ಸಿಂಪಲ್ ಹುಡುಗಿಗೆ ಇಷ್ಟವಾದ 'ವೇಶ್ಯೆ' ಪಾತ್ರ
ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ ಮತ್ತು ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ 'ಫೇರ್ ಅಂಡ್ ಲವ್ಲಿ' ಬಿಡುಗಡೆ ಹೊಸ್ತಿಲಲ್ಲಿದೆ. ಈ ವೇಳೆ ನಟಿ ಶ್ವೇತಾ ಫಿಲ್ಮಿ ಬೀಟ್ ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಪಾತ್ರ, ಚಿತ್ರ ಎಲ್ಲದರ ಬಗ್ಗೆ ಮಾತನಾಡಿದ್ದಾರೆ.
ಪ್ರ: 'ಫೇರ್ ಅಂಡ್ ಲವ್ಲಿ' ಚಿತ್ರದಲ್ಲಿ ನಿಮ್ಮ ಪಾತ್ರವೇನು?
ಶ್ವೇತಾ: ಇದೊಂದು ವಿಭಿನ್ನವಾದ ಪಾತ್ರ. ಇದೇ ಮೊದಲ ಬಾರಿಗೆ ವೇಶ್ಯೆಯಾಗಿ ಕಾಣಿಸಿಕೊಂಡಿದ್ದೇನೆ. ನಿಜ ಜೀವನದಲ್ಲಿ ವೇಶ್ಯೆ ಅನುಭವಿಸುವ ಕಷ್ಟ ನಷ್ಟಗಳು ಇಲ್ಲಿ ಚಿತ್ರಿತವಾಗಿವೆ. ಈ ಕತೆ ಕೇಳಿದಾಗ ನನಗೆ ಥ್ರೀಲ್ ಆಯಿತು. ನಂತರ ಒಪ್ಪಿಕೊಂಡೆ.

ಪ್ರ: ಪಾತ್ರಕ್ಕೆ ಜೀವ ತುಂಬಲು ಯಾವ ರೀತಿಯ ಸಿದ್ಧತೆ ಮಾಡಿಕೊಂಡಿದ್ರಾ?
ಶ್ವೇತಾ: ರಂಗಭೂಮಿ ಹಿನ್ನೆಲೆಯಿರುವ ನನಗೆ ನಟನೆ ಕಷ್ಟಸಾಧ್ಯವೇನಲ್ಲ. ಬಾಲಿವುಡ್ ನಲ್ಲಿ ವೇಶ್ಯೆ ಪಾತ್ರ ಮಾಡಿದವರ ಅಭಿನಯ ನೋಡಿದೆ. ಪಾತ್ರದಲ್ಲಿ ಅನೇಕ ಭಾವನೆಗಳನ್ನು ಹೊರಸೂಸುವುದು ಅಗತ್ಯವಾಗಿತ್ತು. ನಾನು ತಕ್ಕ ನ್ಯಾಯ ಸಲ್ಲಿಸಿದ್ದೇನೆ.
ಪ್ರ: ಈ ಚಿತ್ರದ ಸ್ಪೇಷಾಲಿಟಿ ಏನು?
ಶ್ವೇತಾ: ಖಂಡಿತವಾಗಿಯೂ ಚಿತ್ರಕಥೆ. ನಿರ್ದೇಶಕರಾದ ರಘುರಾಮ್ ಅವರು ಶಕ್ತಿಶಾಲಿ ಮತ್ತು ಅಷ್ಟೇ ಸುಂದರ ಚಿತ್ರಕಥೆ ಹೆಣೆದಿದ್ದಾರೆ. ಚಿತ್ರಕಥೆ ಮನಸ್ಸಿಗೆ ಹಿಡಿಸಿದ್ದರಿಂದಲೇ ಚಿತ್ರ ಒಪ್ಪಿಕೊಂಡೆ. ಹಿಂದೆಂದೂ ನೋಡದ ಶ್ವೇತಾ ಈ ಚಿತ್ರದಲ್ಲಿ ನಿಮ್ಮ ಮುಂದೆ ಕಾಣಸಿಗಲಿದ್ದಾಳೆ.

ಪ್ರ: ಯಾವ ರೀತಿಯ ಪ್ರೇಕ್ಷಕ ವರ್ಗ ಆಧಾರವಾಗಿಟ್ಟುಕೊಂಡು ಚಿತ್ರ ಮೂಡಿಬಂದಿದೆ?
ಶ್ವೇತಾ: ನಾನು ಇದರಲ್ಲಿ ವೇಶ್ಯೆ ಪಾತ್ರ ಮಾಡಿರಬಹುದು. ಆದರೆ ಇದೊಂದು ಸಂಪೂರ್ಣ ಮನರಂಜನಾತ್ಮಕ ಮತ್ತು ಕುಟುಂಬದವರೆಲ್ಲ ಕುಳಿತು ನೋಡುವಂಥ ಚಿತ್ರ. ಕಾಲೇಜು ವಿದ್ಯಾರ್ಥಿಗಳಿಗೂ ಸಿನಿಮಾ ಇಷ್ಟ ಆಗುವುದರಲ್ಲಿ ಅನುಮಾನವಿಲ್ಲ.[ಚಿತ್ರ ಬಿಡುಗಡೆಗೆ ಮುನ್ನ ಪ್ರಜ್ವಲ್ ದೇವರಾಜ್ ಸಂದರ್ಶನ]

ಪ್ರ: ಈ ಚಿತ್ರದ ಬಗ್ಗೆ ಇನ್ನೇನು ಹೇಳಲು ಬಯಸುತ್ತೀರಿ
ಶ್ವೇತಾ: ಇದೊಂದು ಸಾಮಾಜಿಕ ಸಂದೇಶ ಸಾರುವ ಚಿತ್ರ. ಪ್ರತಿಯೊಬ್ಬರು ನೋಡಲೇಬೇಕಾಗಿದ್ದು ಯುವಕರೆಂತೂ ಮಿಸ್ ಮಾಡಿಕೊಳ್ಳುವಂತೆಯೇ ಇಲ್ಲ. ಸಮಾಜದಲ್ಲಿ ಪ್ರತಿದಿನ ಏನಾಗುತ್ತಿದೆ ಎಂಬುದನ್ನೇ ಚಿತ್ರ ಹೇಳುತ್ತದೆ.


Click it and Unblock the Notifications











