For Quick Alerts
  ALLOW NOTIFICATIONS  
  For Daily Alerts

  ಎಕ್ಸ್ ಕ್ಲೂಸಿವ್: 'ಜಾಗ್ವಾರ್' ನಾಯಕ ನಿಖಿಲ್ ಕುಮಾರ್ ಸಂದರ್ಶನ

  By Bharath Kumar
  |

  ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ 'ಜಾಗ್ವಾರ್', ರಾಜ್ಯಾದ್ಯಂತ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಮೂರನೇ ವಾರಕ್ಕೆ ಕಾಲಿಟ್ಟಿರುವ 'ಜಾಗ್ವಾರ್' ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

  ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾದ 'ಜಾಗ್ವಾರ್', ಎರಡು ರಾಜ್ಯಗಳಲ್ಲೂ ಅಬ್ಬರಿಸುತ್ತಿದೆ. ನಿಖಿಲ್ ಕುಮಾರ್ ತಮ್ಮ ಚೊಚ್ಚಲ ಚಿತ್ರದಲ್ಲೇ ಅದ್ಭುತ ಪ್ರದರ್ಶನ ನೀಡಿರುವುದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗೆ, ಮೊದಲ ಚಿತ್ರದ ಸಕ್ಸಸ್ ನಲ್ಲಿರುವಗಾಲೇ ನಿಖಿಲ್ ಅಭಿನಯಿಸಲಿರುವ ಎರಡನೇ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಗಳು ನಡೆಯುತ್ತಿವೆ. [ವಿಮರ್ಶೆ : ಮಿಂಚಿನ ವೇಗದ 'ಜಾಗ್ವಾರ್' ಚಿಂದಿ ಚಿತ್ರಾನ್ನ]

  ಇತ್ತೀಚೆಗೆ 'ಜಾಗ್ವಾರ್' ಚಿತ್ರದ ಸಕ್ಸಸ್ ಮೀಟ್ ಅಯೋಜಿಸಿದ್ದ ಚಿತ್ರತಂಡ, ಸಿನಿಮಾ ಗೆದ್ದ ಖುಷಿಯನ್ನ ಹಂಚಿಕೊಂಡಿತು. ಈ ವೇಳೆ ಸಂತಸದ ಸಂಭ್ರಮದಲ್ಲಿದ್ದ ನಿಖಿಲ್ ಕುಮಾರ್ ಕೆಲ ಸಮಯ 'ನಿಮ್ಮ ಫಿಲ್ಮಿಬೀಟ್' ಜೊತೆ ಮಾತಿಗೆ ಸಿಕ್ಕರು. ಖುಷಿಯಿಂದ ಮಾತನಾಡಿದ ನಿಖಿಲ್ ಕುಮಾರ್ 'ಜಾಗ್ವಾರ್' ಚಿತ್ರದ ಅನುಭವ, ಹಾಗೂ ತಮ್ಮ ಮುಂದಿನ ಪ್ರಾಜೆಕ್ಟ್ ಗಳ ಪ್ಲಾನ್ಸ್ ಏನು ಎಂಬುದರ ಬಗ್ಗೆ ಮಾಹಿತಿ ಕೊಟ್ಟರು.

  'ಜಾಗ್ವಾರ್' ನಾಯಕ ನಿಖಿಲ್ ಕುಮಾರ್ ಅವರ ಜೊತೆ ನಾವು ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. ಓದಿರಿ....

  ಸಂದರ್ಶನ - ಭರತ್‌ ಕುಮಾರ್‌

  'ಜಾಗ್ವಾರ್' ಸಿನಿಮಾ ಗೆದ್ದ ಖುಷಿಯಲ್ಲಿದ್ದೀರಾ. ಹೇಗಿದೆ ಫೀಲಿಂಗ್.?

  'ಜಾಗ್ವಾರ್' ಸಿನಿಮಾ ಗೆದ್ದ ಖುಷಿಯಲ್ಲಿದ್ದೀರಾ. ಹೇಗಿದೆ ಫೀಲಿಂಗ್.?

  ''ತುಂಬಾ ಖುಷಿಯಾಗಿದ್ದೀನಿ. ಯಾಕಂದ್ರೆ, ನನ್ನ ಮೊದಲ ಚಿತ್ರವನ್ನ ಜನರು ಈ ಮಟ್ಟಿಗೆ ಒಪ್ಪಿಕೊಂಡಿದ್ದಾರೆ. ಅದಕ್ಕೆ ತುಂಬಾ ಥ್ಯಾಂಕ್ಸ್ ಹೇಳುತ್ತೇನೆ. ತುಂಬಾ ಪ್ರೋತ್ಸಾಹ ಸಿಕ್ಕಿದೆ. ಈ ಪ್ರೋತ್ಸಾಹ ನನ್ನ ಸೆಕೆಂಡ್ ಚಿತ್ರಕ್ಕೂ ಕಾನ್ಫಿಡೆನ್ಸ್ ತುಂಬಿದೆ''.

  'ಜಾಗ್ವಾರ್' ಚಿತ್ರವನ್ನ ನೋಡಿದ ಮೇಲೆ ನಿಮ್ಮ ತಂದೆ ಅವರ ಮೊದಲ ಅಭಿಪ್ರಾಯ ಏನು?

  'ಜಾಗ್ವಾರ್' ಚಿತ್ರವನ್ನ ನೋಡಿದ ಮೇಲೆ ನಿಮ್ಮ ತಂದೆ ಅವರ ಮೊದಲ ಅಭಿಪ್ರಾಯ ಏನು?

  ''ಈ ಸಿನಿಮಾ ಇಷ್ಟು ದೊಡ್ಡ ಮಟ್ಟಕ್ಕೆ ಯಶಸ್ಸು ಕಾಣಲು ನಮ್ಮ ತಂದೆಯವರೇ ಕಾರಣ. ಪ್ರತಿ ಹಂತದಲ್ಲೂ ನಮ್ಮ ತಂದೆಯವರು 'ಜಾಗ್ವಾರ್' ಚಿತ್ರತಂಡದ ಜೊತೆಯಲ್ಲಿದ್ದರು, ತುಂಬಾ ಕಷ್ಟ ಪಟ್ಟಿದ್ದಾರೆ. ನನ್ನ ಅಭಿನಯ ನೋಡಿ ಅವರು ಕೂಡ ತುಂಬಾ ಖುಷಿ ಪಟ್ಟರು'' ['ಕನ್ನಡ ಚಿತ್ರರಂಗದ ಅವಸ್ಥೆ' ವಿರುದ್ದ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ]

  'ಜಾಗ್ವಾರ್' ಸಿನಿಮಾ ಬಿಡುಗಡೆಯಾದ ನಂತರ ನಿಮಗೆ ಸಿಕ್ಕಿರುವ ಬೆಸ್ಟ್ ಕಾಂಪ್ಲಿಮೆಂಟ್ಸ್ ಯಾವುದು?

  'ಜಾಗ್ವಾರ್' ಸಿನಿಮಾ ಬಿಡುಗಡೆಯಾದ ನಂತರ ನಿಮಗೆ ಸಿಕ್ಕಿರುವ ಬೆಸ್ಟ್ ಕಾಂಪ್ಲಿಮೆಂಟ್ಸ್ ಯಾವುದು?

  ''ಕಾಂಪ್ಲಿಮೆಂಟ್ಸ್ ಹಿಂದೆ ನಾನು ಯಾವತ್ತು ಓಡಲ್ಲ. 'ಕ್ರಿಟಿಕ್ಸ್' ಹಿಂದೆ ಓಡೋನು. ಇಷ್ಟು ಬೇಗ ಕಾಂಪ್ಲಿಮೆಂಟ್ಸ್ ತಗೊಂಡ್ ಬಿಟ್ರೆ ಬೆಳೆಯುವುದಕ್ಕೆ ಆಗಲ್ಲ ಅನ್ಸುತ್ತೆ. ಸೋ, ನನಗೆ ಅದು ಗೊತ್ತಿಲ್ಲ. ಇನ್ನೂ ನನಗೆ ಆ ಥರ ಕಾಂಪ್ಲಿಮೆಂಟ್ಸ್ ಯಾರು ಹೇಳಿಲ್ಲ ಅನ್ಸುತ್ತೆ''.

  'ಜಾಗ್ವಾರ್' ಚಿತ್ರವನ್ನ ನೋಡಿದ ಮೇಲೆ, ಯಾವ ವಿಷಯದಲ್ಲಿ ನಿಮ್ಮಲ್ಲಿ ಬದಲಾವಣೆ ಬೇಕು? ಅಥವಾ ಯಾವುದನ್ನ ಕಲಿಯಬೇಕು ಅಂತ ಅನ್ನಿಸಿದೆ?

  'ಜಾಗ್ವಾರ್' ಚಿತ್ರವನ್ನ ನೋಡಿದ ಮೇಲೆ, ಯಾವ ವಿಷಯದಲ್ಲಿ ನಿಮ್ಮಲ್ಲಿ ಬದಲಾವಣೆ ಬೇಕು? ಅಥವಾ ಯಾವುದನ್ನ ಕಲಿಯಬೇಕು ಅಂತ ಅನ್ನಿಸಿದೆ?

  ''ತುಂಬಾ ಇದೆ. ಒಬ್ಬ ಕಲಾವಿದನಿಗೆ ಯಾವತ್ತು ಸಮಾಧಾನ ಆಗುತ್ತೋ ಅವತ್ತು ಅವರ ಬೆಳವಣಿಗೆ ನಿಂತು ಹೋಗುತ್ತೆ. ಸಿನಿಮಾ ನೋಡಿದಾಗಲೂ ಅಷ್ಟೇ, ಪ್ರತಿಯೊಂದು ದೃಶ್ಯದಲ್ಲೂ ಇನ್ನೂ ಏನಾದರೂ ಮಾಡಬೇಕು ಅನ್ನಿಸಿದೆ. ಜಾಗ್ವಾರ್ ಚಿತ್ರದಲ್ಲಿ 100% ಪ್ರಯತ್ನ ಪಟ್ಟಿದ್ದೀನಿ. ಮುಂದಿನ ದಿನಗಳಲ್ಲಿ ಇದಕ್ಕಿಂತ ಉತ್ತಮ ಪರ್ಫಾಮೆನ್ಸ್ ಕೊಡುತೇನೆ''. ['ಜಾಗ್ವಾರ್' ನೋಡಿದ ವಿಮರ್ಶಕರು ಮಾಡಿದ ಕಾಮೆಂಟ್ ಗಳಿವು..]

  ಶೂಟಿಂಗ್ ಟೈಮ್ ನಲ್ಲಿ ಆದ ಯಾವುದಾದರೂ ಒಂದು ಕಷ್ಟಕರ ಅನುಭವ ನೆನಪಿಸಿಕೊಳ್ಳುವುದಾದರೆ ಯಾವುದನ್ನ ಹೇಳ ಬಯಸುತ್ತೀರಾ?

  ಶೂಟಿಂಗ್ ಟೈಮ್ ನಲ್ಲಿ ಆದ ಯಾವುದಾದರೂ ಒಂದು ಕಷ್ಟಕರ ಅನುಭವ ನೆನಪಿಸಿಕೊಳ್ಳುವುದಾದರೆ ಯಾವುದನ್ನ ಹೇಳ ಬಯಸುತ್ತೀರಾ?

  ''ಜಾಗ್ವಾರ್ ಡ್ರೆಸ್ ನಲ್ಲಿ ಚಿತ್ರೀಕರಣ ಮಾಡುವಾಗ ತುಂಬಾ ಕಷ್ಟ ಆಗಿತ್ತು. ಯಾಕಂದ್ರೆ, ಆ ಡ್ರೆಸ್ 14 ಕೆ.ಜಿ ತೂಕ ಇತ್ತು. ಶೂಟಿಂಗ್ ಮಾಡುವಾಗ ಯಾಕಪ್ಪಾ ಈ ಜನ್ಮ ಅಂತ ಎಷ್ಟೋ ಬಾರಿ ಅನ್ನಿಸಿದೆ. ಅಷ್ಟರ ಮಟ್ಟಿಗೆ ಆ ಡ್ರೆಸ್ ನಲ್ಲಿ ಕಷ್ಟ ಪಟ್ಟಿದ್ದೀನಿ. ಆದ್ರೆ, ಈಗ ಖುಷಿಯಾಗುತ್ತಿದೆ. ಯಾಕಂದ್ರೆ, ಮಕ್ಕಳು ಈ ಡ್ರೆಸ್ ನ ತುಂಬಾ ಇಷ್ಟ ಪಟ್ಟಿದ್ದಾರೆ. ಎಲ್ಲೇ ಕಾಣಿಸಿದರೂ ಮಕ್ಕಳು ಕೂಡ ಜಾಗ್ವಾರ್ ಜಾಗ್ವಾರ್ ಅಂತಾರೆ. ಇಷ್ಟೆಲ್ಲ ಕಷ್ಟ ಪಟ್ಟಿದ್ದಕ್ಕೂ ಏನೋ ಒಂದು ಸಿಕ್ಕಿತ್ತು ಎಂಬ ಸಮಾಧಾನ''.

  ಮೊದಲ ಸಿನಿಮಾ ಸಕ್ಸಸ್ ಆಗಿದೆ. ಹೀಗಾಗಿ, ಎರಡನೇ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿರುತ್ತೆ. ಸೋ, ಎರಡನೇ ಸಿನಿಮಾ ಹೇಗಿರುತ್ತೆ?

  ಮೊದಲ ಸಿನಿಮಾ ಸಕ್ಸಸ್ ಆಗಿದೆ. ಹೀಗಾಗಿ, ಎರಡನೇ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿರುತ್ತೆ. ಸೋ, ಎರಡನೇ ಸಿನಿಮಾ ಹೇಗಿರುತ್ತೆ?

  ''ಖಂಡಿತ, ಜನರು ಇಷ್ಟೊಂದು ಪ್ರೋತ್ಸಾಹ ಕೊಟ್ಟಾಗ, ನಮ್ಮ ಜವಾಬ್ದಾರಿ ಕೂಡ ಹೆಚ್ಚಾಗುತ್ತೆ. ಈಗ ನನ್ನ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಅದನ್ನ ನಾನು ಮಾಡುತ್ತೇನೆ. ಈಗ 'ಜಾಗ್ವಾರ್' ಅಂತಹ ದೊಡ್ಡ ಸಿನಿಮಾ ಕೊಟ್ಟಿದ್ದೀವಿ. ಮುಂದೆ ಇದನ್ನ ಮೀರಿದ ಸಿನಿಮಾಗಳು ಬಂದ್ರೇನೇ ಜನರು ನನ್ನನ್ನ ಒಪ್ಪಿಕೊಳ್ಳುವುದು. ಇಲ್ಲವಾದರೆ ಕಷ್ಟವಾಗುತ್ತೆ. ಖಂಡಿತ ಆ ಥರಹದ ಒಳ್ಳೊಳ್ಳೆ ಸಿನಿಮಾಗಳನ್ನ ಕೊಡುತ್ತೇನೆ''.

  ನಿಮ್ಮ ಎರಡನೇ ಚಿತ್ರದ ಬಗ್ಗೆ ಚರ್ಚೆಗಳು ಆಗುತ್ತಿವೆ. ಎರಡನೇ ಸಿನಿಮಾವನ್ನ ತೆಲುಗು ನಿರ್ದೇಶಕರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ ಅಂತೆ. ಹೌದಾ?

  ನಿಮ್ಮ ಎರಡನೇ ಚಿತ್ರದ ಬಗ್ಗೆ ಚರ್ಚೆಗಳು ಆಗುತ್ತಿವೆ. ಎರಡನೇ ಸಿನಿಮಾವನ್ನ ತೆಲುಗು ನಿರ್ದೇಶಕರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ ಅಂತೆ. ಹೌದಾ?

  ''ಹೌದು, ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷ್ಯ ಹೆಚ್ಚು ಚರ್ಚೆಯಾಗುತ್ತಿದೆ. ಹಾಗೇನೂ ಇಲ್ಲ. ತೆಲುಗು ನಿರ್ದೇಶಕರಿಗಿಂತ, ಕನ್ನಡ ನಿರ್ದೇಶಕರೇ ಹೆಚ್ಚು ನಮ್ಮ ಬಳಿ ಮಾತಾನಾಡಿದ್ದಾರೆ. ಆದ್ರೆ, ಕಥೆ ಯಾವುದು ಓಕೆ ಆಗಿಲ್ಲ. ಸದ್ಯಕ್ಕೆ, ಎರಡನೇ ಚಿತ್ರವನ್ನ ತೆಲುಗು ನಿರ್ದೇಶಕರೇ ಮಾಡುವುದು ಬಹುತೇಕ ಖಚಿತವಾಗಿದೆ. ಇನ್ನೊಂದು ಸುತ್ತಿನ ಮಾತುಕತೆ ಬಾಕಿಯಿದೆ''.

  ಪ್ರಿಪರೇಶನ್ ಹೇಗೆ ನಡೆಯುತ್ತಿದೆ.?

  ಪ್ರಿಪರೇಶನ್ ಹೇಗೆ ನಡೆಯುತ್ತಿದೆ.?

  ''ನಾಲ್ಕು ತಿಂಗಳು ನಾನು ಪ್ರಾಕ್ಟೀಸ್ ನಲ್ಲಿರುತ್ತೇನೆ. ಲೈಫ್ ನಲ್ಲಿ ಟೈಮ್ ವೇಸ್ಟ್ ಮಾಡುವುದಕ್ಕೆ ನನಗಂತೂ ಇಷ್ಟ ಇಲ್ಲ. ನನ್ನ ಫೈಟ್, ಡ್ಯಾನ್ಸ್ ನ ಜನ ಇಷ್ಟ ಪಟ್ಟಿದ್ದಾರೆ. ಅದನ್ನ ಇನ್ನೂ ಹೆಚ್ಚು ಇಂಪ್ರೂವ್ ಮಾಡುವುದಕ್ಕೆ ಫಾರಿನ್ ಸ್ಟಂಟ್ ಮಾಸ್ಟರ್ ಹಾಗೂ ಡ್ಯಾನ್ಸ್ ಮಾಸ್ಟರ್ ಹತ್ರ ಟ್ರೈನ್ ಆಗುತ್ತಿದ್ದೀನಿ.''

  ಎರಡನೇ ಚಿತ್ರ ಯಾವಾಗ ಶುರು?

  ಎರಡನೇ ಚಿತ್ರ ಯಾವಾಗ ಶುರು?

  ''ಡಿಸೆಂಬರ್ 16 ರಿಂದ ಎರಡನೇ ಸಿನಿಮಾ ಶುರುವಾಗುತ್ತೆ. ಆ ದಿನ ನಮ್ಮ ತಂದೆಯವರ ಹುಟ್ಟುಹಬ್ಬ. ಹೀಗಾಗಿ ಆ ವಿಶೇಷ ದಿನದಂದೇ ನನ್ನ ಎರಡನೇ ಸಿನಿಮಾಗೆ ಚಾಲನೆ ಸಿಗುತ್ತೆ. ಮಾರ್ಚ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗುತ್ತೆ. ಯಾಕಂದ್ರೆ, ನಾನು ಇನ್ನೂ ಮೇಕ್ ಓವರ್ ಆಗ್ಬೇಕು''.

  ಮುಂದಿನ ಪ್ಲಾನ್ಸ್ ಏನು,?

  ಮುಂದಿನ ಪ್ಲಾನ್ಸ್ ಏನು,?

  ''ಸದ್ಯ, ನನ್ನ ತಲೆಯಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೂ ಸಿನಿಮಾ ಒಂದೇ ಇದೆ. ಯಾವ ಥರ ಸಿನಿಮಾ ಮಾಡಬೇಕು. ಯಾವ ಥರ ಕಥೆ ಕೊಟ್ಟರೆ ಜನ ಇಷ್ಟ ಪಡುತ್ತಾರೆ ಎಂಬುದೇ ದಿನನಿತ್ಯದ ಚರ್ಚೆ. ಮತ್ತೊಂದು ಏನಪ್ಪಾ ಅಂದ್ರೆ, ನನ್ನ ಮೂರನೇ ಚಿತ್ರದ ಕೆಲಸ ಕೂಡ ಈಗಲೇ ಶುರುವಾಗಿದೆ. ಅದಕ್ಕೆ ಸಮಯ ಬೇಕು. ಕಥೆ ಹೇಗಿರಬೇಕು ಅಂತ ನಿರ್ಧಾರ ಮಾಡಿದ್ದೇವೆ. ಖಂಡಿತ, ಈ ಚಿತ್ರಕ್ಕೆ ಕನ್ನಡ ನಿರ್ದೇಶಕರೇ ಆಕ್ಷನ್ ಕಟ್ ಹೇಳುತ್ತಾರೆ''.

  ಕೊನೆಯದಾಗಿ 'ಜಾಗ್ವಾರ್' ಚಿತ್ರವನ್ನ ಗೆಲ್ಲಿಸಿದ ನಿಮ್ಮ ಅಭಿಮಾನಿಗಳಿಗೆ ಏನು ಹೇಳುತ್ತೀರಾ?

  ಕೊನೆಯದಾಗಿ 'ಜಾಗ್ವಾರ್' ಚಿತ್ರವನ್ನ ಗೆಲ್ಲಿಸಿದ ನಿಮ್ಮ ಅಭಿಮಾನಿಗಳಿಗೆ ಏನು ಹೇಳುತ್ತೀರಾ?

  '' ಎಲ್ಲರಿಗೂ ತುಂಬಾ ಥ್ಯಾಂಕ್ಸ್ ಹೇಳುವುದಕ್ಕೆ ಇಷ್ಟ ಪಡುತ್ತೀನಿ. ಎಲ್ಲ ಚಿತ್ರಮಂದಿರಗಳಿಗೂ ಭೇಟಿ ಕೊಟ್ಟಿದ್ದೀನಿ. ಎಲ್ಲ ಕಡೆ ಒಳ್ಳೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅದ್ರಲ್ಲೂ ಮಹಿಳೆಯರು ಕೆಲವು ದೃಶ್ಯಗಳನ್ನ ಹೆಚ್ಚು ಇಷ್ಟಪಟ್ಟಿದ್ದಾರೆ. ಈಗ ನನ್ನ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಮುಂದೆ ಉತ್ತಮ ಸಿನಿಮಾ ಕೊಡುವುದೊಂದೇ ನನ್ನ ಗುರಿ''.

  English summary
  'Jaguar' Movie Hero Nikhil Kumar revealed his upcoming project plans in an Exclusive Interview with Filmibeat Kannada. Here is the Interview with Nikhil Kumar. Take a look..

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X