»   » ಸಂದರ್ಶನ: 'ರನ್ ಆಂಟನಿ' ಆಡಿಯೋ ಆಲ್ಬಂನ ಸ್ಪೆಷಾಲಿಟಿ ಏನು?

ಸಂದರ್ಶನ: 'ರನ್ ಆಂಟನಿ' ಆಡಿಯೋ ಆಲ್ಬಂನ ಸ್ಪೆಷಾಲಿಟಿ ಏನು?

By: ಹರ್ಷಿತಾ ರಾಕೇಶ್
Subscribe to Filmibeat Kannada

ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ ಸುಪುತ್ರ ವಿನಯ್ ರಾಜ್ ಕುಮಾರ್ ಅಭಿನಯದ ಎರಡನೇ ಚಿತ್ರ 'ರನ್ ಆಂಟನಿ' ಆಡಿಯೋ ಬಿಡುಗಡೆ ಆಗಿದೆ.

ನಿನ್ನೆ (ಮೇ 23) ಬೆಂಗಳೂರಿನ ಓರಾಯನ್ ಮಾಲ್ ಪಿವಿಆರ್ ಮಲ್ಟಿಪ್ಲೆಕ್ಸ್ ನಲ್ಲಿ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನದ 'ರನ್ ಆಂಟನಿ' ಚಿತ್ರದ ಆಡಿಯೋ ರಿಲೀಸ್ ಸಮಾರಂಭ ಅದ್ಧೂರಿಯಾಗಿ ನಡೆಯಿತು. ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ 'ರನ್ ಆಂಟನಿ' ಆಲ್ಬಂ ಬಿಡುಗಡೆ ಮಾಡಿದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೇರಿದಂತೆ ಇಡೀ ರಾಜ್ ಕುಟುಂಬ ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಿತ್ತು.


-
-
-
-
-
-
-
-
-
-
-
-

ಇದೇ ಗ್ಯಾಪ್ ನಲ್ಲಿ 'ರನ್ ಆಂಟನಿ' ಆಡಿಯೋ ಆಲ್ಬಂ ಸ್ಪೆಷಾಲಿಟಿ ಬಗ್ಗೆ ನಾವು ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಹಾಗೂ ನಟ ವಿನಯ್ ರಾಜ್ ಕುಮಾರ್ ಜೊತೆ ಮಾತಿಗಿಳಿದ್ವಿ. ಇಬ್ಬರ ಜೊತೆಗಿನ ಚುಟುಕು ಸಂದರ್ಶನದ ಆಯ್ದ ಭಾಗ ಇಲ್ಲಿದೆ, ಓದಿರಿ....


* ನಿಮ್ಮ 'ರನ್ ಆಂಟನಿ' ಆಡಿಯೋ ರಿಲೀಸ್ ಆಗಿದೆ. ಆಲ್ಬಂನಲ್ಲಿ ಸ್ಪೆಷಾಲಿಟಿ ಏನು.?
ವಿನಯ್ ರಾಜ್ ಕುಮಾರ್ - ಈ ಆಲ್ಬಂನಲ್ಲಿ ಎಲ್ಲಾ ರೀತಿಯ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ. ಅದೇ ಸ್ಪೆಷಾಲಿಟಿ. ಈ ಸಿನಿಮಾದಲ್ಲಿ ನನ್ನ ಚಿಕ್ಕಪ್ಪ (ಪುನೀತ್ ರಾಜ್ ಕುಮಾರ್) ಕೂಡ ಹಾಡಿದ್ದಾರೆ. ಅದೂ ಒಂದು ಸ್ಪೆಷಾಲಿಟಿ. ಹಾಡು ತೋರಿಸಿದ ತಕ್ಷಣ, ತುಂಬಾ ಇಷ್ಟ ಪಟ್ಟು 'ನಾನೇ ಹಾಡ್ತೀನಿ' ಅಂತ ಅವರು ಆ ಹಾಡನ್ನ ಹಾಡಿದ್ದಾರೆ. ಸಿನಿಮಾದಲ್ಲಿ ಎಲ್ಲಾ ಸಿಚ್ಯುಯೇಷನಲ್ ಸಾಂಗ್ಸ್. ತುಂಬಾ ಫೀಲ್ ಇದೆ. ಮಣಿಕಾಂತ್ ಕದ್ರಿ ತುಂಬಾ ಒಳ್ಳೆ ಮ್ಯೂಸಿಕ್ ಮಾಡಿದ್ದಾರೆ. ['ರನ್ ಆಂಟನಿ' ಟೀಸರ್ ಬಹಳ ಥ್ರಿಲ್ಲಿಂಗಾಗಿದೆ ಕಣ್ರೀ..!]


* 'ರನ್ ಆಂಟನಿ' ಆಲ್ಬಂ ನಲ್ಲಿ ನಿಮಗೆ ಇಷ್ಟವಾದ ಹಾಡು ಯಾವುದು?
ರಾಘವೇಂದ್ರ ರಾಜ್ ಕುಮಾರ್ - ಎಲ್ಲಾ ಹಾಡು ನನಗೆ ಇಷ್ಟ. ಅದರಲ್ಲೂ ಕ್ಲೈಮ್ಯಾಕ್ಸ್ ಹಾಡು ಭಾರಿ ಇಷ್ಟ. ಎಲ್ಲವೂ ಸಿಚ್ಯುಯೇಷನಲ್ ಸಾಂಗ್ಸ್. ಹಾಡು ಇರಬೇಕು ಎನ್ನುವ ಕಾರಣಕ್ಕೆ ಮಾಡಿದ್ದಲ್ಲ. ಹಾಡುಗಳನ್ನ ಕೇಳಿದ ತಕ್ಷಣ ಎಲ್ಲರಿಗೂ ಇಷ್ಟವಾಗುತ್ತೆ.


ವಿನಯ್ ರಾಜ್ ಕುಮಾರ್ - ಒಂದು ಅಂತ ಇಲ್ಲ. ಎಲ್ಲಾ ಹಾಡು ನನಗೆ ಇಷ್ಟ.


'ರನ್ ಆಂಟನಿ' ಚಿತ್ರದ ಮುಹೂರ್ತ ಸಮಾರಂಭದಲ್ಲಿ ರಾಘವೇಂದ್ರ ರಾಜ್ ಕುಮಾರ್ ಹಾಗೂ ವಿನಯ್ ರಾಜ್ ಕುಮಾರ್

* ಹಾಡುಗಳ ಚಿತ್ರೀಕರಣದ ಬಗ್ಗೆ....
ವಿನಯ್ ರಾಜ್ ಕುಮಾರ್ - ಒಂದು ಹಾಡು ಬೆಂಗಳೂರಿನಲ್ಲಿ ಶೂಟಿಂಗ್ ಮಾಡಿದ್ದೀವಿ. ಇನ್ನೊಂದು ಬೀದರ್ ನಲ್ಲಿ. ಮತ್ತೊಂದು ಕುದುರೆಮುಖ...ಹೀಗೆ ಕರ್ನಾಟಕದ ಒಳ್ಳೆ ಒಳ್ಳೆ ಲೊಕೇಷನ್ಸ್ ನಲ್ಲಿ ಶೂಟಿಂಗ್ ಮಾಡಿದ್ದೀವಿ. ಹಾಡುಗಳು ನೋಡಿದ್ರೆ, ನಿಮಗೆ ಗೊತ್ತಾಗುತ್ತೆ, ನಮ್ಮ ಕರ್ನಾಟಕದ ಲೊಕೇಷನ್ಸ್ ಬೇರೆ ಯಾವ ಫಾರಿನ್ ಗೂ ಕಡಿಮೆ ಇಲ್ಲ ಅಂತ. [ವಿನಯ್ ರಾಜ್ ಕುಮಾರ್ 'ರನ್ ಆಂಟನಿ' ಸ್ಪೆಷಾಲಿಟೀಸ್ ಗೊತ್ತಾ?]


* 'ರನ್ ಆಂಟನಿ' ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ....
ವಿನಯ್ ರಾಜ್ ಕುಮಾರ್ - ಸಿನಿಮಾದಲ್ಲಿ ನಾನು 'ರನ್ ಆಂಟನಿ'. ಒಂದ್ಕಡೆ ಇದ್ದಲ್ಲಿ ಇರಲ್ಲ. ನಿಂತಲ್ಲಿ ನಿಲ್ಲಲ್ಲ. ತುಂಬಾ ಓಡ್ತಾನೇ ಇರ್ತೀನಿ.


* 'ರನ್ ಆಂಟನಿ' ಮೂಲಕ ಚಿತ್ರ ನಿರ್ಮಾಣದಲ್ಲೂ ರಾಜ್ ಕುಟುಂಬದ ಮೂರನೇ ಜನರೇಷನ್ ಎಂಟ್ರಿ ಆಗಿದೆ. ಇದು ನಿಮ್ಮ ಎರಡನೇ ಮಗನ (ಗುರು ರಾಜ್ ಕುಮಾರ್) ಸಿನಿ ಪಯಣದ ಮೊದಲನೇ ಹೆಜ್ಜೆ ಅಂತ ಭಾವಿಸಬಹುದೇ.?
ರಾಘವೇಂದ್ರ ರಾಜ್ ಕುಮಾರ್ - ಮೊದಲು ಸಿನಿಮಾಗೆ ಬಿಟ್ಬಿಟಿದ್ದೀವಿ. ಇದರಲ್ಲಿ ನೋಡ್ತಾ-ನೋಡ್ತಾ ಅವನಿಗೂ ಆಸೆ ಬರುತ್ತೆ. ನನಗೂ ಹಾಗೇ ಆಯ್ತು. ಶಿವಣ್ಣ-ಅಪ್ಪು ಆಕ್ಟ್ ಮಾಡ್ತಿದ್ರು. ಅವರನ್ನ ನೋಡಿ ನಾನೂ ಕೂಡ ಮೆಡಿಕಲ್ ಬಿಟ್ಟು ಬಂದೆ. ಆ ತರಹ ಬ್ಲಡ್ ನಲ್ಲಿದ್ರೆ ಬಂದೇ ಬರುತ್ತಾರೆ.


* ಸಿನಿಮಾ ರಿಲೀಸ್ ಯಾವಾಗ?
ವಿನಯ್ ರಾಜ್ ಕುಮಾರ್ - ಇನ್ನೂ ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿ ಇದೆ. ಒಂದು ತಿಂಗಳ ನಂತರ 'ರನ್ ಆಂಟನಿ' ತೆರೆಗೆ ಬರಲಿದೆ.

English summary
Kannada Actor Vinay Rajkumar starrer 'Run Antony' audio has been released. Producer Raghavendra Rajkumar and Vinay Rajkumar spoke about the specialties of 'Run Antony' audio album with Filmibeat Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada