twitter
    For Quick Alerts
    ALLOW NOTIFICATIONS  
    For Daily Alerts

    ಸಂದರ್ಶನ : ಮೇಕಿಂಗ್ ಮಾಂತ್ರಿಕ ಸತ್ಯ ಹಗಡೆ ಸಿನಿಮಾ ಜರ್ನಿ

    By Naveen
    |

    ಕ್ಯಾಮರಾ ಮ್ಯಾನ್ ಗಳನ್ನು ಒಂದು ಸಿನಿಮಾದ ಕಣ್ಣು ಅಂತ ಕರೆಯುತ್ತಾರೆ. ಯಾವಾಗಲು ಕ್ಯಾಮರಾ ಹಿಂದೆ ಇರುವ ಇವರು ಕಲಾವಿದರನ್ನು ಲಕ್ಷಾಂತರ ಜನರಿಗೆ ತೋರಿಸುತ್ತಾರೆ. ಆದರೆ ಅನೇಕ ಬಾರಿ ಅಂತಹ ಕ್ಯಾಮರಾ ಮ್ಯಾನ್ ಗಳು ಜನರಿಗೆ ಕಾಣಿಸುವುದೇ ಇಲ್ಲ.

    ಕನ್ನಡದಲ್ಲಿ ಸದ್ಯ ಇರುವ ಟಾಪ್ ಸಿನಿಮಾಟ್ರೋಗ್ರಾಫರ್ ಗಳಲ್ಲಿ ಸತ್ಯಹೆಗಡೆ ಕೂಡ ಒಬ್ಬರು. ದುನಿಯಾ, ಇಂತಿ ನಿನ್ನ ಪ್ರೀತಿಯ, ರಾಟೆ, ಕೆಂಡಸಂಪಿಗೆ, ಜಾಕಿ, ಯೂಟರ್ನ್, ಮೈನಾ, ಹುಡುಗರು ಹೀಗೆ ಕನ್ನಡದಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿರುವ ಸತ್ಯ ಹೆಗಡೆ ಈಗ ಕಾಲಿವುಡ್ ಪ್ರವೇಶ ಮಾಡಿದ್ದಾರೆ. ರಮೇಶ್ ಅರವಿಂದ್ ನಿರ್ದೇಶನದ 'ಬಟರ್ ಫ್ಲೈ' ಚಿತ್ರಕ್ಕೆ ಸತ್ಯ ಕ್ಯಾಮರಾ ಹಿಡಿದಿದ್ದಾರೆ. ಈ ಚಿತ್ರದ ತಮಿಳು ವರ್ಷನ್ ಗೆ ಸಹ ಅವರೇ ಛಾಯಗ್ರಾಹಕರಾಗಿದ್ದು, ಈ ಮೂಲಕ ತಮಿಳು ಚಿತ್ರರಂಗಕ್ಕೆ ಸತ್ಯ ಕಾಲಿಟ್ಟಿದ್ದಾರೆ.

    ಜಾಸ್ತಿ ಮಾತನಾಡದೆ ಯಾವಾಗಲೂ ತಮ್ಮ ಕೆಲಸದ ಮೂಲಕವೇ ಮಾತನಾಡುವ ಸತ್ಯ ಹೆಗಡೆ ಅಪರೂಪಕ್ಕೆ ಹೆಚ್ಚು ಮಾತನಾಡಿದ್ದಾರೆ. ಅಂದಹಾಗೆ, 'ಫಿಲ್ಮಿಬೀಟ್ ಕನ್ನಡ'ಕ್ಕೆ ಸತ್ಯ ಹೆಗಡೆ ಸಂದರ್ಶನ ನೀಡಿದ್ದು, ಇದರಲ್ಲಿ ತಮ್ಮ ಸಿನಿ ಜರ್ನಿಯ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

    ನಿಮ್ಮ ಮೊದಲ ಸಿನಿಮಾ.. ಮೊದಲು ಕ್ಯಾಮರಾ ಹಿಡಿದಿದ್ದು ಯಾವಾಗ..?

    ನಿಮ್ಮ ಮೊದಲ ಸಿನಿಮಾ.. ಮೊದಲು ಕ್ಯಾಮರಾ ಹಿಡಿದಿದ್ದು ಯಾವಾಗ..?

    ''ನನ್ನ ಮೊದಲ ಸಿನಿಮಾ 2002 ರಲ್ಲಿ ಬಂದ 'ತಾಳಿ ಕಟ್ಟವ ಶುಭ ವೇಳೆ'. ಅದಕ್ಕೆ ಹಿಂದೆ 'ಸ್ಪರ್ಶ' ಸೇರಿದಂತೆ ಕೆಲವು ಚಿತ್ರಗಳಲ್ಲಿ ಅಸಿಸ್ಟೆಂಟ್ ಆಗಿದ್ದೆ. ಆ ಸಿನಿಮಾದಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿಯೇ ಎರಡು ಕ್ಯಾಮರಾ ಬಳಿಸಿದ್ವಿ. ಒಂದು ಕ್ಯಾಮರಾ ವೇಣು ಸರ್ ಮತ್ತೊಂದು ಕ್ಯಾಮರಾ ನಾನು ನಿರ್ವಹಿಸಿದೆ. ಅದೇ ರೀತಿ ಉಪೇಂದ್ರ ಅವರ 'ಹೆಚ್. ಟು.ಓ' ಸಿನಿಮಾದಲ್ಲಿಯೂ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದೆ. ಈ ಎರಡು ಚಿತ್ರಗಳು ನನಗೆ ಕಲಿಯುವುದಕ್ಕೆ ತುಂಬ ಅನುಕೂಲ ಮಾಡಿ ಕೊಟ್ಟಿತ್ತು.''

    ಮೊದಲಿನಿಂದ ಸಿನಿಮಾಟೋಗ್ರಾಫಿ ಆಗುವ ಆಸೆ ಇತ್ತ..?

    ಮೊದಲಿನಿಂದ ಸಿನಿಮಾಟೋಗ್ರಾಫಿ ಆಗುವ ಆಸೆ ಇತ್ತ..?

    ''ನಾನು ಆಕಸ್ಮಿಕವಾಗಿ ಕ್ಯಾಮರಾ ಮ್ಯಾನ್ ಆದೆ. ನಮ್ಮ ಮನೆಯಲ್ಲಿ ಸಿನಿಮಾ ಬ್ಯಾಗ್ರೌಂಡ್ ಯಾರು ಇಲ್ಲ. ನಾನು ಸಿನಿಮಾಗಳನ್ನು ನೋಡುತ್ತಿದೆ ಅಷ್ಟೇ. ಸಣ್ಣ ಪುಟ್ಟ ಫೋಟೋಗ್ರಾಫಿಗೆ ಅಂತಲೂ ನಾನು ಕ್ಯಾಮರಾ ತೆಗೆದುಕೊಂಡಿರಲಿಲ್ಲ. ದೇವರ ದಯೇಯಿಂದ ನಾನು ಇಲ್ಲಿಯವರಗೆ ಬಂದೆ. ಓದುವಾಗ ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್ ಮಾಡೋಣ ಅಂತ ಇದ್ದೇ, ಆದರೆ ನನ್ನ ಮಾರ್ಕ್ ಗೆ ಸೀಟ್ ಸಿಗದಿದ್ದಾಗ ಡಿಪ್ಲೋಮಾ ಇನ್ ಸಿನಿಮಾಟೋಗ್ರಾಫಿ ಮಾಡಿದೆ. ನನ್ನ ಅದೃಷ್ಟಕ್ಕೆ ಕಾಲೇಜು ಮುಗಿದ ನೆಕ್ಟ್ ಡೇ ಸಿನಿಮಾದಲ್ಲಿ ಕೆಲಸ ಶುರು ಮಾಡಿದೆ.''

    ಕನ್ನಡದ ಟಾಪ್ ಛಾಯಗ್ರಾಹಕ ರಲ್ಲಿ ನೀವು ಕೂಡ ಒಬ್ಬರಾಗಿದ್ದೀರಿ. ಇದು ಖುಷಿ ಕೊಟ್ಟಿದೆಯಾ?

    ಕನ್ನಡದ ಟಾಪ್ ಛಾಯಗ್ರಾಹಕ ರಲ್ಲಿ ನೀವು ಕೂಡ ಒಬ್ಬರಾಗಿದ್ದೀರಿ. ಇದು ಖುಷಿ ಕೊಟ್ಟಿದೆಯಾ?

    ''ಟಾಪ್ ಅಂತ ಏನು ಇಲ್ಲ... ಎಲ್ಲರೂ ಕ್ಯಾಮರಾ ಮ್ಯಾನ್ ಚೆನ್ನಾಗಿ ಮಾಡುತ್ತಿದ್ದಾರೆ. ನನಗೆ ಒಳ್ಳೆಯ ನಿರ್ದೇಶಕರು, ಒಳ್ಳೆಯ ಸ್ನೇಹಿತರು ಸಿಕ್ಕಿರುವುದರಿಂದ ಒಳ್ಳೆಯ ಸಿನಿಮಾಗಳು ಸಿಕ್ಕಿತು ಅಷ್ಟೆ.''

    ಕ್ಯಾಮರಾ ಹಿಂದೆ ಇದ್ದರು ಸತ್ಯಹಗಡೆ ಎಂಬ ನಿಮ್ಮ ಬ್ರಾಂಡ್ ಕ್ರಿಯೇಟ್ ಮಾಡಿಬಿಟ್ಟಿದ್ದೀರಾ ಅದು ಹೇಗೆ ಸದ್ಯ ಆಯ್ತು?

    ಕ್ಯಾಮರಾ ಹಿಂದೆ ಇದ್ದರು ಸತ್ಯಹಗಡೆ ಎಂಬ ನಿಮ್ಮ ಬ್ರಾಂಡ್ ಕ್ರಿಯೇಟ್ ಮಾಡಿಬಿಟ್ಟಿದ್ದೀರಾ ಅದು ಹೇಗೆ ಸದ್ಯ ಆಯ್ತು?

    ''ದುನಿಯಾ' ಚಿತ್ರದಿಂದ ನಾನು ಕ್ಯಾಮರಾ ಮ್ಯಾನ್ ಆಗಿ ಎಲ್ಲರ ಗಮನ ಸೆಳೆದೆ. ಅದರ ನಂತರ ನನ್ನ ಮತ್ತು ನಿರ್ದೇಶಕ ಸೂರಿ ಅವರ ಸಿನಿಮಾಗಳು, ನಾಗಶೇಖರ್, ಯೋಗರಾಜ್ ಭಟ್, ಎ.ಪಿ.ಅರ್ಜುನ್ ಅವರ ಚಿತ್ರಗಳು ಹೀಗೆ ಒಳ್ಳೆಯ ಅವಕಾಶಗಳು ಸಿಗುತ್ತಾ ಬಂತು. ಕನ್ನಡದಲ್ಲಿ ಬಿಜಿ ಇರುವಾಗಲೇ ತಮಿಳು ತೆಲುಗು ಭಾಷೆಯ ಕೆಲ ಸಣ್ಣ ಸಿನಿಮಾಗಳ ಅವಕಾಶ ಬಂತು. ಇಲ್ಲಿಯೇ ಒಳ್ಳೆಯ ಅವಕಾಶ ಇರುವಾಗ ಅಲ್ಲಿಗೆ ಹೋಗುವುದು ಬೇಡ ಅಂತ ಇದ್ದೇ. ಆದರೆ ಈಗ ಕನ್ನಡದ ಜೊತೆ ತಮಿಳು ಚಿತ್ರವನ್ನು ಮಾಡುವ ಅವಕಾಶ ಸಿಕ್ಕಿದೆ. ಅದು ಒಂದು ರೀತಿಯ ಸಮಾಧಾನ ತಂದಿದೆ.''

    ಸೂರಿ ನಿರ್ದೇಶನ ಎಲ್ಲ ಚಿತ್ರಗಳಲ್ಲಿ ನೀವೆ ಕ್ಯಾಮರಾ ಮ್ಯಾನ್. ನಿಮ್ಮಿಬ್ಬರ ಚಿತ್ರಗಳು ಮೇಕಿಂಗ್ ಅಷ್ಟು ಚೆನ್ನಾಗಿ ಬರಲು ಕಾರಣ ಏನು?

    ಸೂರಿ ನಿರ್ದೇಶನ ಎಲ್ಲ ಚಿತ್ರಗಳಲ್ಲಿ ನೀವೆ ಕ್ಯಾಮರಾ ಮ್ಯಾನ್. ನಿಮ್ಮಿಬ್ಬರ ಚಿತ್ರಗಳು ಮೇಕಿಂಗ್ ಅಷ್ಟು ಚೆನ್ನಾಗಿ ಬರಲು ಕಾರಣ ಏನು?

    ''ಏನೆಂದರೆ.. ಅವರು ಕಥೆ ಮಾಡಿದ ಮೇಲೆ ಅದರ ಚರ್ಚೆ ಮಾಡುತ್ತೇವೆ. ಲೋಕೆಷನ್ ನೋಡುವುದು ರಿಂದ ಹಿಡಿದು ಪ್ರತಿಯೊಂದು ಬಾರಿ ಸಿನಿಮಾ ಬಗ್ಗೆ ಯೋಚನೆ ಮಾಡುತ್ತೇನೆ. 'ಕೆಂಡಸಂಪಿಗೆ', 'ಜಾಕಿ', 'ಇಂತಿ ನಿನ್ನ ಪ್ರೀತಿಯ' ಸಿನಿಮಾಗಳನ್ನು ಮಾಡುವಾಗ ಬೇರೆ ಏನಾದರೂ ಮಾಡಬೇಕು ಅಂತ ಕೆಲಸ ಮಾಡುತ್ತಾ ಹೋಗಿದ್ದು. ಪ್ರತಿ ಚಿತ್ರದಲ್ಲಿಯೂ ಅವರು ಹೊಸ ಕಥೆ ಹುಡುಕುತ್ತಾ ಇದ್ದರು. ನಾನು ಕೂಡ ಚಿಕ್ಕದಾಗಿ ಏನಾದರೂ ಪ್ರಯತ್ನ ಮಾಡೋಣ ಅಂತ ಮಾಡುತ್ತಿದ್ದೇನೆ.''

    ಕಾಲಿವುಡ್ ನಲ್ಲಿ ಕ್ಯಾಮರಾ ಇಟ್ಟ ಕನ್ನಡದ ಸಿನಿಮಾಟೋಗ್ರಾಫರ್ ಸತ್ಯ ಹೆಗಡೆಕಾಲಿವುಡ್ ನಲ್ಲಿ ಕ್ಯಾಮರಾ ಇಟ್ಟ ಕನ್ನಡದ ಸಿನಿಮಾಟೋಗ್ರಾಫರ್ ಸತ್ಯ ಹೆಗಡೆ

    ಮುಂದೆ ನಿರ್ದೇಶನ ಮಾಡುವ ಆಸೆ ಇದೆಯಾ?

    ಮುಂದೆ ನಿರ್ದೇಶನ ಮಾಡುವ ಆಸೆ ಇದೆಯಾ?

    ''ಸದ್ಯಕ್ಕೆ ಹಾಗೆ ಏನು ಪ್ಲಾನ್ ಇಲ್ಲ. ಇಂದಿನವರೆಗೆ ಹಾಗೆ ನನಗೆ ಅನಿಸಿಲ್ಲ. ಪ್ರತಿ ಸಲ ಒಳ್ಳೆಯ ನಿರ್ದೇಶಕರ ಜೊತೆಗೆ ಕೆಲಸ ಮಾಡುವಾಗ ನಿರ್ದೇಶನ ಎನ್ನುವುದು ಇಷ್ಟೊಂದು ಇದೇಯಾ ಎನಿಸೋಕ್ಕೆ ಶುರು ಆಯ್ತು. ಡೈರೆಕ್ಷನ್ ಎನ್ನುವುದು ಒಂದು ತಪಸ್ಸು. ನನಗೂ ಈ ರೀತಿಯ ನಿರ್ದೇಶಕರು ಸಿಗದಿದ್ದರೆ, ನಾನು ಡೈರೆಕ್ಷನ್ ಮಾಡೋಕ್ಕೆ ಶುರು ಮಾಡುತ್ತಿದನೆನೋ ಗೊತ್ತಿಲ್ಲ. ಆದರೆ ಈ ರೀತಿಯ ನಿರ್ದೇಶಕರು ಸಿಕ್ಕರುವ ಕಾರಣ ಇನ್ನು ಇಷ್ಟೊಂದು ಕೆಲಸ ಕಲಿಯುವುದು ಇದೆ ಎಂದು ಅದರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿಲ್ಲ.''

    ಸಂದರ್ಶನ : ಇಂದಿನ ಸಮಾಜದ ಪ್ರತಿಬಿಂಬವೇ ಈ 'ಬಟರ್ ಫ್ಲೈ'ಸಂದರ್ಶನ : ಇಂದಿನ ಸಮಾಜದ ಪ್ರತಿಬಿಂಬವೇ ಈ 'ಬಟರ್ ಫ್ಲೈ'

    'ಬಟರ್ ಫ್ಲೈ' ಚಿತ್ರದ ಮೂಲಕ ಕಾಲಿಟ್ಟಿದ್ದೀರಾ ಆ ಬಗ್ಗೆ ಹೇಳಿ?

    'ಬಟರ್ ಫ್ಲೈ' ಚಿತ್ರದ ಮೂಲಕ ಕಾಲಿಟ್ಟಿದ್ದೀರಾ ಆ ಬಗ್ಗೆ ಹೇಳಿ?

    ''ನಾನು ರಮೇಶ್ ಸರ್ ಜೊತೆ ಕೆಲಸ ಮಾಡಬೇಕು ಅಂತ ಮುಂಚೆಯಿಂದ ಅಂದುಕೊಳ್ಳುತ್ತಿದೆ. ಒಮ್ಮೆ ಅವರೇ ಈ ರೀತಿಯ ಒಂದು ಸಿನಿಮಾ ಮಾಡೋಣ ಅಂತ ಇದ್ದೇನೆ ಎಂದು ನನಗೆ ಹೇಳಿದಾಗ ಸರಿ ಸರ್ ಮಾಡೋಣ.. ಅಂತ ಶುರು ಮಾಡಿದೆ. ಇದು ರಿಮೇಕ್ ಆದರೂ ಎಷ್ಟೊಂದು ಕನ್ನಡಿಕರಣ ಮಾಡಿ ಇದನ್ನು ರಮೇಶ್ ಸರ್ ಮಾಡಿದ್ದಾರೆ. ಸಾಮಾನ್ಯವಾಗಿ ಒಂದು ಎರಡು ಹಾಡುಗಳಿಗಾಗಿ ನಾವು ವಿದೇಶಕ್ಕೆ ಹೋಗುತ್ತಿದ್ವಿ. ಆದರೆ ಈ ಚಿತ್ರದಲ್ಲಿ ಸಿನಿಮಾದ ಬಹುಪಾಲು ಕಥೆ ಅಲ್ಲಿಯೇ ನಡೆಯುತ್ತದೆ. ಆ ಅನುಭವ ತುಂಬ ಚೆನ್ನಾಗಿತ್ತು.''

    ಸಂದರ್ಶನ : ಒಂಟಿಯಾಗಿ ಹನಿಮೂನ್ ಗೆ ಹೊರಟ 'ಬಟರ್ ಫ್ಲೈ' ಪಾರೂಲ್ಸಂದರ್ಶನ : ಒಂಟಿಯಾಗಿ ಹನಿಮೂನ್ ಗೆ ಹೊರಟ 'ಬಟರ್ ಫ್ಲೈ' ಪಾರೂಲ್

    'ಬಟರ್ ಫ್ಲೈ' ಚಿತ್ರೀಕರಣದ ಅನುಭವ ಹೇಗಿತ್ತು?

    'ಬಟರ್ ಫ್ಲೈ' ಚಿತ್ರೀಕರಣದ ಅನುಭವ ಹೇಗಿತ್ತು?

    ''ಇದು ಹಿರೋಯಿನ್ ಸಿನಿಮಾ. ನಾವು ಸಮಾನ್ಯವಾಗಿ ಫಾರಿನ್ ಗೆ ಹೋದಾಗ ಯಾವ ರೀತಿ ಕಷ್ಟ ಅನುಭವಿಸುತ್ತೇವೆ, ಅದೇ ರೀತಿ ಆ ಹುಡುಗಿ ಪಾತ್ರ ಕೂಡ ಇದೆ. ಅದನ್ನೆಲ್ಲ ಚಿತ್ರದಲ್ಲಿ ಎಷ್ಟು ಚೆನ್ನಾಗಿ ತೋರಿಸಬಹುದು ಎಂಬುದು ನಮ್ಮಲ್ಲಿ ಇತ್ತು. 125 ಜನ ಇಲ್ಲಿಂದ ಹೋಗಿದ್ದು, ಪ್ರೋಡಕ್ಷನ್ ಕಡೆಯಿಂದ ನಮಗೆ ಆಸೆ ಬಲ ಇತ್ತು. ಊಟ ತಿಂಡಿಗೆ ಸ್ವಲ್ಪ ಕಷ್ಟ ಆಯ್ತು.''

    ಮುಂದೆ ಯಾವ ನಿರ್ದೇಶಕರ ಜೊತೆ ಸಿನಿಮಾ ಮಾಡುವ ಕನಸು ಇದೆ?

    ಮುಂದೆ ಯಾವ ನಿರ್ದೇಶಕರ ಜೊತೆ ಸಿನಿಮಾ ಮಾಡುವ ಕನಸು ಇದೆ?

    ''ಹಾಗೇನೂ ಇಲ್ಲ.. ನಾನು ತುಂಬ ಜನ ಹೊಸಬರ ಜೊತೆ ಕೂಡ ಕೆಲಸ ಮಾಡಿದ್ದೇನೆ. ಇದೇ ನಿರ್ದೇಶಕರ ಜೊತೆ ಸಿನಿಮಾ ಮಾಡಬೇಕು ಅಂತ ಏನು ಇಲ್ಲ. ಒಳ್ಳೆಯ ಕಥೆ ಜೊತೆ ನಾನು ಇರೋಕ್ಕೆ ಬಯಸುತ್ತೇನೆ. ಎಲ್ಲ ನಿರ್ದೇಶಕರು ನನಗೆ ಇಷ್ಟ. ಎಲ್ಲರ ಜೊತೆ ಕೆಲಸ ಮಾಡುವ ಸ್ವರ್ಥ ನನಗೆ ಇದೆ.''

    English summary
    Duniya movie fame Kannada cinematographer Sathya Hegde spoke about his cinema journey.
    Friday, December 29, 2017, 17:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X