗೆ, ಟೈಟಲ್ ಕೂಡ 'ಸೈಲೆಂಟ್ ಸುನೀಲ'. ಸೈಲೆಂಟ್ ಅಂದ್ರೆ, ಯಾರು? ಯಾರು ಜಾಸ್ತಿ ಮಾತಾಡಲ್ಲವೋ ಅವರು. ಅಂಥವರು ನಮಗೆ ಬೇಕಾಗಿತ್ತು. ಟೈಟಲ್ ಮತ್ತು ಪಾತ್ರಕ್ಕೆ ಅವರನ್ನ ಬಿಟ್ಟು ಇನ್ಯಾರು ಸರಿಹೋಗಲ್ಲ ಅಂತ ಅಭಿಪ್ರಾಯ ವ್ಯಕ್ತವಾಯ್ತು. ಮೊದಲು ಆಕ್ಟ್ ಮಾಡೋಕೆ ಆತ ಒಪ್ಪಿಕೊಳ್ಳಲಿಲ್ಲ. ದುನಿಯಾ ಸೂರಿ ಕನ್ವಿನ್ಸ್ ಮಾಡಿದಕ್ಕೆ ಒಪ್ಪಿಕೊಂಡರು.

  * 'ರಿಯಲ್ ರೌಡಿ' ಸೈಲೆಂಟ್ ಸುನೀಲನನ್ನೇ ಹೀರೋ ಮಾಡಿ ಸಿನಿಮಾ ಮಾಡುತ್ತಿರುವುದು ನಿಮ್ಗೆ ರಿಸ್ಕ್ ಅನಿಸೋಲ್ವಾ?

  - ಇಲ್ಲಾ, ಒಂದು ಸಾರಿ ಕೋರ್ಟ್ ಪರ್ಮಿಷನ್ ಕೊಟ್ಟು ಅಪರಾಧಿ ಜೈಲಿನಿಂದ ಹೊರಗಡೆ ಬಂದ ಮೇಲೆ ಆಕ್ಟ್ ಮಾಡೋದು ಬಿಡೋದು ಅವರ ನಿರ್ಧಾರ.

  Agni Shridhar Interview on his next venture Silent Sunila

  * ಈಗಾಗಲೇ ರಿಲೀಸ್ ಆಗಿರುವ ಪ್ರೋಮೋ ತುಂಬಾ ರಿಯಲ್ ಆಗಿದೆ. ಅದೆಲ್ಲಾ 'ಸೈಲೆಂಟ್ ಸುನೀಲ' ಬಾಯಿಂದ ಹೊರಬಂದ ಮಾತುಗಳಾ? ಅಥವಾ ನೀವು ಬರೆದು ಕೊಟ್ಟ ಡೈಲಾಗ್ ಗಳಾ?

  - ತುಂಬಾ 'ರಿಯಲ್' ಆಗಿ ಪ್ರೋಮೋ ಬರಬೇಕು ಅಂತ ನಾವು ಐಡಿಯಾ ಮಾಡಿ ಮಾಡಿಸಿದ್ದು ಅದು. ಫೋನ್ ನಲ್ಲಿ ಮಾತಾಡೋ ಶಾಟ್ಸ್ ಎಲ್ಲಾ ಹೇಳಿ ಮಾಡಿಸಿದ್ದು. ಅವರು ಹೇಳಿರುವ ಕೆಲ ಘಟನೆಗಳೆಲ್ಲಾ ಅವರ ಮಾತುಗಳೇ. [ಮೌನ ಮುರಿದ ರಿಯಲ್ ರೌಡಿ 'ಸೈಲೆಂಟ್ ಸುನೀಲ']

  * ಪ್ರೋಮೋದಲ್ಲಿ ಬಾಲಾಪರಾಧಿ ಆದ ಘಟನೆ. ಮತ್ತು ತಮ್ಮ ತಾಯಿಗೆ ಆದ ನೋವನ್ನ 'ಸೈಲೆಂಟ್ ಸುನೀಲ' ಹೇಳಿದ್ದಾರೆ. ಹಾಗಾದ್ರೆ, ಸಿನಿಮಾದಲ್ಲಿ ಸೆಂಟಿಮೆಂಟ್ ಗೆ ಪ್ರಾಮುಖ್ಯತೆ ಹೆಚ್ಚಿದೆ ಅಂದುಕೊಳ್ಳಬಹುದಾ?

  - ಸೆಂಟಿಮೆಂಟ್ ಇದೆ. ಪ್ರತಿಯೊಬ್ಬ ಅಪರಾಧಿಯಲ್ಲೂ ಒಂದು ನೋವು ಇರುತ್ತೆ. ಇಲ್ಲೂ ಈ ಹುಡುಗ ತನ್ನ ತಾಯಿಗೆ ನೋವಾಯ್ತು ಅನ್ನುವ ಕಾರಣಕ್ಕೆ ಕೊಲೆ ಮಾಡುತ್ತಾನೆ. ಹೀಗಾಗಿ ಎಲ್ಲಾ ಅಂಶಗಳು ಚಿತ್ರದಲ್ಲಿರಲಿವೆ. [ಯಾರೀ 'ಸೈಲೆಂಟ್ ಸುನೀಲ'..? ರಿಯಲ್ 'ರೌಡಿ' ಕಹಾನಿ]

  Agni Shridhar Interview on his next venture Silent Sunila

  * ಇನ್ನೂ ಸೈಲೆಂಟ್ ಸುನೀಲ ಹೆಸರು ಮಾಡಿದ್ದು 'ಬೆಕ್ಕಿನ ಕಣ್ಣು ರಾಜೇಂದ್ರ' ಮರ್ಡರ್ ಕೇಸ್ ನಲ್ಲಿ. ಅದರ ಸತ್ಯಾಸತ್ಯತೆ ನಿಮ್ಮ ಚಿತ್ರದಲ್ಲಿ ಅನಾವರಣವಾಗಲಿದೆಯಾ?

  - ಹೌದು, ಬೆಕ್ಕಿನ ಕಣ್ಣು ರಾಜೇಂದ್ರ ಮರ್ಡರ್ ಕೇಸ್ ನಲ್ಲೇ ಸೈಲೆಂಟ್ ಸುನೀಲ ಸುದ್ದಿ ಮಾಡಿದ್ದು. ಅದಕ್ಕೂ ಮುಂಚೆ ಅವನು ಬಾಲಾಪರಾಧಿ. ನಡೆದ ಘಟನೆಗಳು ಚಿತ್ರದಲ್ಲಿರಲಿವೆ.

  * ಹಾಗಾದ್ರೆ, ಎಲ್ಲಾ ನಿಜ ಘಟನೆಗಳು ನಿಮ್ಮ 'ಸೈಲೆಂಟ್ ಸುನೀಲ' ಚಿತ್ರದಲ್ಲಿ ಪ್ರೇಕ್ಷಕರು ನೋಡಬಹುದು?

  - ಇದು ಡಾಕ್ಯುಮೆಂಟರಿ ಅಲ್ಲ. ನಿಜ ಘಟನೆಗಳನ್ನ ಇದ್ದ ಹಾಗೆ ತೋರಿಸುವುದು ಡಾಕ್ಯುಮೆಂಟರಿ. ಆದ್ರೆ, ನಮ್ಮ ಸಿನಿಮಾದಲ್ಲಿ ಕಮರ್ಶಿಯಲ್ ಅಂಶಗಳು ಇವೆ. ಯಾವುದನ್ನ ಹೇಗೆ ಹೇಳಬೇಕು ಅದನ್ನ ವೈಭವೀಕರಿಸದೆ ಒಳ್ಳೆ ಸಂದೇಶ ನೀಡುವ ಮೂಲಕ ಚಿತ್ರ ಮಾಡುತ್ತಿದ್ದೇವೆ. ಆದಷ್ಟು ಕಾಣದೆ ಇರುವ ಸತ್ಯಗಳನ್ನ ಹೊರತರುವ ಪ್ರಯತ್ನದಲ್ಲಿದ್ದೇವೆ. ಹೀಗಾಗಿ ಇದನ್ನ ಡಾಕ್ಯು-ಫೀಚರ್ ಸಿನಿಮಾ ಅಂತ ಕರೆಯಬಹುದು. [ರೀಲ್ ಮೇಲೆ ಮತ್ತೊಬ್ಬ ರಿಯಲ್ ರೌಡಿಯ ಕರಾಳ ಅಧ್ಯಾಯ]

  Agni Shridhar Interview on his next venture Silent Sunila

  * ನಿಮ್ಮ 'ಮೇಘ ಮೂವೀಸ್' ಬ್ಯಾನರ್ ನ ಪ್ರತಿಭೆ ಸುಮನಾ ಕಿತ್ತೂರು. ಅವರಿಗೆ ನಿರ್ದೇಶನ ಕೈತಪ್ಪಿ ದುನಿಯಾ ಸೂರಿ ಪಾಲಾಗಿದ್ದು ಯಾಕೆ?

  - ನನ್ನ ಬ್ಯಾನರ್ 'ಮೇಘ ಮೂವೀಸ್'ನಲ್ಲಿ ಸುಮನಾ ಕಿತ್ತೂರ್ ಡೈರೆಕ್ಟರ್ ಆಗಿದ್ದವರು. ಅವರು ಈ ಚಿತ್ರವನ್ನ ನಿರ್ದೇಶಿಸಬೇಕಾಗಿತ್ತು. ಆದ್ರೆ, ಅಷ್ಟರಲ್ಲಿ ಅವರು 'ಕಿರಗೂರಿನ ಗಯ್ಯಾಳಿಗಳು' ಸಿನಿಮಾ ಮಾಡುವುದಕ್ಕೆ ತಯಾರಿ ಮಾಡಿಕೊಂಡಿದ್ದರು. ಅದೇ ಸಮಯದಲ್ಲಿ ದುನಿಯಾ ಸೂರಿ ಕೂಡ ನನ್ನ 'ತೊಟ್ಟಿಕ್ಕುತ್ತಲೇ ಇದೆ ನೆತ್ತರು' ಪುಸ್ತಕವನ್ನ ಓದಿ ಅದನ್ನ ಸಿನಿಮಾ ಮಾಡಬಹುದಾ ಅಂತ ನನ್ನ ಬಳಿ ಬಂದು ಕೇಳಿದರು. ಆಗ ನಾವು ಆಯ್ಕೆ ಮಾಡಿಕೊಂಡಿದ್ದು 'ಸೈಲೆಂಟ್ ಸುನೀಲ'ನ ಅಧ್ಯಾಯ.

  Agni Shridhar Interview on his next venture Silent Sunila

  * ದುನಿಯಾ ಸೂರಿ ನಿಮ್ಮ ಕ್ಯಾಂಪ್ ಗೆ ಹೊಸಬರು. ಅವರ ಬಗ್ಗೆ ಹೇಳೋದಾದರೆ.....

  - ಟೆಕ್ನಿಕಲಿ ತುಂಬಾ ಒಳ್ಳೆ ನಿರ್ದೇಶಕ. ಹೀ ಈಸ್ ಮಾರ್ವೆಲಸ್. ತುಂಬಾ ಸರಳ ವ್ಯಕ್ತಿ. ತೆರೆಮೇಲೆ ಏನು ಹೇಳಬೇಕು ಅದನ್ನ ನೀಟಾಗಿ ಹೇಳ್ತಾರೆ. ಐ ಆಮ್ ವೆರಿ ಹ್ಯಾಪಿ. [ಅಗ್ನಿ ಶ್ರೀಧರ್ ಜೊತೆ ದುನಿಯಾ ಸೂರಿ 'ದಾದಾಗಿರಿ']

  * ಇಲ್ಲಿಯವರೆಗೂ ಸೈಲೆಂಟ್ ಸುನೀಲ ಬಿಟ್ಟರೆ, ಚಿತ್ರದಲ್ಲಿ ಇನ್ಯಾರು ಇರಲಿದ್ದಾರೆ ಅಂತ ಗುಟ್ಟಾಗಿದೆ. ಉಳಿದ ಪಾತ್ರವರ್ಗದ ಬಗ್ಗೆ?

  - ಬಾಕಿ ಆರ್ಟಿಸ್ಟ್ ಗಳ ಬಗ್ಗೆ ನಾನು ಮಾತನಾಡೋಕೆ ಹೋಗಲ್ಲ. ಅದೆಲ್ಲವೂ ನಿರ್ದೇಶಕ ದುನಿಯಾ ಸೂರಿ ಕೈಯಲ್ಲಿದೆ. ಅವರೇ ಡಿಸೈಡ್ ಮಾಡುತ್ತಾರೆ. ಆದ್ರೆ, ಲೀಡ್ ರೋಲ್ ಮಾತ್ರ ಸುನೀಲ.

  Agni Shridhar Interview on his next venture Silent Sunila

  * ನೀವು ಡೈರೆಕ್ಟರ್ ಕ್ಯಾಪ್ ತೊಟ್ಟು ವರ್ಷಗಳಾಗಿವೆ. ನಿಮ್ಮ ನಿರ್ದೇಶನದ ಚಿತ್ರಕ್ಕೋಸ್ಕರ ಅಭಿಮಾನಿಗಳು ಕೂಡ ಕಾಯ್ತಿದ್ದಾರೆ. ಪ್ರೊಡಕ್ಷನ್ ಬಿಟ್ಟು ನಿರ್ದೇಶನದಿಂದ ದೂರ ಉಳಿಯೋಕೆ ಕಾರಣ?

  - ಇಲ್ಲಾ. ನಾನು ಯಾವುದೇ ಕೆಲಸ ಮಾಡಿದರೂ, ಅದ್ರಲ್ಲಿ ಮುಳುಗಿ ಹೋಗುತ್ತೇನೆ. ಕಾಟಾಚಾರಕ್ಕೆ ಯಾವುದನ್ನೂ ಮಾಡಲ್ಲ. ಮುಂಚೆ ಕೂಡ ಒಂದು ಚಿತ್ರ ಡೈರೆಕ್ಟ್ ಮಾಡಿದ್ದೆ. ನಿರ್ದೇಶನಕ್ಕೆ ಇಳಿದರೆ ಅದರಲ್ಲಿ ಡೀಪ್ ಆಗಿ ಹೋಗುತ್ತೇನೆ. ಬೇರೆ ಕೆಲಸಗಳೂ ತುಂಬಾ ಇವೆ. ಆದ್ರಿಂದ ನಿರ್ದೇಶನ ನನಗೆ ಈಗ ಆಗೋಲ್ಲ.

  * 'ಸೈಲೆಂಟ್ ಸುನೀಲ' ಚಿತ್ರದ ಶೂಟಿಂಗ್ ಗೆ ಚಾಲನೆ ಯಾವಾಗ?

  - ಸೂರಿ ಈಗ 'ದೊಡ್ಮನೆ ಹುಡುಗ' ಚಿತ್ರದಲ್ಲಿ ಬಿಜಿಯಿದ್ದಾರೆ. ಅದು ಮುಗಿದ ಮೇಲೆ ಇದಕ್ಕೆ ಚಾಲನೆ. ಒಂದು ಟೈಮ್ ಗೆ ಸೂರಿ ಒಂದೇ ಸಿನಿಮಾ ಮಾಡೋದು. ಅಟ್ ಎ ಟೈಮ್ ಎರೆಡೆರಡು ಸಿನಿಮಾ ಮಾಡೋಲ್ಲ.

  ಸಂದರ್ಶನ : ಹರ್ಷಿತಾ ನಾಗರಾಜ್

  English summary
  Rowdysheeter Silent Sunila is making his onscreen debut with the movie in his name. Agni Shridhar being the producer, has shared few interesting facts about the movie with Filmibeat Kannada. Here is an interview of Agni Shridhar.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more