For Quick Alerts
  ALLOW NOTIFICATIONS  
  For Daily Alerts

  ಸಂದರ್ಶನ: ನಾನು ರಾಗಿಣಿ: ಅವಕಾಶ ಸಿಕ್ಕರೆ ರಾಜಕಾರಣಿ.!

  |

  ಸುದೀಪ್ ನಟನೆಯ 'ವೀರ ಮದಕರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ಅಭಿನಯದ ಒನಕೆ ಹಿಡಿದ ಓಬವ್ವ ಈ ರಾಗಿಣಿ. ಹೀರೋಯಿನ್ ಓರಿಯೆಂಟೆಡ್, ಆಕ್ಷನ್ ಚಿತ್ರಗಳಲ್ಲಿ ನಟಿಸುವುದರ ನಡುವೆಯೂ 'ತುಪ್ಪ ಬೇಕಾ ತುಪ್ಪ?' ಎಂದು ಕೇಳಿ ಗಮನ ಸೆಳೆದಾಕೆ.

  ವಿವಾದ, ವಿನೋದಗಳ ನಡುವೆ ಚಿತ್ರೋದ್ಯಮದ ದಶಕದ ಅನುಭವ ಪಡೆದಿದ್ದಾರೆ. ನಟನಾ ಬದುಕಿಗೆ ದಶಕ ತುಂಬಿರುವ ಈ ವಿಶೇಷ ಸಂದರ್ಭದಲ್ಲಿ ಅವರ ಜೊತೆಗೆ ಫಿಲ್ಮೀಬೀಟ್ ನಡೆಸಿರುವ ವಿಶೇಷ ಮಾತುಕತೆ ಇದು.

  ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ ರಾಗಿಣಿ ಮಾಡಿದ ಚಿತ್ರ ಎಷ್ಟು?

  ಕೊನೆಯದಾಗಿ ಟೆರರಿಸ್ಟ್ ಸಿನಿಮಾ ಮಾಡಿದ್ದ ರಾಗಿಣಿ ನಂತರ ಅದ್ಯಾಕೋ ಕಾಣಿಸಿಲ್ಲ. ಸ್ವಲ್ಪ ದಪ್ಪವಾಗಿದ್ದ ತುಪ್ಪದ ಹುಡುಗಿ ಜೀರೋ ಸೈಜ್ ಆಗಿ ಎಲ್ಲರ ಕಣ್ಣು ಕುಕ್ಕಿದ್ದರು. ಭವಿಷ್ಯದಲ್ಲಿ ರಾಜಕೀಯಕ್ಕೆ ಬರೋ ಸುಳಿವು ಕೂಡ ಕೊಟ್ಟರು. ಹಾಗಿದ್ರೆ, ಯಾವೆಲ್ಲಾ ವಿಷ್ಯಗಳ ಬಗ್ಗೆ ರಾಗಿಣಿ ಮಾತನಾಡಿದ್ರು? ಮುಂದೆ ಓದಿ...

   ನಿಮ್ಮ 'ಟೆರರಿಸ್ಟ್' ಚಿತ್ರಕ್ಕೆ ನಿರೀಕ್ಷಿತ ಗೆಲುವು ಸಿಗಲಿಲ್ಲ ಅಲ್ಲವೇ?

  ನಿಮ್ಮ 'ಟೆರರಿಸ್ಟ್' ಚಿತ್ರಕ್ಕೆ ನಿರೀಕ್ಷಿತ ಗೆಲುವು ಸಿಗಲಿಲ್ಲ ಅಲ್ಲವೇ?

  ಸಿಕ್ಕಿತು. ವಿಲನ್ ಜೊತೆಗೆ ಬಂದಿದ್ದ ಕಾರಣ ಹೈಪ್ ಇರಲಿಲ್ಲ. ಆದರೆ ಬಿಡುಗಡೆ ಬಳಿಕ ಸುದ್ದಿ ಮಾಡಿತ್ತು. ಚಿತ್ರದ ಡಬ್ಬಿಂಗ್ ರೈಟ್ಸ್ ಒಳ್ಳೆಯ ಮೊತ್ತಕ್ಕೆ ಸೇಲಾಯ್ತು. ದೊಡ್ಡ ಕಮರ್ಷಿಯಲ್ ಚಿತ್ರಗಳ ಹಾಗೆ ಇಪ್ಪತ್ತು ಕೋಟಿ ಕಲೆಕ್ಷನ್ ಮಾಡದೇ ಇರಬಹುದು. ಆದರೆ ನಿರ್ಮಾಪಕರಿಗೆ ಲಾಭ ತಂದಿರುವುದು ನಿಜ. ಅಂತಾರಾಷ್ಟ್ರೀಯ ಸಿನಿಮೋತ್ಸವಗಳಿಗೆ ಕಳುಹಿಸುತ್ತಿದ್ದೇವೆ.

   ಈ ವರ್ಷದ ನಿಮ್ಮ ಪ್ರಾಜೆಕ್ಟ್ ಗಳು ಯಾವುವು?

  ಈ ವರ್ಷದ ನಿಮ್ಮ ಪ್ರಾಜೆಕ್ಟ್ ಗಳು ಯಾವುವು?

  ಶರಣ್ ಜೊತೆಗೆ 'ಅಧ್ಯಕ್ಷ ಇನ್ ಅಮೆರಿಕ' ಸಿನಿಮಾ ಮಾಡುತ್ತಿದ್ದೇನೆ. ಪ್ರೇಮ್ ಜೊತೆಗೆ 'ಗಾಂಧಿಗಿರಿ' ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದೇನೆ. ಎರಡು ಬಾಲಿವುಡ್ ಸಿನಿಮಾಗಳ ಪ್ಲ್ಯಾನಿಂಗ್ ನಡೆದಿವೆ. ವರ್ಷದ ಸೆಕೆಂಡ್ ಹಾಫ್ ನಲ್ಲಿ ನಾಯಕಿ ಪ್ರಾಧಾನ್ಯತೆಯ ಚಿತ್ರಗಳು ಬರಲಿವೆ.

  ರಮ್ಯಾ ಬರ್ತಡೇಗೆ ವಿಶ್ ಮಾಡಿದ ರಾಗಿಣಿ ಇಟ್ಟ ಬೇಡಿಕೆ ಏನು.?

   ಝೀರೋ ಸೈಜ್ ಬದಲಾವಣೆಯಿಂದ ನಿಮಗೆ ಅನುಕೂಲಗಳಾಗಿವೆ?

  ಝೀರೋ ಸೈಜ್ ಬದಲಾವಣೆಯಿಂದ ನಿಮಗೆ ಅನುಕೂಲಗಳಾಗಿವೆ?

  ನಾನು ಝೀರೋ ಸೈಜ್ ಆಗಿಲ್ಲ. ಅದಕ್ಕೆ ಇನ್ನೂ ತುಂಬ ಸಣ್ಣ ಆಗಬೇಕು. ಆದರೆ ನಾನು ಹೆಲ್ತಿಯಾಗಿದ್ದೀನಿ ಎಂದು ಹೇಳಬಲ್ಲೆ. ಆಕ್ಷನ್ ದೃಶ್ಯಗಳಲ್ಲಿ ಏಟಾಗಿ ಸರ್ಜರಿ ಆಗಿರುವುದರಿಂದ ಆಂಟಿ‌ಬಯಾಟಿಕ್ಸ್ ತೆಗೆದುಕೊಳ್ಳುವ ಜೊತೆಗೆ ಬಾಡಿ ಮೇನ್ಟೇನ್ ಮಾಡಲು ಸ್ವಲ್ಪ ಸಮಯ ತೆಗೆದುಕೊಂಡೆ. ಕೆಲವರು ನಾನು ಇಂಡಸ್ಟ್ರಿ ಬಿಟ್ಟೆ ಎಂದುಕೊಂಡಿದ್ದರು. ಆದರೆ ಕಂಪ್ಲೀಟ್ ವರ್ಕೌಟ್ ಮಾಡಿ ಬಂದೆ.‌ ನನಗೆ ಈ ಬದಲಾವಣೆ ಅರೋಗ್ಯಕರವಾಗಿದೆ.

   ಹಾರ್ಮೋನ್ ಪ್ರಾಬ್ಲಮ್ ಗಳಿಂದ ದಪ್ಪ ಆದವರಿಗೂ ಸುಲಭ ಪರಿಹಾರ ಇದೆ ಅಂತೀರ?

  ಹಾರ್ಮೋನ್ ಪ್ರಾಬ್ಲಮ್ ಗಳಿಂದ ದಪ್ಪ ಆದವರಿಗೂ ಸುಲಭ ಪರಿಹಾರ ಇದೆ ಅಂತೀರ?

  ಹಾರ್ಮೋನ್ ಪ್ರಾಬ್ಲಮ್ ಹಲವು ರೀತಿಯಲ್ಲಿರುತ್ತದೆ. ಮುಖ್ಯವಾಗಿ ನ್ಯೂಟ್ರಿಶ್ಯನ್ ಸಲಹೆಗಳನ್ನು ಶಿಸ್ತಿನಿಂದ ಅನುಸರಿಸಬೇಕು. ತಿನ್ನೋದು ಕಡಿಮೆ ಮಾಡಿದರೆ ಸಣ್ಣಾಗುತ್ತಾರೆ ಎನ್ನುವುದು ರಾಂಗ್ ಕಾನ್ಸೆಪ್ಟ್. ಏನನ್ನು ತಿನ್ನಬೇಕು ಎನ್ನುವುದನ್ನು ವೈದ್ಯರ ಸಲಹೆಯಂತೆ ಅನುಸರಿಸುವುದೇ ಮುಖ್ಯ. ಬ್ಲಡ್ ಗ್ರೂಪ್ ಡಯಟ್, ಕಿಟೋ ಡಯಟ್ ಪ್ಲ್ಯಾನ್ ಗಳು ಈಗ ಜಗತ್ತಲ್ಲೇ ಜನಪ್ರಿಯವಾಗಿವೆ.

  ರಿಯಲ್ ಸುದ್ದಿ: ಬೀದಿಬೀದಿಯಲ್ಲಿ ಸೌತೇಕಾಯಿ, ಮಾವಿನಕಾಯಿ ಮಾರಿದ ರಾಗಿಣಿ

   ನೀವು ಇತ್ತೀಚೆಗೆ ನೋಡಿ ಮೆಚ್ಚಿದ ಚಿತ್ರ ಯಾವುದು?

  ನೀವು ಇತ್ತೀಚೆಗೆ ನೋಡಿ ಮೆಚ್ಚಿದ ಚಿತ್ರ ಯಾವುದು?

  ನನಗೆ ಇತ್ತೀಚೆಗೆ ಸಿನಿಮಾಗಳನ್ನೇ ನೋಡಲು ಸಾಧ್ಯವಾಗಿಲ್ಲ. ನನ್ನ ತಂದೆ ಆರ್ಮಿಯಲ್ಲಿರುವ ಕಾರಣ ಇತ್ತೀಚೆಗೆ 'ಕೇಸರಿ ' ಎನ್ನುವ ಆರ್ಮಿ ಕುರಿತಾದ ಚಿತ್ರ ನೋಡಿದೆ. ಅದು ನಾವು ಫ್ಯಾಮಿಲಿ ಸಮೇತ ನೋಡಿದಂಥ ಚಿತ್ರ.‌ ರೀಸೆಂಟ್ ರಿಲೀಸ್ ಸಿನಿಮಾಗಳಲ್ಲಿ ಒಂದಷ್ಟು ಚಿತ್ರಗಳನ್ನು ನೋಡಬೇಕಿದೆ. ಟ್ರಾವೆಲಿಂಗ್ ನಲ್ಲಿ ಇದ್ದ ಕಾರಣ ಸಿನಿಮಾ ನೋಡಲು ಸಾಧ್ಯವಾಗಿರಲಿಲ್ಲ. ಮುಂದಿನ ವಾರ ಫುಲ್ ರಜ ಹಾಕಿ ಥಿಯೇಟರಲ್ಲೇ ಕಳೆಯೋಣ ಅಂತ ಇದ್ದೀನಿ!

   ಈ 10 ವರ್ಷಗಳಲ್ಲಿ ಎಂದೂ ಮರೆಯಲಾಗದ ಒಂದು ಸಂದರ್ಭ ಯಾವುದು?

  ಈ 10 ವರ್ಷಗಳಲ್ಲಿ ಎಂದೂ ಮರೆಯಲಾಗದ ಒಂದು ಸಂದರ್ಭ ಯಾವುದು?

  ತುಂಬ ಘಟನೆಗಳಿವೆ. ಆದರೆ ಎಂದು ಮರೆಯದ ಒಂದು ವಿಚಾರವಿದೆ. ಅದು ನನ್ನ ಬರ್ತ್ ಡೇ ದಿನವೇ ನನ್ನ ಹೆಸರಿನ ಸಿನಿಮಾ ಲಾಂಚ್ ಆಗಿದ್ದು. ಅವತ್ತೇ ಫ್ಯಾನ್ಸ್ ಅಸೋಸಿಯೇಷನ್ ರಿಜಿಸ್ಟರ್ ಆಗಿದ್ದು ಎಲ್ಲ ಮರೆಯಲಾಗದ ಘಟನೆಗಳು. ಮಂಜು ಸರ್ ರಾಗಿಣಿ ಐಪಿಎಸ್ ಗೆ ಅದೇ ದಿನ ಮುಹೂರ್ತ ಇಟ್ಟುಕೊಂಡಿದ್ದು, ಮಾಲಾಶ್ರೀ ಮೇಡಂ ಬಂದು ಕ್ಲ್ಯಾಪ್ ಮಾಡಿದ್ದು ಎಲ್ಲವನ್ನು ನನಗೆ ಎಂದಿಗೂ ಮರೆಯಲಾಗದು.

   ನಿಮ್ಮ ಫ್ಯಾನ್ಸ್ ಅಸೋಸಿಯೇಷನ್ ಈಗಲೂ ಆಕ್ಟಿವ್ ಆಗಿದೆಯಾ?

  ನಿಮ್ಮ ಫ್ಯಾನ್ಸ್ ಅಸೋಸಿಯೇಷನ್ ಈಗಲೂ ಆಕ್ಟಿವ್ ಆಗಿದೆಯಾ?

  ಖಂಡಿತವಾಗಿಯೂ. ಅವರೇ ಪ್ರತಿ ವರ್ಷ ನನ್ನ ಬರ್ತ್ ಡೇಯ ಸಂಭ್ರಮ ಹೆಚ್ಚಿಸುವುದು. ಅವರೊಂದಿಗೆ ನಾನು ಕೂಡ ಕೈ ಜೋಡಿಸಿ ರಾಜ್ಯಾದ್ಯಂತ ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ತೊಡಗುತ್ತೇನೆ. ಮಹಿಳೆಯರ ಸಬಲೀಕರಣದ ಬಗ್ಗೆಯೂ ಯೋಜನೆಗಳಿವೆ.‌ ನೋಡೋಣ.

   ರಾಜಕೀಯರಂಗ ಪ್ರವೇಶಿಸುವ ಸಾಧ್ಯತೆ ಇದೆಯಾ?

  ರಾಜಕೀಯರಂಗ ಪ್ರವೇಶಿಸುವ ಸಾಧ್ಯತೆ ಇದೆಯಾ?

  ನನಗೆ ರಾಜಕೀಯದಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ಪ್ರವೇಶ ಮಾಡಿದರೆ ತಪ್ಪೇನು? ನನ್ನಲ್ಲಿ ಇಷ್ಟೆಲ್ಲ ಅಭಿಮಾನ ಇರಿಸಿದವರಿಗಾಗಿ ನಾನು ಕೂಡ ಏನಾದರೂ ಸೇವೆ ಮಾಡಬೇಕು ಎನ್ನುವುದು ನನ್ನ ಸಹಜ ಅಭಿಲಾಷೆ. ವೈಯಕ್ತಿಕವಾಗಿ ನಾನು ಬಿಜೆಪಿ.‌ ಆದರೆ ಈ ಬಾರಿ ಅದೇ ಪಕ್ಷವೇ ಅಧಿಕಾರಕ್ಕೆ ಬರಬೇಕು ಎಂಬ ಹಠ ನನಗಿಲ್ಲ. ಅಧಿಕಾರಕ್ಕೆ ಬರುವ ಪಕ್ಷ ಯಾವುದೇ ಆದರೂ ಜನತೆಗೆ ಉತ್ತಮ ಸೇವೆ ನೀಡಬೇಕು ಎನ್ನುವುದಷ್ಟೇ ಆಗ್ರಹ.

  English summary
  Interview: If ragini dwivedi get chance, definitely she will enter to political and stand for people.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X