For Quick Alerts
  ALLOW NOTIFICATIONS  
  For Daily Alerts

  ರಾಜ್ ಫ್ಯಾಮಿಲಿ ಜೊತೆಗೆ ಮುಂದುವರೆದ ಮಣಿಕಾಂತ್ ಮ್ಯೂಸಿಕ್

  |

  'ಶಾಕುಂತ್ಲೇ ಸಿಕ್ಕಳು..' ಎನ್ನುವ ಹಾಡಿನೊಂದಿಗೆ ಮಣಿಕಾಂತ್ ಮತ್ತೆ ಕನ್ನಡಕ್ಕೆ ಸಿಕ್ಕರು ಎಂದು ಖುಷಿ ಪಟ್ಟರು ಕನ್ನಡದ ಮೆಲೋಡಿ ಮ್ಯೂಸಿಕ್ ಪ್ರಿಯರು. ಯಾಕೆಂದರೆ ಮಣಿಕಾಂತ್ ಕದ್ರಿ ಅಚ್ಛ ಕನ್ನಡದ ಸಂಗೀತ ನಿರ್ದೇಶಕರಾದರೂ ವೃತ್ತಿ ಬದುಕು ಆರಂಭಿಸಿದ್ದು ಮಲಯಾಳಂನಲ್ಲಿ.

  ಬಳಿಕ ಹತ್ತಾರು ತುಳು ಚಿತ್ರಗಳಿಗೆ ಸಂಗೀತ ನೀಡಿ ಸ್ಟುಡಿಯೋ ಶುರು ಮಾಡಿದ್ದು ಚೆನ್ನೈನಲ್ಲಿ! ಇದರ ನಡುವೆ ಅಪರೂಪಕ್ಕೆ ಸಂಗೀತ ನೀಡಿದಂಥ ಹಾಡುಗಳು ಕನ್ನಡಿಗರಿಗೆಲ್ಲ ಪ್ರಿಯವಾಗಿದ್ದವು. ಸವಾರಿ ಚಿತ್ರದ "ನಿನ್ನ ದನಿಗಾಗಿ' ಗೀತೆಯನ್ನಂತೂ ಖುದ್ದು ರವಿಚಂದ್ರನ್ ಅವರೇ ತಮ್ಮ ಫೇವರಿಟ್ ಗೀತೆ ಇದು ಎಂದು ಕೊಂಡಾಡಿದ್ದರು.

  ರಾಘಣ್ಣನ 25ನೇ ಚಿತ್ರ ಆರಂಭ: 'ಕಸ್ತೂರಿ ನಿವಾಸ' ನೆನಪಿಸಿದ ಟೈಟಲ್

  ಕಳೆದ ವರ್ಷ 'ನಡುವೆ ಅಂತರವಿರಲಿ' ಚಿತ್ರದ ಹಾಡಿನ ಮೂಲಕ ಹಿಟ್ ನೀಡಿದರೂ ಕೂಡ, ಮತ್ತೆ ಒಂದಷ್ಟು ಕಾಲ ಚಿತ್ರದ ಶೀರ್ಷಿಕೆಗೆ ನ್ಯಾಯ ಒದಗಿಸುವಂತೆ ಅಂತರ ಇರಿಸಿಕೊಂಡರು. ಆದರೆ, ಇದೀಗ ರಾಘವೇಂದ್ರ ರಾಜ್ ಕುಮಾರ್ ಅವರ ಬಹು ನಿರೀಕ್ಷಿತ 25ನೇ ಚಿತ್ರಕ್ಕೆ ಸಂಗೀತ ಸಂಯೋಜಿಸುವ ಮೂಲಕ ಕನ್ನಡಕ್ಕೆ ಮರಳಿದ್ದಾರೆ. ಮಾತ್ರವಲ್ಲ ಕನ್ನಡದಲ್ಲಿ ತಾವೂ 25 ಚಿತ್ರಗಳನ್ನು ಮಾಡಬೇಕೆಂಬ ಆಸೆಯನ್ನು ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ...

  ರಾಜ್ ಕುಮಾರ್ ಕುಟುಂಬದ ಸಿನಿಮಾಗಳಿಗೆ ನೀವು ಈ ಹಿಂದೆಯೂ ಸಂಗೀತ ನೀಡಿದ್ದೀರಿ ಅಲ್ಲವೇ?

  ರಾಜ್ ಕುಮಾರ್ ಕುಟುಂಬದ ಸಿನಿಮಾಗಳಿಗೆ ನೀವು ಈ ಹಿಂದೆಯೂ ಸಂಗೀತ ನೀಡಿದ್ದೀರಿ ಅಲ್ಲವೇ?

  ಹೌದು. ಪುನೀತ್ ರಾಜ್ ಕುಮಾರ್ ಅವರ 'ಪೃಥ್ವಿ' ಚಿತ್ರಕ್ಕೆ ನೀಡಿದ ಸಂಗೀತ, ಮತ್ತು ವಿನಯ್ ರಾಜ್ ಕುಮಾರ್ ಅವರಿಗೆ `ರನ್ ಆಂಟೋನಿ'ಯಲ್ಲಿ ನೀಡಿದ ಸಂಗೀತ ರಾಘಣ್ಣ ಮತ್ತು ಫ್ಯಾಮಿಲಿಯೊಂದಿಗೆ ಆತ್ಮೀಯತೆ ಬೆಳೆಸಿತ್ತು. ಅವರೊಂದಿಗೆ ನಾನು ಸಂಪರ್ಕದಲ್ಲಿದ್ದೆ. ಜೊತೆಗೆ ಈ ಹೊಸ ಚಿತ್ರದ ನಿರ್ದೇಶಕ ಪಣೀಶ್ ನನ್ನ ಸ್ನೇಹಿತ. ಇದೀಗ ಪ್ರಥಮ ಬಾರಿಗೆ ರಾಘಣ್ಣನ ಚಿತ್ರಕ್ಕೆ ಸಂಗೀತ ನೀಡುತ್ತಿದ್ದೇನೆ.

  ಕಪ್ ಸಾಂಗ್ ಮೂಲಕ ಫೇಮಸ್ ಆದ ಬೆಂಗಳೂರಿನ ಹುಡುಗಿಯರು, ಯಾರಿವರು?

  'ಆಡಿಸಿದಾತ' ಚಿತ್ರದಲ್ಲಿ ಸಂಗೀತಕ್ಕೆ ಎಷ್ಟು ಅವಕಾಶಗಳಿವೆ?

  'ಆಡಿಸಿದಾತ' ಚಿತ್ರದಲ್ಲಿ ಸಂಗೀತಕ್ಕೆ ಎಷ್ಟು ಅವಕಾಶಗಳಿವೆ?

  ಮೇಲ್ನೋಟಕ್ಕೆ ಇದು ಸಸ್ಪೆನ್ಸ್ ಕತೆ ಹೊಂದಿರುವ ಚಿತ್ರ. ಆದರೆ ಚಿತ್ರದಲ್ಲಿ ಸಂಗೀತಕ್ಕೆ ಒಳ್ಳೆಯ ಸ್ಕೋಪ್ ಇದೆ. ಇದು ಒಂದು ವ್ಯಕ್ತಿಯ ಬದುಕಿನ ಜರ್ನಿಯನ್ನು ಹೇಳುವ ಕತೆ. ಅದು ಆತನ ಅನುಭವಗಳನ್ನು ಹೇಳುತ್ತಾ ಸಾಗುತ್ತದೆ. ಹಾಗಾಗಿ ವಿಭಿನ್ನವಾದ ಸಂಗೀತಕ್ಕೆ ಸಂಗೀತಕ್ಕೆ ಸಾಕಷ್ಟು ಅವಕಾಶಗಳಿರುತ್ತವೆ. ಲವ್, ಡ್ಯೂಯೆಟ್ ಎಂದು ಇಲ್ಲದೇ ಇರಬಹುದು. ಆದರೆ, ಯಂಗ್ ಜನರೇಶನ್ ಒಂದರ ಸಂದರ್ಭವೂ ಹಾಡುಗಳಲ್ಲಿದೆ. ಹಿನ್ನೆಲೆ ಸಂಗೀತ ಕೂಡ ನನ್ನದೇ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಇದುವರೆಗೆ ಹಾಕಿರುವ ಯೋಜನೆಯ ಪ್ರಕಾರ ಒಂದು ಹಾಡನ್ನಂತೂ ರಾಘವೇಂದ್ರ ರಾಜ್ಕುಮಾರ್ ಹಾಡಲಿದ್ದಾರೆ. ಉಳಿದ ಗೀತೆಗಳ ಬಗ್ಗೆ ಮಾತುಕತೆ ನಡೆದಿದೆ.

  ಸಿಹಿ ಧ್ವನಿಯ ಮೂಲಕ 'ತೀರ್ಥಹಳ್ಳಿ ಸಿರಿ'ಯಾದ ಅನನ್ಯ

  ನೀವೇಕೆ ಅಪರೂಪಕ್ಕೆ ಕನ್ನಡ ಚಿತ್ರಗಳನ್ನು ಒಪ್ಪುತ್ತೀರಿ?

  ನೀವೇಕೆ ಅಪರೂಪಕ್ಕೆ ಕನ್ನಡ ಚಿತ್ರಗಳನ್ನು ಒಪ್ಪುತ್ತೀರಿ?

  ಹಾಗೇನಿಲ್ಲ. ಆಫರ್ ಗಳು ಚೆನ್ನಾಗಿವೆ ಎನಿಸಿದಾಗ ಖಂಡಿತವಾಗಿ ಒಪ್ಪಿದ್ದೇನೆ. ನನ್ನ ಆದ್ಯತೆ ಏನಿದ್ದರೂ ಕನ್ನಡಕ್ಕೇನೇ. ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ‘ವೇರೀಸ್ ಮೈ ಕನ್ನಡಕ', ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನಲ್ಲಿ ರಾಜ್ ಬಿ ಶೆಟ್ಟಿಯವರ ‘ಗುಬ್ಬಿಮೇಲೆ ಬ್ರಹ್ಮಾಸ್ತ್ರ' ಮತ್ತು ಶಶಿಕಾಂತ್ ಗಟ್ಟಿಯವರ ‘ರಾಂಚಿ', ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ ‘ವರ್ಜಿನ್', ಕಲಾತ್ಮಕ ಚಿತ್ರವಾದ ‘ಕನ್ನೇರಿ' ಹೀಗೆ ಒಂದಷ್ಟು ಕನ್ನಡ ಚಿತ್ರಗಳ ಕೆಲಸ ನಡೆದಿದೆ. ‘‘ಭರತ ಬಾಹುಬಲಿ', ‘ಠಕ್ಕರ್', ‘ಸಾಗುತ ದೂರ ದೂರ' ಚಿತ್ರಗಳ ಆಡಿಯೋಗಳು ಬಿಡುಗಡೆಗೆ ಕಾದಿವೆ. ಒಟ್ಟಿನಲ್ಲಿ ಕನ್ನಡಕ್ಕೆ ನಾನು ರೀ ಎಂಟ್ರಿ ಕೊಟ್ಟಿದ್ದೇನೆ ಎನ್ನಬಹುದು.

  ನಿಮ್ಮ ಚೆನ್ನೈನ ಸ್ಟುಡಿಯೋ ಬಗ್ಗೆ ಹೇಳಿ

  ನಿಮ್ಮ ಚೆನ್ನೈನ ಸ್ಟುಡಿಯೋ ಬಗ್ಗೆ ಹೇಳಿ

  ಹೌದು, ಸ್ಟುಡಿಯೋ ಚೆನ್ನೈನ ಮೈಲಾಪುರದಲ್ಲಿದೆ. ಆದರೆ ನಾನು ಬೆಂಗಳೂರಿನಲ್ಲೇ ಹೆಚ್ಚು ಇದ್ದುಕೊಂಡು ಗಾಂಧಿನಗರದ ಜೊತೆಗೆ ಹೆಚ್ಚು ಸಂಪರ್ಕದಲ್ಲಿದ್ದೇನೆ. ಅದು ರೆಕಾರ್ಡಿಂಗ್, ಮಿಕ್ಸಿಂಗ್, ಮಾಸ್ಟರಿಂಗ್ ಮತ್ತು ಸಂಗೀತಜ್ಞರಿಗೆ ಅಭ್ಯಾಸಕ್ಕೆ ಬೇಕಾದಂಥ ಸುಸಜ್ಜಿತ ಜಾಮ್ರೂಮ್ ಹೊಂದಿದೆ. ‘ಕದ್ರೀಸ್ ಕೀ ಸ್ಟುಡಿಯೋ' ಚೆನ್ನೈನಲ್ಲಿ ನಂಬರ್ ಒನ್ ಸ್ಥಾನದತ್ತ ದಾಪುಗಾಲಿಟ್ಟಿದೆ. ಪ್ರಸ್ತುತ ಚೆನ್ನೈನ ಟಾಪ್ ಸೆವೆನ್ ಸ್ಟುಡಿಯೋಗಳಲ್ಲಿ ಒಂದೆಂಬ ಸ್ಥಾನಮಾನ ಈ ಸ್ಟುಡಿಯೋಗೆ ಲಭಿಸಿದೆ. ಡಾ. ಕೆ.ಜೆ ಯೇಸುದಾಸ್, ವಿಜಯ್ ಯೇಸುದಾಸ್, ಕಾರ್ತಿಕ್ ರಾಜ ಮೊದಲಾದ ಖ್ಯಾತನಾಮ ಸಂಗೀತಗಾರರು ಅಲ್ಲೇ ಹುಡುಕಿಕೊಂಡು ಬಂದು ರೆಕಾರ್ಡಿಂಗ್ ನಡೆಸುತ್ತಿರುವುದು ಹೆಮ್ಮೆಯ ವಿಚಾರ.

  ಮತ್ತೆ ಕನ್ನಡ ಚಿತ್ರರಂಗದ ಜೊತೆಗಿನ ನಂಟು ಹೇಗೆ ಮುಂದುವರಿಸುತ್ತೀರ?

  ಮತ್ತೆ ಕನ್ನಡ ಚಿತ್ರರಂಗದ ಜೊತೆಗಿನ ನಂಟು ಹೇಗೆ ಮುಂದುವರಿಸುತ್ತೀರ?

  ಅಲ್ಲಿ ಸ್ಟುಡಿಯೋ ನೋಡಿಕೊಳ್ಳಲೆಂದೇ ಸ್ಟಾಫ್ ಗಳಿದ್ದಾರೆ. ಮಾತ್ರವಲ್ಲ ನನ್ನ ಪತ್ನಿ ಅದಿತಿ ಕೂಡ ಅಲ್ಲೇ ಇದ್ದುಕೊಂಡು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಮ್ಯೂಸಿಕ್ ಸ್ಕೂಲ್, ಗಿಟಾರ್, ಕೀ ಬೋರ್ಡ್ ಜೊತೆಗೆ ನೃತ್ಯಾಭ್ಯಾಸವೂ ನಡೆಯುತ್ತದೆ. ನನ್ನ ಪತ್ನಿ ನೃತ್ಯಗಾತಿ ಕೂಡ ಹೌದು. ಅಲ್ಲಿ ಡ್ಯಾನ್ಸ್ ಫಿಟ್ನೆಸ್ ಕೂಡ ಇದೆ. ಸ್ಟುಡಿಯೋ ಎಷ್ಟು ಬ್ಯುಸಿ ಎಂದರೆ ನನ್ನ ರೆಕಾರ್ಡಿಂಗ್ಗೇ ನಾನೇ ಬುಕ್ ಮಾಡುವ ಹಾಗಿದೆ. ಎಲ್ಲವೂ ದೇವರ ಅನುಗ್ರಹ ಎಂದುಕೊಳ್ಳುತ್ತೇನೆ. ಸದ್ಯದಲ್ಲೇ ಬೆಂಗಳೂರಲ್ಲಿಯೂ ಸ್ಟುಡಿಯೋ ಮಾಡುವ ಯೋಜನೆ ಇದೆ. ಸದ್ಯಕ್ಕೆ ಸಾಲು ಸಾಲಾಗಿ ಕನ್ನಡ ಚಿತ್ರಗಳಲ್ಲಿ ತೊಡಗಿಸಿಕೊಳ್ಳುವತ್ತ ಗಮನ ನೀಡಿದ್ದೇನೆ.

  English summary
  Kannada music director Manikanth Kadri interview. Manikanth Kadri composing music for Raghavendra Rajkumar's 25th movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X