twitter
    For Quick Alerts
    ALLOW NOTIFICATIONS  
    For Daily Alerts

    ನನ್ನ ಮೊದಲ ಸಿನಿಮಾ : ಲವ್ ಸ್ಟೋರಿಯಿಂದ ಅಂಡರ್ ವಲ್ಡ್ ನೋಡಿದ್ದ ಚೈತನ್ಯ

    By Naveen
    |

    ಕನ್ನಡ ಚಿತ್ರರಂಗದಲ್ಲಿ ರೌಡಿಸಂ ಸಿನಿಮಾಗಳಿಗೆನೂ ಕಡಿಮೆ ಇಲ್ಲ. ಆದರೆ ಇಂದಿಗೂ ಕೆಲವು ರೌಡಿಸಂ, ಅಂಡರ್ ವಲ್ಡ್ ಸಿನಿಮಾಗಳನ್ನು ನೋಡಿದಾಗ ಮೈ ಜುಮ್ ಎನಿಸುತ್ತದೆ. ಆ ರೀತಿಯ ಒಂದು ಸಿನಿಮಾ 'ಆ ದಿನಗಳು'. ಈ ಸಿನಿಮಾ 'ದಾದಾಗಿರಿಯ ದಿನಗಳು' ಕಥೆ ಆಧಾರಿಸಿದ ಸಿನಿಮಾ. ಮೊದಲು 'ಕಪ್ಪು ಮಳೆ' ಎಂಬ ಹೆಸರಿನಲ್ಲಿ ಶುರುವಾದ ಈ ಸಿನಿಮಾ ಮುಂದೆ 'ಆ ದಿನಗಳು' ಆಯ್ತು.

    ಅಂದಹಾಗೆ, 'ಆ ದಿನಗಳು' ಸಿನಿಮಾ ಹುಟ್ಟಿದ ಕುತೂಹಲಕಾರಿ ವಿಷಯವನ್ನು ನಿರ್ದೇಶಕ ಚೈತನ್ಯ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಹಂಚಿಕೊಂಡಿದ್ದಾರೆ. 'ನನ್ನ ಮೊದಲ ಸಿನಿಮಾ' ಲೇಖನ ಸರಣಿಯ ವಿಶೇಷವಾಗಿ ಅವರ ಮೊದಲ ಸಿನಿಮಾದ ಬಗ್ಗೆ ಮಾತನಾಡಿದ ಚೈತನ್ಯ ಹೆಮ್ಮೆಯಿಂದ 'ಆ ದಿನಗಳು' ಸಿನಿಮಾ ಹುಟ್ಟಿದ ಕಥೆಯನ್ನು ಹೇಳಿದ್ದಾರೆ...

    ಸಂದರ್ಶನ : ನವೀನ.ಎಂ.ಎಸ್. (ನವಿಕನಸು)

    ಮೊದಲು ಚಿತ್ರವನ್ನು ಬೇರೆ ನಿರ್ದೇಶಕರು ಮಾಡಬೇಕಿತ್ತು..

    ಮೊದಲು ಚಿತ್ರವನ್ನು ಬೇರೆ ನಿರ್ದೇಶಕರು ಮಾಡಬೇಕಿತ್ತು..

    ''ಅಗ್ನಿ ಶ್ರೀಧರ್ ಸರ್ ನನಗೆ ಒಂದು ಪಾರ್ಟಿಯಲ್ಲಿ ಪರಿಚಯ ಆಗಿದ್ದರು. ಆಮೇಲೆ ಒಮ್ಮೆ ಸುಮನಾ ಕಿತ್ತೂರ್ ಪೋನ್ ಮಾಡಿ 'ಸರ್ ನಿಮ್ಮನ್ನು ಮೀಟ್ ಮಾಡಬೇಕಂತೆ ಬನ್ನಿ' ಎಂದರು. ನಾನು ಹೋದಾಗ ಅವರು 'ಕಪ್ಪು ಮಳೆ' ಎಂಬ ಒಂದು ಸಿನಿಮಾ ಪ್ಲಾನ್ ಮಾಡುತ್ತಿದ್ದರು. ಆ ಚಿತ್ರದಲ್ಲಿ ಒಂದು ಪಾತ್ರ ಮಾಡಿ ಅಂತ ಹೇಳಿದರು. ಆಗ ನಾನು ಆಕ್ಟಿಂಗ್ ನನಗೆ ಅಷ್ಟು ಬರಲ್ಲ. ನಾನು ಡೈರೆಕ್ಟರ್ ಅಂದೆ. ಆಮೇಲೆ ಕುತೂಹಲದಿಂದ ಕಥೆ ಏನು ಅಂತ ಕೇಳಿದೆ. ಅವರು ಕಥೆ ಹೇಳಿದಾಗ ನನಗೆ ಅನಿಸಿದ ಕೆಲವು ಐಡಿಯಾಸ್ ಗಳನ್ನು ಹೇಳಿದೆ. ಆಮೇಲೆ ಮತ್ತೆ ಒಮ್ಮೆ ಅವರು ಸಿಕ್ಕಾಗ ಬೇರೆ ನಿರ್ದೇಶಕರ ಕೈನಲ್ಲಿ ಆ ಸಿನಿಮಾವನ್ನು ಮಾಡಿಸಬೇಕು ಅಂತ ಇದ್ದೇನೆ... ಯಾರ ಹತ್ತಿರ ಮಾಡಿಸಬಹುದು ಅಂತ ನನ್ನನ್ನು ಕೇಳಿದರು''.

    ಯಂಗ್ ಹುಡುಗ ಮಾಡಿದರೆ ಚೆನ್ನಾಗಿರುತ್ತೆ ಅಂತ ಗಿರೀಶ್ ಕಾರ್ನಡ್ ಹೇಳಿದರು

    ಯಂಗ್ ಹುಡುಗ ಮಾಡಿದರೆ ಚೆನ್ನಾಗಿರುತ್ತೆ ಅಂತ ಗಿರೀಶ್ ಕಾರ್ನಡ್ ಹೇಳಿದರು

    ''ನಾನು ಆಗ ನಾಗಾಭರಣ, ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಡ್ ಸೇರಿದಂತೆ ಕೆಲವು ನಿರ್ದೇಶಕರ ಹೆಸರನ್ನು ಸೂಚಿಸಿದೆ. ಕಾಸರವಳ್ಳಿ ಅವರು ಆಗ ಆ ಸಿನಿಮಾ ಮಾಡೋದಿಲ್ಲ ಅಂದ್ರು ಅನಿಸತ್ತೆ.. ಆಮೇಲೆ ನಾಗಾಭರಣ ಅವ್ರು ಫ್ರೀ ಇರಲಿಲ್ಲ. ಆಮೇಲೆ ಕಾರ್ನಾಡ್ ಅವರಿಗೆ ನಾನೇ ಫೋನ್ ಮಾಡಿ ಈ ರೀತಿಯ ಒಂದು ಸಿನಿಮಾ ಕಥೆ ಇದೆ ಎಂದಾಗ ಅವರು ಒಮ್ಮೆ ಬನ್ನಿ ಮಾತಾಡೋಣ ಎಂದರು. ಅವರ ಮನೆಗೆ ನಾನು, ಅಗ್ನಿ ಶ್ರೀಧರ್ ಅವರು ಹೋದಾಗ ಈ ಸಿನಿಮಾ ಮಾಡುವುದಕ್ಕೆ ನನಗೆ ತುಂಬ ವಯಸ್ಸಾಗಿದೆ. ಈ ಸಿನಿಮಾವನ್ನು ಯಾರಾದರು ಯಂಗ್ ಹುಡುಗ ಮಾಡಿದರೆ ಚೆನ್ನಾಗಿರುತ್ತೆ ಅಂತ ನನ್ನ ಕಡೆಗೆ ತೋರಿಸಿದರು. ಆಮೇಲೆ ಎರಡು ದಿನ ಆದ ಬಳಿಕ ಅಗ್ನಿ ಶ್ರೀಧರ್ ಸರ್ ಫೋನ್ ಮಾಡಿ ನೀವೇ ಈ ಸಿನಿಮಾ ಮಾಡಿದರೆ ಹೇಗೆ ಅಂತ ಹೇಳಿದರು... ನಾನು ಖುಷಿಯಿಂದ ಒಪ್ಪಿಕೊಂಡೆ.''

    ಗಿರೀಶ್ ಕಾರ್ನಾರ್ಡ್ ಸರ್ ಜೊತೆಗೆ ಕೆಲಸ ಮಾಡಿದ್ದೆ..

    ಗಿರೀಶ್ ಕಾರ್ನಾರ್ಡ್ ಸರ್ ಜೊತೆಗೆ ಕೆಲಸ ಮಾಡಿದ್ದೆ..

    ''ನಾನು ಈ ಚಿತ್ರಕ್ಕೂ ಮುಂಚೆ ಗಿರೀಶ್ ಕಾರ್ನಾರ್ಡ್ ಸರ್ ಜೊತೆಗೆ ಕೆಲಸ ಮಾಡಿದ್ದೆ. ಸಿ ಎನ್ ಎನ್ ಐ ಬಿ ಎನ್ ನಲ್ಲಿ ಕೆಲಸ ಮಾಡಿದ್ದೆ. ಬಿಬಿಸಿ ಚಾನಲ್ ಗೆ ಡಾಕ್ಯೂಮೆಂಟರಿ ಮಾಡಿದ್ದೆ. ದೇವನೂರು ಮಹದೇವ ಅವರ ಜೊತೆಗೆ 'ಕುಸುಮಬಾಲೆ' ಎನ್ನುವ ಟೆಲಿ ಸೀರಿಯಲ್ ಮಾಡಿದೆ. ನನ್ನ ಬಗ್ಗೆ ಅಗ್ನಿ ಶ್ರೀಧರ್ ಕೇಳಿದಾಗ ಅವರನ್ನು ಕೇಳಿದಾಗ ಅವರು ಸಹ ಪಾಸಿಟಿವ್ ಆಗಿ ಹೇಳಿದ್ದರು ಅನಿಸುತ್ತೆ. ಇದರಿಂದ ಶ್ರೀಧರ್ ಸರ್ ಗೆ ಸಹ ನಾನು ನಿಭಾಯಿಸುತ್ತೇನೆ ಎನ್ನುವ ನಂಬಿಕೆ ಬಂತು.''

    ಲವ್ ಸ್ಟೋರಿಯ ಮೂಲಕ ಅಂಡರ್ ವಲ್ಡ್ ನೋಡುವ ಪ್ರಯತ್ನ ಮಾಡಿದೆ

    ಲವ್ ಸ್ಟೋರಿಯ ಮೂಲಕ ಅಂಡರ್ ವಲ್ಡ್ ನೋಡುವ ಪ್ರಯತ್ನ ಮಾಡಿದೆ

    ''ಸಿನಿಮಾ ಒಪ್ಪಿಕೊಂಡಾಗ ಎರಡು ಬೇಡಿಕೆಯನ್ನು ಅವರ ಮುಂದೆ ಮಾಡಿಕೊಂಡೆ. ಅವರು ಹೇಳಿದ ಕಥೆಯಲ್ಲಿ ಚಿಕ್ಕ ಲವ್ ಸ್ಟೋರಿ ಇಣುಕುತ್ತಿತ್ತು. ನಾನು ಆ ಲವ್ ಸ್ಟೋರಿ ಮೂಲಕ ಇಡೀ ಸಿನಿಮಾದ ಕಥೆಯನ್ನು ಹೇಳಿದರೆ ಇನ್ನು ಚೆನ್ನಾಗಿರುತ್ತದೆ ಅಂತ ಹೇಳಿದೆ. ನಾನು ಲವ್ ಸ್ಟೋರಿಯ ಮೂಲಕ ಅಂಡರ್ ವಲ್ಡ್ ನೋಡುವ ಪ್ರಯತ್ನ ಮಾಡುತ್ತಿದೆ. ಅವರು ಯೋಚನೆ ಮಾಡಿ ಓಕೆ ಅಂದರು. ಆಮೇಲೆ ಗಿರೀಶ್ ಕಾರ್ನಾಡ್ ಸರ್ ಅನ್ನು ನಿಮ್ಮ ಜೊತೆಗೆ ಸ್ಕ್ರೀನ್ ಪ್ಲೇ ಬರೆಯೋಕ್ಕೆ ಸೇರಿಸಿಕೊಳ್ಳಿ ಅಂತ ಹೇಳಿದೆ. ಸರಿ.. ಅವರು ಒಪ್ಪಿದರೆ ಇಬ್ಬರು ಸೇರಿ ಮಾಡುತ್ತೇವೆ ಅಂದರು.. ಕಾರ್ನಾಡ್ ಕೂಡ ಒಪ್ಪಿದರು.. ಹೀಗೆ ನಮ್ಮ ಸಿನಿಮಾ ಶುರು ಆಯ್ತು.''

    'ಕಪ್ಪು ಮಳೆ'ಯಿಂದ ಆ ದಿನಗಳು ಆಯ್ತು..

    'ಕಪ್ಪು ಮಳೆ'ಯಿಂದ ಆ ದಿನಗಳು ಆಯ್ತು..

    ''ಮೊದಲು ಸಿನಿಮಾಗೆ 'ಕಪ್ಪು ಮಳೆ' ಅಂತ ಹೆಸರು ಇತ್ತು. ಶೂಟಿಂಗ್ ಮಾಡುವಾಗ ಒಮ್ಮೆ ಅತುಲ್ ಕುಲಕರ್ಣಿ ಇದು 'ದಾದಾಗಿರಿಯ ದಿನಗಳು' ಕಥೆ ಇಟ್ಟುಕೊಂಡು ಮಾಡುತ್ತಿರುವ ಸಿನಿಮಾ ಸೋ ಅದಕ್ಕೆ ಹತ್ತಿರ ಎನ್ನಿಸುವ ಟೈಟಲ್ ಚೆನ್ನಾಗಿರುತ್ತದೆ ಅಂತ ಹೇಳಿದರು. ನಾನು 'ಆ ದಿನಗಳು' ಅಂತ ಹೇಳಿದೆ. ಅದು ಎಲ್ಲರಿಗೂ ಇಷ್ಟ ಆಯ್ತು. ಹಾಗಾಗಿ ಟೈಟಲ್ ಬದಲಾವಣೆ ಮಾಡಿದ್ವಿ. ಯಾವಾಗಲೂ ಒಂದು ಕಾದಂಬರಿ ಮೇಲೆ ಸಿನಿಮಾ ಮಾಡಿದಾಗ ಸಿನಿಮಾವನ್ನು ಆ ಕಾದಂಬರಿ ಜೊತೆಗೆ ಹೊಂದಾಣಿಕೆ ಮಾಡಿ ನೋಡುತ್ತಾರೆ. ಆದರೆ ನಾನು ಆ ಪ್ರೇಮ ಕಥೆಯ ಮೂಲಕ ಚಿತ್ರದ ಕಥೆಯನ್ನು ಹೇಳಲು ಹೊರಟೆ. ಪುಸ್ತಕ ಸೇರಿಸಲು ಆಗದ ಎಷ್ಟೊ ಘಟನೆಗಳನ್ನು ಸಿನಿಮಾದಲ್ಲಿ ಸೇರಿಸಿದೆವೆ.''

    ಚೇತನ್ ರಂಗಭೂಮಿ ಸಂಶೋಧನೆ ಮಾಡಲು ಇಲ್ಲಿಗೆ ಬಂದಿದ್ದರು..

    ಚೇತನ್ ರಂಗಭೂಮಿ ಸಂಶೋಧನೆ ಮಾಡಲು ಇಲ್ಲಿಗೆ ಬಂದಿದ್ದರು..

    ''ಚೇತನ್ ರಂಗಭೂಮಿ ಸಂಶೋಧನೆ ಮಾಡಲು ಇಲ್ಲಿಗೆ ಬಂದಿದ್ದರು. ಶ್ರೀಧರ್ ಸರ್ ಅವರ 'ಎದೆಗಾರಿಕೆ' ನಾಟಕದಲ್ಲಿ ಅವರು ನಟಿಸಿದ್ದರು. ಶ್ರೀಧರ್ ಸರ್ ಚೇತನ್ ಅವರನ್ನು ಹಿರೋ ಮಾಡಿದರೆ ಹೇಗೆ ಅಂದರು.. ನಾನು ಕೂಡ ಚೇತನ್ ಅವರನ್ನು ನೋಡಿದೆ. ನನಗೆ ಇಷ್ಟ ಆಗಿ ಆಯ್ಕೆ ಮಾಡಿದ್ವಿ. ಹಿರೋಯಿನ್ ಪಾತ್ರಕ್ಕೆ ತುಂಬ ಜನ ನಟಿಯನ್ನು ನೋಡಿದ್ವಿ.. ಒಮ್ಮೆ ಸುಮನಾ ಕಿತ್ತೂರ್ ಅವರು ಒಂದು ವೆಬ್ ಸೈಟ್ ನಿಂದ ಅರ್ಚನಾ ಅವರ ಫೋಟೋ ತಂದರು. ಅವರು ಲುಕ್ ಪಾತ್ರಕ್ಕೆ ತಕ್ಕಂತೆ ಇತ್ತು. ಹೋಮ್ಲಿ ಹುಡಗಿಯಾಗಿ ಕಾಣುತ್ತಿದ್ದರು. ಅವರೇ ಸರಿ ಅನಿಸಿ ಅವರನ್ನು ಸೆಲೆಕ್ಟ್ ಮಾಡಿದ್ವಿ.''

    ಮೊದಲ ದಿನ ಮೊದಲ ಶಾಟ್ ಈಗಲೂ ನೆನಪಿದೆ..

    ಮೊದಲ ದಿನ ಮೊದಲ ಶಾಟ್ ಈಗಲೂ ನೆನಪಿದೆ..

    ''ಶ್ರೀಧರ್ ಅವರ ಹೆಂಡತಿ ನಮ್ಮ ಚಿತ್ರಕ್ಕೆ ಕ್ಲಾಪ್ ಮಾಡಿದ್ದರು. ಚಿತ್ರೀಕರಣದ ಮೊದಲ ಶಾಟ್ ಅನ್ನೇ ಕ್ರೈನ್ ಶಾಟ್ ತೆಗೆದೆ. ಆಗ ಕ್ಯಾಮರಾ ಮ್ಯಾನ್ ಆಗಿದ್ದ ವೇಣು ಸರ್ ಎಲ್ಲ ನಿರ್ದೇಶಕರು ಮೊದಲ ಶಾಟ್ ಅನ್ನು ತುಂಬ ಸಿಂಪಲ್ ಆಗಿ ತೆಗೆಯುತ್ತಾರೆ. ನೀವು ಮೊದಲ ಶಾಟ್ ನಲ್ಲಿಯೇ ಕ್ರೈನ್ ಮೇಲೆ ಕ್ಯಾಮರಾ ಇಟ್ಟಿದ್ದೀರ ಅಂತ ಹೊಗಳಿದರು. ಮೊದಲ ದಿನದ ಶೂಟಿಂಗ್ ಗಾಗಿ ನಮ್ಮ ಅಪ್ಪ, ಜೆ.ಎಸ್.ಶಿವರುದ್ರಪ್ಪ ಮತ್ತು ಗಿರೀಶ್ ಕಾರ್ನಾಡ್ ಸರ್ ಬಂದಿದ್ದರು. ಅದು ಬಹಳ ಮೆಮೋರೆಬಲ್ ಡೇ. ಆಮೇಲೆ ಮೊದಲ ದಿನ ಶೂಟಿಂಗ್ ಆದ ಮೇಲೆ ಅಗ್ನಿ ಸರ್ ಕೆಲವು ದೃಶ್ಯಗಳನ್ನು ನೋಡಬೇಕು ಅಂದರು. ನಾನು ತೆಗೆದ ಮೊದಲ ದಿನದ ಶಾಟ್, ಸೀನ್ ನೋಡಿ ನೀನು ಇದೇ ರೀತಿ ಇಡೀ ಸಿನಿಮಾ ತೆಗೆದರೆ ಇದು ಕನ್ನಡ ಚಿತ್ರರಂಗಕ್ಕೆ ಮಾಸ್ಟರ್ ಫೀಸ್ ಆಗುತ್ತದೆ ಅಂದರು.''

    ಇಳಯರಾಜ ಸಂಗೀತ ಚಿತ್ರದ ಒಂದು ಸ್ಕ್ರೀನ್ ಪ್ಲೇ ಆಗಿತ್ತು..

    ಇಳಯರಾಜ ಸಂಗೀತ ಚಿತ್ರದ ಒಂದು ಸ್ಕ್ರೀನ್ ಪ್ಲೇ ಆಗಿತ್ತು..

    'ಇಳಯರಾಜ ಸರ್ ಅವರಿಂದ ಚಿತ್ರಕ್ಕೆ ಸಂಗೀತ ಕೊಡಿಸಬೇಕು ಎಂಬುದು ನನ್ನ ಆಸೆ ಮತ್ತು ಶ್ರೀಧರ್ ಸರ್ ಅವರ ಆಸೆ ಆಗಿತ್ತು. ಆದರೆ ನಮ್ಮ ಸಿನಿಮಾದಲ್ಲಿ ಹಾಡು ಬೇಡ ಅಂತ ನಿರ್ಧಾರ ಮಾಡಿದ್ವಿ. ರಿಲೀಸ್ ಗಾಗಿ ಒಂದು ಎರಡು ಕಡೆ ಮಾನ್ಟೆಜ್ ಮ್ಯೂಸಿಕ್ ಇರಲಿ ಎನ್ನುವುದು ನನ್ನ ಆಸೆ ಆಗಿತ್ತು. ನಾವು ಹಾಡುಗಳನ್ನು ಸಪ್ರಟ್ ಆಗಿ ಶೂಟಿಂಗ್ ಮಾಡಿಲ್ಲ. ದಿನ ಟೈಂ ಇದ್ದಾಗ ಶಾಟ್ ಗಳನ್ನು ತೆಗೆದುಕೊಳ್ಳುತ್ತಿದೆ. ಎಲ್ಲರೂ ಸಿನಿಮಾಗೆ ಮುಂದೆ ಮ್ಯೂಸಿಕ್ ಡೈರೆಕ್ಟರ್ ಜೊತೆಗೆ ಮಾತನಡುತ್ತಾರೆ. ಆದರೆ ನಾವು ಇಡೀ ಸಿನಿಮಾ ಮುಗಿದ ಮೇಲೆ ಇಳಯರಾಜ ಸರ್ ಅತಹೊದ್ವಿ. ಅವರು ಸಿನಿಮಾ ನೋಡಿ ತುಂಬ ಇಷ್ಟ ಆಯ್ತು. ಅವರು ಎರಡು ಹಾಡು ಇದ್ದರೆ ಚೆನ್ನಾಗಿರುತ್ತದೆ ಎಂದರು. ಅದು ನಮಗೆ ಕೂಡ ಸರಿ ಅನಿಸಿತು. ಇಳಯರಾಜ ಸರ್ ಮ್ಯೂಸಿಕ್ ಯಾವಾಗಲೂ ಮ್ಯೂಸಿಕ್ ಆಲ್ ಸೋ ಒನ್ ಸ್ಕ್ರೀನ್ ಪ್ಲೇ ಅಂತ ಹೇಳುತ್ತಾರೆ ನಮ್ಮ ಸಿನಿಮಾ ಮೂರನೇ ಸ್ಕ್ರೀನ್ ಪ್ಲೇ ಅವರ ಮ್ಯೂಸಿಕ್ ಆಗಿತ್ತು.''

    ಅಚ್ಚುತ್ ಕುಮಾರ್ ನಟನೆಯ ಬಗ್ಗೆ ಅನೇಕರಿಗೆ ಡೌಟ್ ಇತ್ತು..

    ಅಚ್ಚುತ್ ಕುಮಾರ್ ನಟನೆಯ ಬಗ್ಗೆ ಅನೇಕರಿಗೆ ಡೌಟ್ ಇತ್ತು..

    ''ಪಾತ್ರಗಳ ಆಯ್ಕೆಯನ್ನು ನಾನು, ಶ್ರೀಧರ್ ಸರ್ ಮತ್ತು ಸುಮನಾ ಕಿತ್ತೂರ್ ಮೂರು ಜನ ಸೇರಿ ಮಾಡಿದ್ವಿ. ಅಗ್ನಿ ಶ್ರೀಧರ್ ಸರ್ ಪಾತ್ರಕ್ಕೆ ಅತುಲ್ ಕುಲಕರ್ಣಿ ಅವರನ್ನು ಹಾಕಬೇಕು ಎನ್ನುವುದು ನನ್ನ ಕೋರಿಕೆ ಆಗಿತ್ತು. ಶರತ್ ಲೋಹಿತಾಶ್ವ ಅವರು ಕೊತ್ವಾಲ್ ಪಾತ್ರಕ್ಕೆ ಸೂಟ್ ಆಗುತ್ತಾರೆ ಅಂತ ಅವರನ್ನು ಆಯ್ಕೆ ಮಾಡಿದ್ವಿ. ಆಡಿಷನ್ ಮೂಲಕ ಕೂಡ ಕೆಲವರನ್ನು ಆಯ್ಕೆ ಮಾಡಿದ್ವಿ. ಹೊಸ ಮುಖಗಳ ಬೇಕು ಎನ್ನುವುದು ನಮ್ಮ ಆಸೆ ಇತ್ತು. ಅಚ್ಚುತ (ಅಚ್ಚುತ್ ಕುಮಾರ್) ಅವರನ್ನು ಕುತೂಹಲದಿಂದ ಈ ಚಿತ್ರ ಕರೆ ತಂದೆ.. ಅದು ಅವರ ಮೊದಲ ಸಿನಿಮಾ ಆಗಿತ್ತು. ಅನೇಕರಿಗೆ ಆಯಿಲ್ ಕುಮಾರ್ ಪಾತ್ರವನ್ನು ಅವರು ಹೇಗೆ ಮಾಡುತ್ತಾರೆ ಎನ್ನುವ ಡೌಟ್ ಇತ್ತು. ಆದರೆ ನನಗೆ ಅವರ ಮೇಲೆ ನಂಬಿಕೆ ಇತ್ತು. ಆ ಟೈಂ ನಲ್ಲಿ ಇದ್ದ ಕೆಲವು ವ್ಯಕ್ತಿಗಳನ್ನು ಸಿನಿಮಾದ ಸಣ್ಣ ಪಾತ್ರದಲ್ಲಿ ಬಳಸಿಕೊಳ್ಳಲಾಗಿದೆ.

    ನಾವು ಯಾವುದೇ ಪಾತ್ರವನ್ನು ವೈಭವಿಕರಿಸಲಿಲ್ಲ..

    ನಾವು ಯಾವುದೇ ಪಾತ್ರವನ್ನು ವೈಭವಿಕರಿಸಲಿಲ್ಲ..

    ''ಚಿತ್ರ ಮಾಡುವಾಗ ನಮಗೆ ಯಾವುದೇ ತೊಂದರೆ ಆಗಲಿಲ್ಲ. ಯಾಕಂದ್ರೆ, ನಾವು ಯಾವುದೇ ಪಾತ್ರವನ್ನು ವೈಭವಿಕರಿಸಲಿಲ್ಲ. ಒಂದು ಕಾಲಘಟ್ವವನ್ನು ಸಿನಿಮಾದಲ್ಲಿ ಸೇರಿಹಿಡಿಯಬೇಕು ಎನ್ನುವುದು ಮಾತ್ರ ನಮ್ಮ ಉದ್ದೇಶವಾಗಿತ್ತು. ಸೆನ್ಸಾರ್ ಬೋರ್ಡ್ ನಿಂದ ಕೆಲವು ಸಣ್ಣ ತೊಂದರೆ ಬಂದರು. ಕೆಲವು ಪಾತ್ರದ ಹೆಸರನ್ನು ಬದಲಾಯಿಸಿದ್ವಿ.''

    ರಿಲೀಸ್ ಹಿಂದಿನ ದಿನ ನಾನು ನಿದ್ದೆ ಮಾಡಲೇ ಇಲ್ಲ..

    ರಿಲೀಸ್ ಹಿಂದಿನ ದಿನ ನಾನು ನಿದ್ದೆ ಮಾಡಲೇ ಇಲ್ಲ..

    ''ಸಿನಿಮಾದ ರಿಲೀಸ್ ಹಿಂದಿನ ದಿನ ನಾನು ನಿದ್ದೆ ಮಾಡಲೇ ಇಲ್ಲ. ರಾತ್ರಿ ಮೂರು ಗಂಟೆಯ ವರೆಗೆ ಕ್ಯಾಮಾರಾ ಮ್ಯಾನ್ ವೇಣು ಮತ್ತು ಎಡಿಟರ್ ಹರಿದಾಸ್ ಇಬ್ಬರ ಜೊತೆಗೆ ಇದ್ದೆ. ಅವರು ಭಯ ಪಡಬೇಡ ಸಿನಿಮಾ ಚೆನ್ನಾಗಿ ಓಡುತ್ತದೆ ಅಂದರು. ಬೆಳ್ಳಗೆ ಮೊದಲ ಶೋ ನೋಡಿ ಎಲ್ಲರೂ ಖುಷಿ ಪಟ್ಟರು. ನಮ್ಮ ತಂದೆ ಬಂದು ಇದು ಕಲಾತ್ಮಕ ಮತ್ತು ಕಮರ್ಶಿಯಲ್ ಸಿನಿಮಾ ಎರಡು ಸೇರಿ ಮಾಡಿರುವ ಅದ್ಬುತ ಸಿನಿಮಾ ಅಂದರು. ಆದರೆ, 35 ದಿನ ಸಿನಿಮಾ ಓಡಿದ ಮೇಲೆ ಭಯ ಶುರು ಆಯ್ತು. ಕಲೆಕ್ಷನ್ ಕಡಿಮೆ ಆಗುತ್ತಿತ್ತು. ಮತ್ತೆ ಒಳ್ಳೆಯ ವಾರ್ಡ್ ಆಫ್ ಮೌತ್ ಹಬ್ಬಿತ್ತು. ಜನ ಆಮೇಲೆ ಹೆಚ್ಚು ಬಂದರು 150 ದಿನ ಸಿನಿಮಾ ಓಡಿತು. ಒಳ್ಳೆಯ ಸಿನಿಮಾ ಆಗುತ್ತೆ ಅಂತ ಗೊತ್ತಿತ್ತು. ಆದರೆ ಹಿಟ್ ಆಗುತ್ತೆ ಅಂತ ಗೊತ್ತಿರಲಿಲ್ಲ. ಈಗಲೂ ಸಿನಿಮಾವನ್ನು ನೋಡಿದಾಗ ಕೆಲವು ತಪ್ಪುಗಳು ನನಗೆ ಕಾಣಿಸುತ್ತದೆ. ನನಗೆ ತುಂಬ ಹೆಮ್ಮೆ ಇದೆ ಆ ಸಿನಿಮಾ ಮಾಡಿದ್ದಕ್ಕೆ. ನನಗೆ ಮೊದಲ ಸಿನಿಮಾದಲ್ಲಿಯೇ ಒಂದು ಒಳ್ಳೆಯ ತಂಡ ಸಿಕ್ಕಿತು. ಒಳ್ಳೆಯ ನಟರು ಒಳ್ಳೆಯ ತಂತ್ರಜ್ಞರು ಸೇರಿ ಮಾಡಿರುವ ಸಿನಿಮಾ ಅದು''.

    English summary
    Nanna Modala Cinema Series: Kannada director chaitanya spoke about his first movie 'a dinagalu' in an exclusive interview with filmibeat kannada.
    Saturday, February 17, 2018, 14:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X