twitter
    For Quick Alerts
    ALLOW NOTIFICATIONS  
    For Daily Alerts

    'ಕೂಲ್ ಡ್ರಿಂಕ್ಸ್ ಬೇಡ.. ಎಳನೀರು ಇದ್ದರೆ ಚೆನ್ನಾಗಿರುತ್ತದೆ' ಎಂದಿದ್ದ ಅಪ್ಪು

    |

    ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವು ಇನ್ನು ಕರಗಿಲ್ಲ. ಅಭಿಮಾನಿಗಳು ಪ್ರತಿ ದಿನ ಪ್ರತಿ ಕ್ಷಣ ನೆಚ್ಚಿನ ನಟನ ನೆನಪಲ್ಲೇ ಕಳೆಯುತ್ತಿದ್ದಾರೆ. ಮನೆ ಮನಗಳಲ್ಲಿ ತಮ್ಮ ಪ್ರೀತಿಯ ಅಪ್ಪುನ ದೇವರ ಸ್ಥಾನದಲ್ಲಿರಿಸಿ ಪೂಜಿಸುತ್ತಿದ್ದಾರೆ. ಇದೀಗ 'ಲಕ್ಕಿಮ್ಯಾನ್' ಚಿತ್ರದಲ್ಲಿ ದಿವಂಗತ ನಟ ಪುನೀತ್ ರಾಜ್‌ಕುಮಾರ್ ದೇವರಾಗಿಯೇ ಎದ್ದು ಬರ್ತಿದ್ದಾರೆ.

    ಅಪ್ಪು ನಟನೆಯ ಕೊನೆಯ ಸಿನಿಮಾಗಳಲ್ಲಿ ಒಂದು 'ಲಕ್ಕಿಮ್ಯಾನ್'. ಪ್ರಭುದೇವಾ ಸಹೋದರ ನಾಗೇಂದ್ರ ಪ್ರಸಾದ್ ಈ ರೊಮ್ಯಾಂಟಿಕ್ ಫ್ಯಾಂಟಸಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತಾ ಶೃಂಗೇರಿ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದು ಅಪ್ಪು ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಸಾಂಗ್‌ವೊಂದು ರಿಲೀಸ್ ಆಗಿ ಸಿನಿರಸಿಕರ ಮನಗೆದ್ದಿದೆ. ಸೆಪ್ಟೆಂಬರ್‌ನಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.

    ಅಪ್ಪು ಫಸ್ಟ್ ಪೋಸ್ಟರ್ ವೈರಲ್; ಅಂದು ಕೊಟ್ಟ ಮಾತು ತಪ್ಪಿದ್ರಾ ಅಪ್ಪು?ಅಪ್ಪು ಫಸ್ಟ್ ಪೋಸ್ಟರ್ ವೈರಲ್; ಅಂದು ಕೊಟ್ಟ ಮಾತು ತಪ್ಪಿದ್ರಾ ಅಪ್ಪು?

    ನಿರ್ಮಾಪಕ ಜಾಕ್‌ ಮಂಜು ಭಾರೀ ಮೊತ್ತಕ್ಕೆ 'ಲಕ್ಕಿಮ್ಯಾನ್' ಚಿತ್ರದ ವಿತರಣೆ ಹಕ್ಕು ಖರೀದಿಸಿದ್ದಾರೆ. ಇಡೀ ಕರ್ನಾಟಕದ ವಿತರಣಾ ಹಕ್ಕುಗಳು ಒಂದೇ ದಿನದಲ್ಲಿ ಮಾರಾಟವಾಗಿ ದಾಖಲೆ ಬರೆದಿದ್ದು, ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಸಿದ್ಧತೆ ನಡೀತಿದೆ. ಸುಂದರ್‌ ರಾಜ್, ರಂಗಾಯಣ ರಘು, ನಾಗಭೂಷಣ್, ಸುಧಾ ಬೆಳವಾಡಿ, ಸಾಧುಕೋಕಿಲ, ರೋಶನಿ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ಪ್ರಭುದೇವಾ ಸಹೋದರ ನಾಗೇಂದ್ರ ಪ್ರಸಾದ್ ಕೊರಿಯೋಗ್ರಫರ್ ಆಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಕನ್ನಡ, ತಮಿಳು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ನಟಿಸಿದ್ದರು. ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್‌ ತೊಟ್ಟು ಆಕ್ಷನ್ ಕಟ್ ಹೇಳಿದ್ದಾರೆ. ಅಪ್ಪು 'ಲಕ್ಕಿಮ್ಯಾನ್' ಸಿನಿಮಾ ಭಾಗವಾಗಿದ್ದು ಹೇಗೆ ? ಅವರ ಜೊತೆ ಚಿತ್ರೀಕರಣದ ಅನುಭವ ಹೇಗಿತ್ತು ? ಅನ್ನುವುದನ್ನು ನಿರ್ದೇಶಕರು ಎಕ್ಸ್‌ಕ್ಲೂಸಿವ್ ಆಗಿ ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.

     'ಲಕ್ಕಿಮ್ಯಾನ್' ಶುರುವಾಗಿದ್ದು ಹೇಗೆ?

    'ಲಕ್ಕಿಮ್ಯಾನ್' ಶುರುವಾಗಿದ್ದು ಹೇಗೆ?

    "ಡಾ. ರಾಜ್‌ಕುಮಾರ್‌ ಸಿನಿಮಾಗಳನ್ನು ನೋಡಿ ಬೆಳೆದವರು ನಾವು. ನಮ್ಮ ತಂದೆ ಅಣ್ಣಾವ್ರ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದರು. 'ಹೊಸಬೆಳಕು' ಸಿನಿಮಾ ಶೂಟಿಂಗ್‌ ಸೆಟ್‌ಗೆಲ್ಲಾ ನಾನು ಹೋಗಿದ್ದೆ. ಅವರನ್ನು ನೋಡುತ್ತಾ ಮುಂದೆ ಕೊರಿಯೋಗ್ರಫರ್ ಆಗಿ ಆಕ್ಟರ್ ಆಗಿ ಬೆಳೆದವನು ನಾನು. ಆ ಫ್ಯಾಮಿಲಿಯವರ ಜೊತೆ ಏನಾದರೂ ಮಾಡಬೇಕು ಅನ್ನುವ ಕನಸಿತ್ತು. ಅಂತಹ ಸಮಯದಲ್ಲಿ ನಿರ್ಮಾಪಕರು ಬಂದು ಈ ಸಿನಿಮಾ ಬಗ್ಗೆ ಹೇಳಿದರು. ನಾನು ಖಂಡಿತ ಮಾಡ್ತೀನಿ. ಇದು ನನ್ನ ಕನಸು ನನಸಾಗುವಂತಹ ವಿಚಾರ. ಅಪ್ಪು ಸರ್ ಒಪ್ಪಿದರೆ ನಾನು ನಿರ್ದೇಶನ ಮಾಡ್ತೀನಿ ಎಂದೆ. ನನ್ನ ಅದೃಷ್ಟವೋ ತಂದೆ ತಾಯಿ ಆರ್ಶೀವಾದವೋ ಅಪ್ಪು ಸರ್‌ನ ಡೈರೆಕ್ಟ್ ಮಾಡುವ ಅವಕಾಶ ಸಿಕ್ತು. ನನ್ನ ಕನಸು ನನಸಾಯ್ತು ಅನ್ನುಬಹುದು. ಮೊದಲ ನಿರ್ದೇಶನದ ಸಿನಿಮಾದಲ್ಲೇ ನಟಿಸಿದರು. ಸೂಪರ್ ಸ್ಟಾರ್ ಒಬ್ಬರು ಈ ಪಾತ್ರ ಮಾಡ್ತೀ ಅಂದಿದ್ದೆ ದೊಡ್ಡ ವಿಷಯ. ಅಪ್ಪು ಸರ್ ಎಷ್ಟೋ ಸಹಾಯ ಮಾಡಿದ್ದಾರೆ ಎಂದು ಜನ ಹೇಳ್ತಾರೆ. ಈ ಸಿನಿಮಾ ಮೂಲಕ ನನಗೆ ಅವರು ಒಂದು ಬ್ರೇಕ್ ಕೊಟ್ಟಿದ್ದಾರೆ . ನಾನು ಕನ್ನಡದಲ್ಲಿ ಸಿನಿಮಾ ಮತ್ತೆ ಸಿನಿಮಾ ಮಾಡಬೇಕು ಅಂದುಕೊಂಡಿದ್ದೆ. 'ಲಕ್ಕಿಮ್ಯಾನ್' ಮೂಲಕ ಅದು ಸಾಧ್ಯವಾಯ್ತು, ಇದು ನನ್ನ ಅದೃಷ್ಟ".

    ಇದು ಅಪ್ಪು ಅಸಲಿ ಪವರ್‌: ರಿಲೀಸ್‌ಗೂ ಮೊದಲೇ 'ಲಕ್ಕಿಮ್ಯಾನ್' ಹೊಸ ದಾಖಲೆ!ಇದು ಅಪ್ಪು ಅಸಲಿ ಪವರ್‌: ರಿಲೀಸ್‌ಗೂ ಮೊದಲೇ 'ಲಕ್ಕಿಮ್ಯಾನ್' ಹೊಸ ದಾಖಲೆ!

     ವಿಜಯ್ ಸೇತುಪತಿ ಮಾಡಿದ್ದ ಪಾತ್ರದಲ್ಲಿ ಅಪ್ಪು ಸರ್?

    ವಿಜಯ್ ಸೇತುಪತಿ ಮಾಡಿದ್ದ ಪಾತ್ರದಲ್ಲಿ ಅಪ್ಪು ಸರ್?

    "ಅಪ್ಪು ಸರ್‌ಗೆ ಸ್ಕ್ರಿಪ್ಟ್ ಬಹಳ ಇಷ್ಟವಾಗಿತ್ತು. ಕನ್ನಡದಲ್ಲಿ ಏನೆಲ್ಲಾ ಬದಲಾವಣೆ ಮಾಡ್ತೀರಾ ಅಂದರು. ಯಾಕಂದ್ರೆ ತಮಿಳಿಗೆ ಆ ಕಥೆ ಓಕೆ. ಕನ್ನಡದಲ್ಲಿ ಅದನ್ನು ಹೇಗೆ ಮಾಡಬೇಕು ಅಂದಾಗ ಅದರಲ್ಲೂ ಅಪ್ಪು ಸರ್ ಕನ್ನಡದಲ್ಲಿ ದೊಡ್ಡ ನಟ, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಮಾಡ್ತಾರೆ ಅಂದಾಗ ಒಂದಷ್ಟು ಬದಲಾವಣೆ ಮಾಡಿಕೊಂಡ್ವಿ. ತುಂಬಾ ಚಾಲೆಂಜಿಂಗ್ ಅದನ್ನೆಲ್ಲಾ ಮಾಡಿದ್ವಿ. ಆರಂಭದಲ್ಲಿ ಒಂದಷ್ಟು ಚರ್ಚೆ ಮಾಡಿದ್ದರು. ನನ್ನ ಮೇಲೆ ಕಾನ್ಫಿಡೆಂಟ್ ಬಂದಮೇಲೆ ಓಕೆ ಮಾಡೋಣ ಅಂದರು."

     ಪ್ರಭುದೇವಾ ಜೊತೆ ಬೊಂಬಾಟ್ ಸಾಂಗ್?

    ಪ್ರಭುದೇವಾ ಜೊತೆ ಬೊಂಬಾಟ್ ಸಾಂಗ್?

    "ಎಲ್ಲರಿಗೂ ಗೊತ್ತಿರುವಂತೆ ಪ್ರಭುದೇವಾ ಇಂಡಿಯನ್ ಮೈಕಲ್ ಜಾಕ್ಸನ್. ಅದೇ ತರ ಕರ್ನಾಟಕ ಅಂದರೆ ಡಾ. ಪುನೀತ್‌ ರಾಜ್‌ಕುಮಾರ್ ಸೂಪರ್ ಡ್ಯಾನ್ಸರ್. ಇಬ್ಬರು ಲೆಜೆಂಡ್‌ಗಳನ್ನು ಒಂದೇ ವೇದಿಕೆ ಮೇಲೆ ಕರ್ಕೊಂಡು ಬರುವುದು ಹೇಗೆ? ಮಾಡೋಕೆ ಸಾಧ್ಯಾನಾ? ಅಂತ ಮೊದಲು ಅಪ್ಪು ಸರ್‌ನ ಅಪ್ರೋಚ್ ಮಾಡಿದ್ವಿ. ಸಡನ್ ಆಗಿ ಸರ್ ಒಪ್ಪಿದ್ರು. ಪ್ರಭುದೇವಾ ಜೊತೆ ಡ್ಯಾನ್ಸ್ ಮಾಡೋದು ನನ್ನ ಡ್ರೀಮ್‌ ಅಂದ್ರು. ನಾನು ಕೂಡಲೇ ಪ್ರಭುದೇನಾನ ಕೇಳ್ದೆ. ಅವರು ಕೂಡ ಕೂಡಲೇ ಡೇಟ್ ಎಲ್ಲಾ ಫಿಕ್ಸ್ ಮಾಡಿಬಿಟ್ಟರು. ನಿಜವಾಗಿಯೂ ಅದು ಮ್ಯಾಜಿಕ್. ಇಬ್ಬರನ್ನು ಸೆಟ್‌ನಲ್ಲಿ ಒಟ್ಟಿಗೆ ನೋಡಿದಾಗ ಇದು ಕನಸಾ, ನಿಜಾನಾ ಅನ್ನುವಂತಾಗಿತ್ತು. ಮೂರು ದಿನಗಳ ಕಾಲ ನಾಗರಬಾವಿ ಬಳಿ ಸಾಂಗ್‌ ಶೂಟ್ ಮಾಡಿದ್ವಿ."

     ಈ ಸಾಂಗ್ ಐಡಿಯಾ ಯಾರದ್ದು?

    ಈ ಸಾಂಗ್ ಐಡಿಯಾ ಯಾರದ್ದು?

    "ನಿಜಕ್ಕೂ ಇದು ಕನಸು. ನಾನು ಅಂದುಕೊಂಡಿದ್ದೆಲ್ಲಾ ನಡೀತಾ ಹೋಯಿತು. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಪ್ರಭುದೇವಾ ಜೊತೆ ಡ್ಯಾನ್ಸ್ ಮಾಡುವ ಬಗ್ಗೆ ಅಪ್ಪು ಸರ್ ಹೇಳಿದ್ದರು. ಅದು ನನಗೆ ನೆನಪಾಗಿ ಯಾಕೆ ಈ ಸಿನಿಮಾದಲ್ಲಿ ಮಾಡಬಾರದು ಎನ್ನಿಸಿತ್ತು. ದೇವರ ಮೇಲೆ ಭಾರ ಹಾಕಿ ಟ್ರೈ ಮಾಡ್ದೆ ಸಕ್ಸಸ್ ಆಯ್ತು. ನಿಜಕ್ಕೂ ಅದು ಒಂದು ಮ್ಯಾಜಿಕ್ ತೆರೆಮೇಲೆ ನೋಡಿ."

     ಕೊನೆ ಚಿತ್ರದಲ್ಲಿ ದೇವರಾಗಿ ಅಪ್ಪು?

    ಕೊನೆ ಚಿತ್ರದಲ್ಲಿ ದೇವರಾಗಿ ಅಪ್ಪು?

    "ಅಪ್ಪು ಸರ್ ನಿಜಕ್ಕೂ ದೇವರು. ಸಿನಿಮಾದಲ್ಲಿ ಒಂದು ವಿಷಯ ಇದೆ. ಸಿನಿಮಾ ನೋಡಿದರೆ ನಿಮಗೆ ಗೊತ್ತಾಗುತ್ತದೆ. ನಿಜಕ್ಕೂ ಆಶ್ಚರ್ಯ ಆಗುತ್ತದೆ. ಅವರು ದೇವರ ಪಾತ್ರ ಒಪ್ಪಿಕೊಂಡಿದ್ದು. ಈಗ ನೋಡಿದರೆ ಅವರು ದೇವರಾಗಿಬಿಟ್ಟಿದ್ದಾರೆ. ನಿಜವಾಗಲೂ ಶೂಟಿಂಗ್ ಮಾಡುವಾಗಲೂ ತುಂಬಾ ಕಂಫರ್ಟ್ ಆಗಿ ಮುಖದಲ್ಲಿ ಆ ತೇಜಸ್ಸು ಅಷ್ಟು ಚೆನ್ನಾಗಿತ್ತು. ಇದು ಯಾಕೆ ಏನು ಅಂತ ಯಾವತ್ತು ಕೇಳಲಿಲ್ಲ. ಸೊಸೈಟಿ ಬಗ್ಗೆ ಅವರಿಗೆ ಎಷ್ಟು ಕಾಳಜಿ ಅಂದರೆ, ದೃಶ್ಯವೊಂದರಲ್ಲಿ ಕೂಲ್‌ಡ್ರಿಂಕ್ಸ್ ಕುಡಿಯುವ ಬಗ್ಗೆ ಒಂದು ಸನ್ನಿವೇಶ ಇದೆ. ಕೂಲ್ ಡ್ರಿಂಕ್ಸ್ ಬದಲು ಎಳನೀರು ಇಡೋಣ ಅಂದರು. 10 ರೂಪಾಯಿ ಹೋದರೆ ರೈತರಿಗೆ ಹೋಗಲಿ ಎಳನೀರು ಕೊಡಿ ಎಂದು ಡೈಲಾಗ್ ಬರುತ್ತೆ. ಈ ರೀತಿ ಇದ್ದರೆ ಹೇಗಿರುತ್ತೆ ಎಂದು ಅಪ್ಪು ಸರ್ ಕೇಳಿದ್ರು. ನಾನು ಸೂಪರ್ ಸರ್ ಎಂದು ಒಪ್ಪಿಕೊಂಡೆ. ಕಂಪ್ಲೀಟ್ ಸಿನಿಮಾ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಥಿಯೇಟರ್‌ನಲ್ಲಿ ಸಿನಿಮಾ ನೋಡಿ".

    Recommended Video

    ಈ ಸಿನಿಮಾ ಮಾಡ್ತಾ ನನ್ನ ಕಾಲೆಜ್ ಡೇಸ್ ನೆನಪಾಯ್ತು | Anant Nag | Gaalipata 2 *Press Meet

    English summary
    Puneeth Rajkumar Starrer Luckyman Movie Director Nagendra Prasad Interview. Know More.
    Thursday, August 18, 2022, 11:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X