Just In
Don't Miss!
- News
ಭಾರತದ ಗೆಲುವನ್ನು ಕಾಂಗ್ರೆಸ್ ಪ್ರದರ್ಶನಕ್ಕೆ ಹೋಲಿಸಿದ ಸಂಜಯ್ ಝಾ
- Sports
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್: ಅಗ್ರ ಸ್ಥಾನಕ್ಕೇರಿದ ಟೀಮ್ ಇಂಡಿಯಾ
- Automobiles
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- Education
SBI PO Mains Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಂದರ್ಶನ : ಅಪ್ಪನನ್ನು ಬಿಟ್ಟರೆ ಕನ್ನಡದ ಈ ಸ್ಟಾರ್ ನಿವೇದಿತಾಗೆ ಬಹಳ ಇಷ್ಟ
ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ಅವರ 'ಅಂಡಮಾನ್' ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡವರು ಅವರ ಕಿರಿಯ ಪುತ್ರಿ ನಿವೇದಿತಾ. ಪ್ರಸ್ತುತ ಕಿರುತೆರೆಯಲ್ಲಿ ನಿರ್ಮಾಪಕಿಯಾಗಿ ಹಿರಿ ಹೆಜ್ಜೆ ಇಟ್ಟಿರುವ ನಿವಿಯವರೊಂದಿಗೆ ಶಿವಣ್ಣನ ಕುರಿತಾಗಿ ನಡೆಸಲಾದ ಮಾತುಕತೆ ಇದು.
ನಿವೇದಿತಾ ಶಿವರಾಜ್ ಕುಮಾರ್ ಸಂದರ್ಶನಗಳು ಬಹಳ ಕಡಿಮೆ. ಹಾಗಾಗಿ ತಮ್ಮ ತಂದೆಯ ಬಗ್ಗೆ ನಿವೇದಿತಾ ಏನು ಹೇಳುತ್ತಾರೆ ಎನ್ನುವ ಕುತೂಹಲ ಅನೇಕರಿಗೆ ಇರುತ್ತದೆ.
'ಸೀರಿಯಲ್ ಕ್ಷೇತ್ರ'ಕ್ಕೆ ಕಾಲಿಟ್ಟ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ
ವಿಶ್ವ ತಂದೆಯಂದಿರ ದಿನಾಚರಣೆಯಾದ ನಿನ್ನೆ (ಜೂನ್ 16) ಸ್ಟಾರ್ ತಂದೆಯ ಮಗಳ ಜತೆಗೆ ನಡೆಸಿದ ವಿಶೇಷ ಸಂದರ್ಶನವನ್ನು ಫಿಲ್ಮಿಬೀಟ್ ನಿಮಗೆ ಇಲ್ಲಿ ನೀಡುತ್ತಿದೆ. ಇವರು ಕಲಾ ಕುಟುಂಬದ ಮೂರನೇ ತಲೆಮಾರಿನವರು ಎನ್ನುವುದು ಮತ್ತೊಂದು ವಿಶೇಷ. ಶಿವರಾಜ್ ಕುಮಾರ್ ಅವರು ತಂದೆಯಾಗಿ ತಮ್ಮ ಮಕ್ಕಳ ಕಣ್ಣಲ್ಲಿ ಹೇಗೆ ಕಾಣಿಸುತ್ತಾರೆ ಎನ್ನುವ ಝಲಕ್ ಇಲ್ಲಿದೆ.
ಒಂದೇ ಅಂತ ಇಲ್ಲ. ಎಲ್ಲವೂ ಚಿಕ್ಕ ಚಿಕ್ಕ ಘಟನೆಗಳು.

ನಿಮಗೆ ತಂದೆಯ ಜತೆಗೆ ತುಂಬ ಸ್ಪೆಷಲ್ ಆದ ದಿನಗಳು ಅಥವಾ ಘಟನೆ ಯಾವುದು?
ಒಂದೇ ಅಂತ ಇಲ್ಲ. ಎಲ್ಲವೂ ಚಿಕ್ಕ ಚಿಕ್ಕ ಘಟನೆಗಳು. ನಡೆಯುತ್ತಲೇ ಇರುತ್ತವೆ. ನಾವು ಯಾವತ್ತೂ ತುಂಬ ದಿನ ದೂರವಾಗಿದ್ದೇ ಇಲ್ಲ. ಚಿಕ್ಕಂದಿನಿಂದಲೂ ಪಪ್ಪ ಜತೆಗೆ ಹೆಚ್ಚು ಸಮಯ ಕಳೆಯುತ್ತಿದ್ದೇನೆ. ಅವರ ಶೂಟಿಂಗ್ ಆಗುತ್ತಿದ್ದ ಜಾಗಕ್ಕೆಲ್ಲ ನಾನು ಮಮ್ಮಿ ಟ್ರಿಪ್ ತರಹ ಹೋಗುವ ಅಭ್ಯಾಸ ಇಟ್ಟಕೊಂಡಿದ್ವಿ. ನಾನು ದೊಡ್ಡ ಕ್ಲಾಸ್ ಆದ ಮೇಲೆ ಎಕ್ಸಾಮ್ಸ್ ಎಲ್ಲ ಸ್ಟಾರ್ಟ್ ಆದ ಮೇಲೆ ಅದನ್ನು ಸ್ಟಾಪ್ ಮಾಡ್ದೆ. ಈಗ ಪ್ರತಿ ವರ್ಷಕ್ಕೊಮ್ಮೆ ಹಾಲಿಡೇ ಟೂರ್ ಹೋಗ್ತೀವಿ. ಅದು ತುಂಬ ಸ್ಪೆಷಲ್ ಆಗಿರುತ್ತೆ. ಚಿಕ್ಕೋಳಿರಬೇಕಾದ್ರೆ ನಾನು ಅವರೊಂದಿಗೆ ಒಂದು ಸಿನಿಮಾ ಮಾಡಿದ್ದೆ. ಅದು ನನಗೆ ಮರೆಯಲಾಗದ ಚಿತ್ರ. ಆ ದಿನಗಳೆಲ್ಲ ಅಷ್ಟೇನೂ ನೆನಪಿಲ್ಲ. ಆದರೆ ಆ ಸಿನಿಮಾ ನೋಡುವಾಗ ತುಂಬಾನೇ ಇಷ್ಟವಾಗುತ್ತೆ.
ಹೊಸ ಸಾಹಸಕ್ಕೆ ಕೈ ಹಾಕಿದ ಶಿವಣ್ಣನ ಮಗಳು ನಿವೇದಿತಾ

ತಂದೆಯ ಬರ್ತ್ ಡೇ ಅಥವಾ ನಿಮ್ಮ ಬರ್ತ್ ಡೇ ಸಂದರ್ಭದಲ್ಲಿನ ಸರ್ ಪ್ರೈಸ್ ಗಿಫ್ಟ್ ಗಳ ಬಗ್ಗೆ ಹೇಳಿ.
ನನ್ನ ಬರ್ತ್ ಡೇಗೆ ಪ್ರತಿ ಬಾರಿ ಎಲ್ಲರೂ ಒಟ್ಟಾಗಿರುತ್ತೇವೆ. ಅದಕ್ಕಿಂತ ಪಪ್ಪನ ಬರ್ತ್ ಡೇ ನನಗೆ ತುಂಬ ಸ್ಪೆಷಲ್ ಅನಿಸುತ್ತೆ. ಯಾಕೆಂದರೆ ಅವರ ಜನ್ಮದಿನಕ್ಕೆ ಸಾಮಾನ್ಯವಾಗಿ ಬೆಳಗ್ಗಿಂದ ಫ್ಯಾನ್ಸ್ ಜತೆಯಲ್ಲೇ ಇರ್ತಾರೆ. ಸಂಜೆ ಹೊತ್ತಿಗೆ ನಮಗೆ ಫ್ರೀಯಾಗಿ ಸಿಗುತ್ತಾರೆ. ಅವರಿಗೆ ಈಗಲೂ ಗಿಫ್ಟ್ ತಗೊಳೋದು ಅಂದರೆ ತುಂಬ ಇಷ್ಟ. ಅಂದರೆ ಪ್ಯಾಕ್ ಆಗಿರುವುದನ್ನು ತೆಗೆದು ನೋಡೋದು ಎಲ್ಲ ಅವರಿಗೆ ಖುಷಿ. ನಾನು ಮಮ್ಮಿ ಆ ತರಹ ಪ್ಲ್ಯಾನ್ ಮಾಡಿಕೊಂಡಿರುತ್ತೇವೆ. ಅವರಿಗೆ ಜೀನ್ಸು ಮುಂತಾದ ಬಟ್ಟೆಗಳೆಲ್ಲ ತುಂಬ ಇಷ್ಟ.

ನಿಮ್ಮ ತಂದೆ ನಟಿಸಿದ ಚಿತ್ರಗಳಲ್ಲಿ ನಿಮಗೆ ಇಷ್ಟವಾದ ಸಿನಿಮಾ ಮತ್ತು ಹಾಡುಗಳ ಬಗ್ಗೆ ಹೇಳಿ
ನನಗೆ ಪಪ್ಪನ ಎಲ್ಲ ಮೂವೀಸ್ ಇಷ್ಟ. ಅವರ ಸಿನಿಮಾಗಳಲ್ಲಿ ಹಳೆಯದನ್ನು ಕೂಡ ಇಷ್ಟಪಡುತ್ತೇನೆ. ಉದಾಹರಣೆಗೆ `ಇನ್ಸ್ ಪೆಕ್ಟರ್ ವಿಕ್ರಂ' ಮತ್ತು `ಆಸೆಗೊಬ್ಬ ಮೀಸೆಗೊಬ್ಬ' ಚಿತ್ರಗಳಲ್ಲಿನ ಹಾಸ್ಯವನ್ನು ತುಂಬ ಎಂಜಾಯ್ ಮಾಡುತ್ತೇನೆ. ಇತ್ತೀಚಿನ ಸಿನಿಮಾಗಳಲ್ಲಿ ರಿಷಿ, ಮಫ್ತಿ, ಟಗರು ಸಿನಿಮಾಗಳು ನನಗೆ ಫೇವರಿಟ್. ಟಗರುದು ಸಾಂಗ್ ಕೂಡ ನನಗೆ ತುಂಬ ಇಷ್ಟ. ಹಾಗಂತ ಪಾಸ್ಟ್ ಸಾಂಗ್ಸ್ ಮಾತ್ರವಲ್ಲ, ಆನಂದ್ ಚಿತ್ರದ ಮೆಲೋಡಿ ಗೀತೆಗಳೂ ನನಗೆ ಇಷ್ಟವಾಗುತ್ತವೆ.

ನಿಮ್ಮ ಪ್ರಕಾರ ಶಿವಣ್ಣ ಯಾವ ರೀತಿಯ ಚಿತ್ರಗಳಲ್ಲಿ ಕಾಣಿಸಿಕೊಂಡರೆ ಚೆನ್ನಾಗಿರುತ್ತದೆ?
ನನಗೆ ಮಫ್ತಿ ರೀತಿಯ ಪಾತ್ರಗಳು ತುಂಬ ಇಷ್ಟ. ಅಂದರೆ ಅವರನ್ನು ಸ್ಟೈಲಿಷ್ ಆಗಿ ತೋರಿಸುವುದರ ಜತೆಯಲ್ಲೇ ಕ್ಯಾರೆಕ್ಟರ್ ಕೂಡ ತುಂಬ ಸ್ಟ್ರಾಂಗ್ ಆಗಿರಬೇಕು. ಅದೇ ವೇಳೆ ಅವರು ಚೆನ್ನಾಗಿ ಕಾಮಿಡಿ ಮಾಡುತ್ತಾರೆ. ಅಂಥ ಪಾತ್ರಗಳನ್ನು ಮಾಡಿದಾಗಲೂ ಇಷ್ಟವಾಗುತ್ತಾರೆ. ಆದರೆ, ಇತ್ತೀಚೆಗೆ ಮಫ್ತಿ, 'ಕವಚ'ದ ಸೀರಿಯಸ್ ಪಾತ್ರಗಳನ್ನು ಅವರು ಮಾಡಿರೋದು ನೋಡಿದರೆ ಅಂಥ ಇನ್ನಷ್ಟು ಪಾತ್ರಗಳಲ್ಲಿ ಅವರನ್ನು ನೋಡಬೇಕು ಅನ್ಸುತ್ತೆ. ಇತ್ತೀಚೆಗೆ ಅಜಿತ್ ಅವರ 'ವಿಶ್ವಾಸಂ' ಎನ್ನುವ ಸಿನಿಮಾ ಬಂದಿತ್ತು. ಆ ರೀತಿಯ ಪಾತ್ರಗಳಲ್ಲಿ ಅವರು ನಟಿಸಬೇಕು ಎನ್ನುವುದು ನನ್ನ ಆಸೆ.

ನಿಮ್ಮ ಮೆಚ್ಚಿನ ನಟ ಯಾರು?
ಅಫ್ ಕೋರ್ಸ್ ಪಪ್ಪ ಬಿಟ್ಟರೆ ನನಗೆ ಅಪ್ಪು ಚಿಕ್ಕಪ್ಪ ಇಷ್ಟ. ವಿನಯ್ ಇಷ್ಟ. ಆಮೇಲೆ ಧಿರೇನ್ ಕೂಡ ಚೆನ್ನಾಗಿ ನಟಿಸುತ್ತಾನೆ ಅನ್ನೋದು ನನಗೆ ಈಗಲೇ ಗೊತ್ತು. ಫ್ಯಾಮಿಲಿಯವರ ಬಗ್ಗೆ ಮೊದಲು ಹೇಳ್ಬಿಡ್ತೀನಿ(ನಗು). ಅವರನ್ನು ಬಿಟ್ಟರೆ, ನನಗೆ ಯಶ್, ಸುದೀಪ್ ಎಲ್ಲರೂ ಇಷ್ಟವೇ.