For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕಿಯಾಗಲಿದ್ದಾರಾ ನಟಿ ರಚಿತಾ ರಾಮ್..?

  |

  ರಚಿತಾ ರಾಮ್ ಅವರು ಚಿತ್ರರಂಗ ಪ್ರವೇಶಿಸಿ ಏಳು ವರ್ಷಗಳಾಗಿವೆ. ನಾಯಕಿಯಾಗಿ ಸದ್ಯದ ಮಟ್ಟಿಗೆ ಅವರಷ್ಟು ಹಿಟ್ ನೀಡಿರುವ ಮತ್ತೋರ್ವ ಸಮಕಾಲೀನ ನಾಯಕಿ ಇಲ್ಲವೆಂದೇ ಹೇಳಬಹುದು. ಸಿಕ್ಕ ಅವಕಾಶಗಳನ್ನೆಲ್ಲ ಒಪ್ಪಿಕೊಳ್ಳದೆ, ಚಿತ್ರದಲ್ಲಿ ತಮ್ಮ ಪಾತ್ರದ ಔಚಿತ್ಯವೇನು ಎನ್ನುವುದನ್ನು ಖಚಿತ ಪಡಿಸಿಕೊಂಡ ಬಳಿಕ ಮಾತ್ರವೇ ಮುಂದುವರೆಯುವ ಅಪರೂಪದ ಪ್ರತಿಭೆ.

  ರಾಘು ಮಾಮಾನೇ ನನಗೆ ಹೆಚ್ಚು ಟಿಪ್ಸ್ ಕೊಡೋದು | Ninna Sanihake | Dhanya Ramkumar | Filmibeat Kannada

  ಆ ಕಾರಣದಿಂದಲೇ ಅವರು ಏಳು ವರ್ಷಗಳಲ್ಲಿಯೂ ಜನಪ್ರಿಯ ನಾಯಕಿಯಾಗಿ ಮುಂದುವರಿಯಲು ಸಾಧ್ಯವಾಗಿದೆ. ಎಲ್ಲವೂ ದೇವರ ಕರುಣೆ ಎಂದು ಹೇಳುತ್ತಲೇ ನಟಿಯಾಗಿ ತಮ್ಮ ಸಂಪೂರ್ಣ ಶ್ರಮವನ್ನು ಚಿತ್ರರಂಗಕ್ಕೆ ಸಮರ್ಪಿಸಿರುವ ಈ ಚೆಲುವೆ ಇದೀಗ ಲಾಕ್ಡೌನ್ ಬಳಿಕ ಹೊಸ ಚಿತ್ರಗಳಲ್ಲಿ ಇನ್ನಷ್ಟು ವಿಶೇಷವಾಗಿ ಪಾಲ್ಗೊಳ್ಳುತ್ತಿರುವ ಸೂಚನೆ ನೀಡಿದ್ದಾರೆ.

  ದರ್ಶನ್‌ ಸಿನಿಮಾ ನೋಡಲು ಜನ ಬಂದೇ ಬರ್ತಾರೆ ಅಂತಾರೆ ವಿ ಮನೋಹರ್!

  ಈ ಪ್ರಾಜೆಕ್ಟ್‌ ತಮ್ಮ ಕಡೆಯಿಂದಲೇ ಶುರುವಾಗುತ್ತಿದೆ ಎನ್ನುವ ಮೂಲಕ ನಿರ್ದೇಶಕಿ ಅಥವಾ ಕತೆಗಾರ್ತಿಯಾಗಿರುವ ಸೂಚನೆ ನೀಡಿದ್ದಾರೆ. ಅದೇನು? ಲಾಕ್ಡೌನ್ ದಿನಗಳು ಅವರಲ್ಲಿ ಮೂಡಿಸಿದ ಪ್ರಭಾವಗಳೇನು ಎನ್ನುವ ಎಲ್ಲ ವಿಚಾರಗಳ ಬಗ್ಗೆ ಖುದ್ದು ರಚಿತಾ ರಾಮ್ ಫಿಲ್ಮೀಬೀಟ್ ಗೆ ನೀಡಿರುವ ಮಾಹಿತಿಗಳು ಇಲ್ಲಿವೆ.

  ಲಾಕ್ಡೌನ್ ದಿನಗಳಲ್ಲಿ ಮನೆಯೊಳಗೆ ಕುಳಿತು ಹೇಗೆ ಕಾಲ ಕಳೆದಿರಿ?

  ಲಾಕ್ಡೌನ್ ದಿನಗಳಲ್ಲಿ ಮನೆಯೊಳಗೆ ಕುಳಿತು ಹೇಗೆ ಕಾಲ ಕಳೆದಿರಿ?

  ನಾನು ಮೊದಲಿಂದಲೂ ಮನೆಗೇ ಹೆಚ್ಚು ಸಮಯ ಕೊಡುತ್ತಿದ್ದೆ. ಆ ಬಗ್ಗೆ ಗೊತ್ತಿದ್ದವರೆಲ್ಲ ಎಲ್ಲರೂ ಹೇಳುತ್ತಾರೆ "ನೀನು ಯಾವಾಗಲೂ ಮನೆ ಮನೆ ಅಂತಾ ಇರೋಳು, ನಿನಗೆ ಇದು ಪರ್ಫೆಕ್ಟ್ ಲಾಕ್ಡೌನ್" ಎಂದು! ಶೂಟಿಂಗ್ ಗೆ ರಜಾ ಇದ್ದಾಗ ಕೂಡ ಒಂದು ರೀತಿ ಸೆಲ್ಫ್ ಕ್ವರಂಟೈನ್ ತರಹವೇ ಇರುತ್ತಿದ್ದೆ! ಈಗಿನಿಂದ ಅಂತ ಅಲ್ಲ, ನನ್ನ ಸ್ಕೂಲ್ ಕಾಲೇಜ್ ದಿನಗಳಲ್ಲಿಯೂ ಹೀಗೆಯೇ ಇರುತ್ತಿದ್ದೆ. ಆದರೆ ಕೆಲಸ ಮಾಡಲಾಗುತ್ತಿರಲಿಲ್ಲ ಎನ್ನುವುದೊಂದೇ ಬೇಜಾರು. ನೆಟ್‌ಫ್ಲಿಕ್ಸ್ ನಲ್ಲಿ ಸಿನಿಮಾ, ವೆಬ್ ಸೀರೀಸ್ ಎಲ್ಲ ನೋಡಿದೆ.

  ಬೆಳಿಗ್ಗೆ ಹತ್ತೂವರೆಗೆ ತಂದೆ ಜತೆ ಟಿ.ವಿ ಮುಂದೆ ಕುಳಿತರೆ, ಬ್ಲ್ಯಾಕ್ ಆಂಡ್ ವೈಟ್ ಸಿನಿಮಾಗಳನ್ನು ಕೂಡ ನೋಡುತ್ತಿದ್ದೇನೆ! ಒಮ್ಮೆ ಕಂಡಿದ್ದ ಚಿತ್ರವನ್ನು ಕೂಡ ಮತ್ತೊಮ್ಮೆ ನೋಡಿದ್ದೇನೆ. ಡಾ.ರಾಜ್ ಕುಮಾರ್ ಸರ್ ಅವರ ಚಿತ್ರಗಳಂತೂ ಮೈ ಮರೆಸೋದು. ಅದರಲ್ಲಿಯೂ ಅಣ್ಣಾವ್ರ `ಶ್ರಿನಿವಾಸ ಕಲ್ಯಾಣ' ತುಂಬ ಇಷ್ಟವಾಯಿತು. ಶ್ರೀನಿವಾಸ ಕಲ್ಯಾಣದ ತೆಲುಗು ಚಿತ್ರದಲ್ಲಿ ಎನ್ ಟಿ ರಾಮರಾವ್ ಅವರು ನಟಿಸಿರುವುದನ್ನು ಕೂಡ ನಮ್ಮಪ್ಪ ನನಗೆ ಹಾಕಿ ತೋರಿಸುತ್ತಿದ್ದರು.

  ನಿಮ್ಮ ಕಲ್ಯಾಣದ ಯೋಜನೆಗಳೇನಾದರೂ ನಡೆಯಿತೇ?

  ನಿಮ್ಮ ಕಲ್ಯಾಣದ ಯೋಜನೆಗಳೇನಾದರೂ ನಡೆಯಿತೇ?

  ಓಹೋಹೋ.. ಅಷ್ಟಕ್ಕೇ ನನ್ನ ಮದುವೆ ಬಗ್ಗೆ ಮಾತನಾಡಬೇಕಾ?(ನಗು) ಈಗಷ್ಟೇ ಏಳು ವರ್ಷ ತುಂಬಿರೋದು ನನ್ನ ಚಿತ್ರ ಬದುಕಿಗೆ. ಇನ್ನೊಂದಷ್ಟು ವರ್ಷ ಹೀಗೆಯೇ ಇರಬೇಕು ಅಂತ ಆಸೆ ಇದೆ. ಎಷ್ಟು ಕಾಲ ನನ್ನನ್ನು ಬ್ಯುಸಿಯಾಗಿ ಉಳಿಸಬೇಕು ಎನ್ನುವುದು ದೇವರ ಕೈಯ್ಯಲ್ಲಿದೆ. ಆದರೆ ನನಗೆ ಸಿಕ್ಕಿರುವ ಅವಕಾಶದಲ್ಲಿ ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳನ್ನು ಕೊಡುತ್ತಿರಬೇಕು ಎನ್ನುವ ಹಂಬಲದಲ್ಲಿದ್ದೇನೆ. ರೇಸ್ , ಕಾಂಪಿಟಿಷನ್ ಇದ್ರೇನೇ ತುಂಬ ಇಷ್ಟ ನನಗೆ. ಆಗಲೇ ಛಾಲೆಂಜ್.

  ಫಿಲ್ಮೀಬೀಟ್ ಲೈವ್: ಅಭಿಮಾನಿಗಳ ಪ್ರಶ್ನೆಗೆ ನಟಿ ರಾಧಿಕಾ ನಾರಾಯಣ್ ಉತ್ತರಗಳು

  ಪ್ರತಿಯೊಬ್ಬ ಫಿಲ್ಮ್ ಮೇಕರ್ ಬಾಯಲ್ಲಿಯೂ ನನ್ನ ಹೆಸರಿದ್ದಾಗ ಅದೇ ತಾನೇ ಖುಷಿ? ನಂಬರ್ ಒನ್ ಎನ್ನುವುದಕ್ಕಿಂರತಲೂ ಯಾರೇ ಸಿನಿಮಾ ಮಾಡುವಾಗಲೂ ಮೊದಲು ನನ್ನ ಹೆಸರನ್ನೇ ಪ್ರಸ್ತಾಪಿಸುತ್ತಾರೆ ಎನ್ನುವಾಗ ಅದೇ ಖುಷಿ. ಆ ಸ್ಥಾನ ಅಭಿಮಾನಿಗಳಿಂದ, ಪ್ರೇಕ್ಷಕರಿಂದ ಸಿಕ್ಕಿರುವಂಥದ್ದು. ಅದನ್ನು ಉಳಿಸಿಕೊಳ್ಳಲು ತುಂಬ ಜವಾಬ್ದಾರಿ ಇದೆ ಎಂದು ನಾನು ಅಂದುಕೊಳ್ಳುತ್ತೇನೆ. ಒಳ್ಳೆಯ ಸಿನಿಮಾ ಮಾಡಿ ಪ್ರೇಕ್ಷಕರಿಗೆ ಮನರಂಜನೆ ನೀಡುವುದು ನಮ್ಮ ಕರ್ತವ್ಯ. ನಾನು ನನ್ನ ಲೈಫಲ್ಲಿ ಯಾವುದನ್ನು ಯೋಜನೆ ಹಾಕಿ ಮಾಡಿಲ್ಲ. ಮದುವೆಯ ದಿನ ಕೂಡ ದೇವರೇ ನಿರ್ಧರಿಸಿರುತ್ತಾನೆ ಎಂದು ನಂಬಿದ್ದೇನೆ.

  ನೀವು ಮೊದಲಿನಿಂದಲೂ ಮನೆಯಲ್ಲಿರುವುದನ್ನು ಇಷ್ಟಪಡಲು ಕಾರಣವೇನು?

  ನೀವು ಮೊದಲಿನಿಂದಲೂ ಮನೆಯಲ್ಲಿರುವುದನ್ನು ಇಷ್ಟಪಡಲು ಕಾರಣವೇನು?

  ಎಲ್ಲರಿಗೂ ಹಾಗೇ ಇರಬಹುದು ಅಂದುಕೊಂಡಿದ್ದೇನೆ. ಬಹುಶಃ ನಾನು ಸ್ವಲ್ಪ ಹೆಚ್ಚೇ ಮನೆಯನ್ನು ಇಷ್ಟಪಡುತ್ತಿರಬಹುದು. ನಮ್ಮನೇಲಿ ಸದ್ಯಕ್ಕೆ ನಾವು ಮೂವರೇ ಇರುವುದು. ನಾನು ನಮ್ಮಪ್ಪ ಮತ್ತು ಅಮ್ಮ. ಉಳಿದ ಹಾಗೆ ನಮ್ಮ ಮನೆಯವರಂತೇ ಬೆರೆತಿರುವ ಇಬ್ಬರು ಕೆಲಸದ ನೌಕರರು ಇರುತ್ತಾರೆ. ಈ ದಿನಗಳಲ್ಲಿ ನಾನು ನನ್ನ ತಂದೆ ತಾಯಿಯನ್ನು ತುಂಬ ಹತ್ತಿರದಿಂದ ನೋಡಲು ಸಾಧ್ಯವಾಯಿತು. ಅದು ಬಿಟ್ಟರೆ ನನಗೆ ಮನೆ ಫುಡ್ ಎಂದರೆ ಇಷ್ಟ.

  ಯಾವ ಮಟ್ಟಕ್ಕೆ ಎಂದರೆ, ಬೆಂಗಳೂರಲ್ಲೇ ಶೂಟಿಂಗ್ ಇದ್ದರೆ ನಮ್ಮ ಮನೆಯಿಂದಲೇ ನನಗೆ ತಿಂಡಿ ವ್ಯವಸ್ಥೆಯಾಗುತ್ತದೆ. ಬೆಳಗ್ಗಿನ ತಿಂಡಿ ನಮ್ಮಮ್ಮನೇ ಲಂಚ್ ಬಾಕ್ಸಲ್ಲಿ ಹಾಕಿ ಕೊಡುತ್ತಿದ್ದರು. ಆಮೇಲೆ ನಮ್ಮ ಡ್ರೈವರ್ ತಂದು ಕೊಡುತ್ತಾರೆ ಮಧ್ಯಾಹ್ನಕ್ಕೆ. ಇಲ್ಲವಾದರೆ ಪ್ರೊಡಕ್ಷನ್ ಅಣ್ಣನಿಗೆ ಮೊದಲೇ ಹೇಳುತ್ತೇನೆ, `ಈ ತರಹ ಅಡುಗೆ ಮಾಡಿ ಕೊಡಿ' ನನಗೆ ಅಂತ. ಪಾಪ ಎಲ್ಲರು ತುಂಬ ಚೆನ್ನಾಗಿ ಮಾಡಿಕೊಡುತ್ತಾರೆ.

  ನನ್ನ ಮೇಕಪ್ ಆರ್ಟಿಸ್ಟ್ ಹೈದರಾಬಾದ್‌ ನವರು. ಅಲ್ಲಿ ಶೂಟಿಂಗ್ ಇದ್ದರೆ ನಾನು ನನ್ನ ಮೇಕಪ್ ಆರ್ಟಿಸ್ಟ್ ಅವರ ಪತ್ನಿಗೆ ಹೇಳಿ ತಿಂಡಿ ತರಿಸುತ್ತೇನೆ. ಅಲ್ಲಿ ಪಫ್ ನನಗೆ ಇಷ್ಟ. ಅದನ್ನು ದಿನಾ ತಿಂದರೂ ನನಗೆ ಬೇಜಾರಾಗಲ್ಲ. ಒಂದು ರೀತಿಯಲ್ಲಿ ಮನೆಯ ಫುಡ್ ಮಾತ್ರ ಹೆಚ್ಚು ಇಷ್ಟಾಗೋದು ಕೂಡ ನಾನು ಮನೆ ಇಷ್ಟಪಡಲು ಕಾರಣ ಆಗಿರಬಹುದು.

  ಲಾಕ್ಡೌನ್ ಮುಗಿದೊಡನೆ ನಿಮ್ಮ ಯೋಜನೆಗಳೇನು?

  ಲಾಕ್ಡೌನ್ ಮುಗಿದೊಡನೆ ನಿಮ್ಮ ಯೋಜನೆಗಳೇನು?

  ತುಂಬ ಹೊಸ ಹೊಸ ಯೋಜನೆಗಳಿವೆ. ನನ್ನ ಕಡೆಯಿಂದಲೇ ಹೊಸ ಚಿತ್ರವೊಂದು ಬರಲಿದೆ. ಅದರ ಯೋಜನೆ ಯೋಚನೆ ಎಲ್ಲ ನನ್ನ ಕಡೆಯಿಂದಲೇ ಶುರುವಾಗಿರುವಂಥದ್ದು. ಹಾಗಂಥ ಅದಕ್ಕೆ ನಾನು ನಿರ್ದೇಶಕಿನಾ, ನಿರ್ಮಾಪಕಿನಾ, ಕತೆಗಾರ್ತಿಯಾ ಎನ್ನುವ ಪ್ರಶ್ನೆಗಳಿಗೆಲ್ಲ ಸದ್ಯಕ್ಕೆ ಉತ್ತರ ಇಲ್ಲ. ಸಣ್ಣದಾಗಿ ಫೊಟೋ ಶೂಟ್ ಮಾಡಿ, ಮೋಶನ್ ಪೋಸ್ಟರ್ ಬಿಡುಗಡೆಯ ಮೂಲಕ ರಿವೀಲ್ ಮಾಡೋಣ ಅಂತ ಇದ್ದೀನಿ.

  ನಾನೇ ಹೇಳಿ ಇಷ್ಟಪಟ್ಟು ಮಾಡಿಸುತ್ತಿರುವ ಚಿತ್ರ. ಜತೆಗೆ ಒಂದು ವಂಡರ್ ಫುಲ್ ತಂಡ ಜತೆ ಸೇರಿದ್ದೇವೆ. ತುಂಬ ಪ್ಯಾಷನ್ ಇಟ್ಟುಕೊಂಡು ಚಿತ್ರ ಮಾಡುವಂಥ ಯೂತ್ಸ್ ಒಂದಾಗಿದ್ದೇವೆ. ತಂಡದ ಪ್ರತಿಯೊಬ್ಬರೂ ಸಿನಿಮಾ ಬಗ್ಗೆ ಚೆನ್ನಾಗಿ ತಿಳಿದುಕೊಂಡವರೇ ಎನ್ನುವುದು ವಿಶೇಷ. ಉಳಿದಂತೆ ರಮೇಶ್ ಸರ್ ಜತೆಗಿನ `100' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಎಲ್ಲ ಮುಗಿದು ಬಿಡುಗಡೆಗೆ ತಯಾರಿದೆ. ಒಂದು ತಿಂಗಳು ಚೆನ್ನಾಗಿ ಪ್ರಮೋಶನ್ ಮಾಡಿ ಬಳಿಕ ರಿಲೀಸ್ ಮಾಡುವ ಯೋಜನೆ ಇದೆ. `ಏಕ್ ಲವ್ ಯ' ಚಿತ್ರದ ಬಹುತೇಕ ಕೆಲಸಗಳು ನಡೆದಿವೆ. ಡಬ್ಬಿಂಗ್ ಕೂಡ ಮುಗಿದಿದೆ. ಏನೋ ಸ್ವಲ್ಪ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇರಬಹುದು. ಏಪ್ರಿಲ್, ವೀರಂ ಕನ್ನಡದ ಇತರ ಚಿತ್ರಗಳಾದರೆ ತೆಲುಗಲ್ಲಿ `ಸುಪರ್ ಮಚ್ಚಿ' ಎನ್ನುವ ಚಿತ್ರವೂ ಇದೆ. ಇವೆಲ್ಲದರ ಜತೆಗೆ ಎರಡು ಹೊಸ ಸಿನಿಮಾಗಳು ಸೆಟ್ಟೇರಲಿವೆ!

  English summary
  Actress Rachitha Ram talks about the lockdown period and Also about her career.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X