twitter
    For Quick Alerts
    ALLOW NOTIFICATIONS  
    For Daily Alerts

    ಸಂದರ್ಶನ : ರಾವಣನಾಗಲಿರುವ ಸೂರ್ಯ ನಾರಾಯಣ!

    |

    ರಾವಣ ಹೆಸರಿನ ಸಿನಿಮಾ ಬಹುಶಃ ಕನ್ನಡ ಸೇರಿದಂತೆ ಭಾರತದ ಬಹುತೇಕ ಭಾಷೆಗಳಲ್ಲಿ ತೆರೆಕಂಡಿದೆ. ಆದರೆ, ಸಿನಿಮಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡ ಕಲಾವಿದನೊಬ್ಬ ರಾವಣನಾಗಿ ವೇದಿಕೆ ಮೇಲೆ ಏಕವ್ಯಕ್ತಿ ಕಲಾ ಪ್ರದರ್ಶನ ನೀಡುತ್ತಿರುವುದು ಇದೇ ಮೊದಲು ಎಂದರೆ ಅಚ್ಚರಿಯಾಗಲಾರದು.

    ಇವರ ಹೆಸರು ಸೂರ್ಯನಾರಾಯಣ ರಾವ್. ಕಲಾಲೋಕದಲ್ಲಿ ಸೂರ್ಯ ಎನ್ ರಾವ್ ಎಂದು ಪರಿಚಿತರು. ವಿಷ್ಣುವರ್ಧನ್ ಅವರ ಕೊನೆಯ ಚಿತ್ರ 'ಆಪ್ತರಕ್ಷಕ' ದ 'ಓಂಕಾರಾಭಿನಯ..' ಎನ್ನುವ ಹಾಡಿನಲ್ಲಿ ಲಕ್ಷ್ಮೀ ಗೋಪಾಲಸ್ವಾಮಿ ಅವರೊಂದಿಗೆ ಜೋಡಿಯಾಗಿ ನೃತ್ಯದಲ್ಲಿ ಕಾಣಿಸಿಕೊಂಡಿದ್ದರು. ಆ ನೃತ್ಯವನ್ನು ಮೆಚ್ಚಿದ ನಿರ್ದೇಶಕ ಪಿ.ವಾಸು ಅವರು ತೆಲುಗಿನಲ್ಲಿ ಆಪ್ತಮಿತ್ರವನ್ನು 'ನಾಗವಲ್ಲಿ' ಯಾಗಿ ರಿಮೇಕ್ ಮಾಡಿದಾಗ ಕನ್ನಡದಲ್ಲಿ ವಿನೀತ್ ಮಾಡಿದ ಪಾತ್ರವನ್ನು ತೆಲುಗಿನಲ್ಲಿ ಸೂರ್ಯ ಎನ್ ರಾವ್ ಅವರಿಗೆ ನೀಡಿದ್ದರು.

     ಹಠ ಬಿಡದೆ ಹೀರೋ ಆದ ಕುಂದಾಪುರ ಹುಡುಗ ರಾಹುಲ್ ಹಠ ಬಿಡದೆ ಹೀರೋ ಆದ ಕುಂದಾಪುರ ಹುಡುಗ ರಾಹುಲ್

    ಹಾಗಾಗಿ ಸಿನಿಮಾದಲ್ಲಿಯೂ ನೃತ್ಯಕಲೆಯಿಂದಲೇ ಗುರುತಿಸಿಕೊಂಡಿರುವ ಸೂರ್ಯ ಅವರು 'ಅಭಿನಯ ನೃತ್ಯ ಚತುರ', 'ನೃತ್ಯ ಶಿರೋಮಣಿ', 'ನೃತ್ಯಕಲಾ ಪ್ರವೀಣ' 'ನೃತ್ಯ ನಿಪುಣ', 'ಯುವಕಲಾ ಶ್ರೇಷ್ಠ' ಎಂಬ ಸ್ಥಳೀಯ ಬಿರುದು ಬಾವಲಿಗಳ ಜತೆಗೆ ಒರಿಸ್ಸಾ ಸರ್ಕಾರದಿಂದ 'ನ್ಯಾಷನಲ್ ಎಕ್ಸೆಲೆನ್ಸಿ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೂರ್ಯ ಎನ್ ರಾವ್ ಜತೆಗಿನ ವಿಶೇಷ ಮಾತುಕತೆಯನ್ನು ಫಿಲ್ಮೀಬೀಟ್ ನಿಮ್ಮೆದುರಿಗೆ ನೀಡುತ್ತಿದೆ.

     ನಿಮಗೂ ಸಿನಿಮಾರಂಗಕ್ಕೂ ಒಂದು ಅವಿನಾಭಾವ ಸಂಬಂಧ ಇದೆ. ಅದೇನು ಎನ್ನುವುದನ್ನು ನೀವೇ ಹೇಳಿಬಿಡಿ.

    ನಿಮಗೂ ಸಿನಿಮಾರಂಗಕ್ಕೂ ಒಂದು ಅವಿನಾಭಾವ ಸಂಬಂಧ ಇದೆ. ಅದೇನು ಎನ್ನುವುದನ್ನು ನೀವೇ ಹೇಳಿಬಿಡಿ.

    ಹೌದು, ಸಿನಿಮಾರಂಗದಲ್ಲಿ ನನ್ನ ಅತ್ತೆಗೆ ದೊಡ್ಡ ಹೆಸರು ಇದೆ. ಅವರು ಬೇರೆ ಯಾರೂ ಅಲ್ಲ, ವಿನಯ ಪ್ರಸಾದ್ ಅವರು. ಅತ್ತೆ ಅಂದರೆ, ಅವರು ನನ್ನ ಪತ್ನಿಯ ತಾಯಿ. ಸಿನಿಮಾ, ಧಾರಾವಾಹಿಗಳಲ್ಲಿ ಹೆಸರು ಮಾಡಿರುವ ಪ್ರಥಮ ನನ್ನ ಪತ್ನಿ. ಆದರೆ ಅಲ್ಲಿಯೂ ಕೂಡ ನೃತ್ಯದ ಜತೆಗಿನ ಆಕೆಯ ಸಂಬಂಧವೇ ನಮ್ಮ ನಡುವೆ ಸಂಬಂಧ ಸೃಷ್ಟಿಸಲು ಕಾರಣವಾಯಿತು ಎನ್ನಬಹುದು.

     ಪ್ರಥಮ ಅವರ ಪ್ರಥಮ ಭೇಟಿಯಾಗಿದ್ದು ಎಲ್ಲಿ?

    ಪ್ರಥಮ ಅವರ ಪ್ರಥಮ ಭೇಟಿಯಾಗಿದ್ದು ಎಲ್ಲಿ?

    ನೃತ್ಯ ವಿದುಷಿ ಮಾಯಾರಾವ್ ಅವರ ಇನ್ಸ್ಟಿಟ್ಯೂಟ್ ನಲ್ಲಿ ನನ್ನ ಜ್ಯೂನಿಯರಾಗಿದ್ದವಳು ಪ್ರಥಮ. ಪ್ರಥಮ ನೋಟದಲ್ಲೇ ಪ್ರೇಮವಾಯಿತೆಂದು ಸುಳ್ಳು ಹೇಳಲಾರೆ. ಪರಿಚಯ, ಸ್ನೇಹವಾಗಿ ಆಸಕ್ತಿ ಜೀವನಾಸಕ್ತಿ ಬೆಳೆಸಿದಾಗ ಮನೆಯವರೊಂದಿಗೆ ಮಾತನಾಡಿ ಶುರುವಾದ ಅನುಬಂಧ ಇದು. ಇಂದು ನೃತ್ಯದಲ್ಲಿ ಮಾತ್ರವಲ್ಲ, ದಾಂಪತ್ಯದಲ್ಲಿಯೂ ಒಂದಾಗಿದ್ದೇವೆ.

    ಸಂದರ್ಶನ : ಛಾಯಾಗ್ರಹಣದಲ್ಲೊಂದು ಕಮಾಲ್ ಉದಯ ಬಲ್ಲಾಳ್ ಸಂದರ್ಶನ : ಛಾಯಾಗ್ರಹಣದಲ್ಲೊಂದು ಕಮಾಲ್ ಉದಯ ಬಲ್ಲಾಳ್

     ನಿಮ್ಮ ರಾವಣಾವತಾರದ ಬಗ್ಗೆ ಸ್ವಲ್ಪ ಹೇಳಿ

    ನಿಮ್ಮ ರಾವಣಾವತಾರದ ಬಗ್ಗೆ ಸ್ವಲ್ಪ ಹೇಳಿ

    ಇದನ್ನು ಡಾನ್ಸ್ ಡ್ರಾಮಾ ಅಥವಾ ಕನ್ನಡದಲ್ಲಿ ಗೀತನಾಟಕ ಎನ್ನಬಹುದು. ಉದಾಹರಣೆಗೆ ರಷ್ಯಾದಲ್ಲಿನ ಬ್ಯಾಲೆಯ ಹಾಗೆ, ನಮ್ಮಲ್ಲಿ ಏಕವ್ಯಕ್ತಿ ಯಕ್ಷಗಾನ ಇರುವ ಹಾಗೆ ಎಂದು ಹೇಳಬಹುದು. ಮುಖ್ಯವಾಗಿ ಎಲ್ಲಿಯೂ ಶಾಸ್ತ್ರೀಯ ಚೌಕಟ್ಟನ್ನು ಬಿಟ್ಟು ಹೋಗುವುದಿಲ್ಲ. 46 ನಿಮಿಷಗಳ ಪ್ಲೇ ಇದು. ಅಷ್ಟು ಹೊತ್ತು ವೇದಿಕೆಯಲ್ಲಿ ನಾನೊಬ್ಬನೇ ಇರುತ್ತೇನೆ. ಇದರ ನಡುವೆ ಎರಡೂ ಕಾಲು ನಿಮಿಷ ಶೂರ್ಪನಖಿಯ ಪಾತ್ರ ಪರದೆಯ ಮೇಲೆ ಕಾಣಿಸುತ್ತದೆ. ಆದರೆ ಆ ಪಾತ್ರವನ್ನು ಕೂಡ ನಾನೇ ಮಾಡಿದ್ದು ವೇದಿಕೆಯಲ್ಲಿ ಅದರ ಪ್ರೊಜೆಕ್ಷನ್ ನಡೆಯುತ್ತದೆ! ಮಾತ್ರವಲ್ಲ, ಆ ಎರಡು ನಿಮಿಷಗಳಲ್ಲಿ ಕೂಡ ಶೂರ್ಪನಖಿಯೊಂದಿಗೆ ನಾನೇ ಇಂಟರ್ಯಾಕ್ಟ್ ಮಾಡುತ್ತಿರುತ್ತೇನೆ.

     ಅಷ್ಟು ಹೊತ್ತು ವೇದಿಕೆಯ ಮೇಲೆ ಯಾವ ನೃತ್ಯ ಪ್ರಕಾರದಲ್ಲಿ ಕಾಣಿಸಿಕೊಳ್ಳುತ್ತೀರಿ?

    ಅಷ್ಟು ಹೊತ್ತು ವೇದಿಕೆಯ ಮೇಲೆ ಯಾವ ನೃತ್ಯ ಪ್ರಕಾರದಲ್ಲಿ ಕಾಣಿಸಿಕೊಳ್ಳುತ್ತೀರಿ?

    ಮಲ್ಟಿ ಸ್ಟೈಲ್ ಇರುತ್ತದೆ. ಭರತನಾಟ್ಯದಿಂದ ಆರಂಭಗೊಂಡು ಕೂಚುಪುಡಿ, ತೆಂಕುತಿಟ್ಟು ಯಕ್ಷಗಾನ ಬಳಿಕ ಕಂಟೆಂಪರರಿಯಲ್ಲಿ ಕೊನೆಗೊಳ್ಳುತ್ತದೆ. ಪ್ರವೇಷ ಭರತನಾಟ್ಯದ ಮೂಲಕ ನಡೆಯುತ್ತದೆ. ಶಿವತಾಂಡವವನ್ನು, ಮಂಡೋದರಿಯ ಭೇಟಿಯನ್ನು ಕೂಚುಪುಡಿ ಶೈಲಿಯಲ್ಲಿ ತೋರಿಸಲಾಗುತ್ತದೆ. ಯಕ್ಷಗಾನ ಶೈಲಿಯಲ್ಲಿ ಶೂರ್ಪನಖಿ ಇದ್ದರೆ, ಹತ್ತು ತಲೆಗಳು ಮಾತನಾಡುವುದು ಕಂಟೆಂಪರರಿ ಶೈಲಿಯಲ್ಲಿರುತ್ತದೆ. ಈಗಾಗಲೇ ‘ರಾವಣ'ದ ಪ್ರೀಮಿಯರ್ ಪ್ರದರ್ಶನ ಆಗಿದೆ. ಆದರೆ ಪ್ರೇಕ್ಷಕರಿಗಾಗಿ ಇದೇ ಮೊದಲ ಬಾರಿಗೆ ಜೂನ್ 29ರಂದು ಅಂದರೆ ಇದೇ ಶನಿವಾರ ಎಡಿಎ ರಂಗಮಂದಿರದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದೇನೆ.

     ಅಂದರೆ ರಾಮಾಯಣವನ್ನು ರಾವಣನ ದೃಷ್ಟಿಯಿಂದ ಹೇಳಲಿದ್ದೀರಿ ಎಂದಾಯಿತು?

    ಅಂದರೆ ರಾಮಾಯಣವನ್ನು ರಾವಣನ ದೃಷ್ಟಿಯಿಂದ ಹೇಳಲಿದ್ದೀರಿ ಎಂದಾಯಿತು?

    ಖಂಡಿತವಾಗಿ. ಯಕ್ಷಗಾನ ತಾಳಮದ್ದಳೆಯಲ್ಲಿ ‘ರಾವಣನ ಆತ್ಮ ಸಾಕ್ಷಾತ್ಕಾರ' ಎನ್ನುವ ಪ್ರಸಂಗ ಇರುತ್ತಿತ್ತು. ಹತ್ತು ಜನರ ತಲೆಯಲ್ಲಿರುವಷ್ಟು ವಿದ್ಯೆ ಆತನೊಬ್ಬನಲ್ಲೇ ಇತ್ತಂತೆ. ಆದರೆ ಅವನು ಮಾಡಿದ ಒಂದೇ ಒಂದು ತಪ್ಪು ಸೀತೆಯನ್ನು ಅಪಹರಣ ಮಾಡಿರುವಂಥದ್ದು. ಆದರೆ, ಅದಕ್ಕೆ ಕೂಡ ಆತನಲ್ಲಿ ಕಾರಣಗಳಿವೆ. ಒಂದು ವೇಳೆ ತಾನು ಸೀತೆಯನ್ನು ಅಪಹರಿಸದೇ ಹೋದಲ್ಲಿ ರಾಮ ತನ್ನನ್ನು ಹುಡುಕಿ ಬರುವ ಸಾಧ್ಯತೆಯೇ ಇರಲಿಲ್ಲ. ಯಾಕೆಂದರೆ ಆತನಿಗೆ ರಘುವಂಶದ ರಾಜನೇ ಆತನ ಸಾವಿಗೆ ಕಾರಣವಾಗುತ್ತಾನೆ ಎಂಬ ಸತ್ಯ ತಿಳಿದಿತ್ತು. ಹಿಂದೆ ಹಿರಣ್ಯ ಎಂಬ ರಘು ವಂಶಜ ರಾಜ ರಾವಣನಿಗೆ ಶಾಪ ನೀಡಿದ್ದ. ಹಾಗೆ 64ನೆಯ ತಲೆಮಾರಿನಲ್ಲಿ ರಾಮ ಬರುವ ತನಕ ಸಾವಿಗೆಂದೇ ನಿರೀಕ್ಷೆ ಮಾಡಿದ್ದವನು ರಾವಣ. ಇಲ್ಲಿ ಒಳ್ಳೆಯದು ಕೆಟ್ಟದ್ದು ಎನ್ನುವುದಕ್ಕಿಂತ ಆತನ ಸ್ವವಿಮರ್ಶೆಯೇ ಕತೆ ಎನ್ನಬಹುದು. ಹನ್ನೊಂದನೇ ತಲೆ ಅಂತರಾತ್ಮ ಎಂದು ಅರ್ಥ. ರಾಮನ ಜತೆಗೆ ಯುದ್ಧ ಆರಂಭವಾಗಿರುತ್ತದೆ. ಆದರೆ ಆ ದಿನದ ಯುದ್ಧ ಮುಗಿಯುವ ವೇಳೆಗೆ, ಇನ್ನು ನಾಳೆ ಬಾ, ನಾಳೆ ನಿನ್ನನ್ನು ಸಾಯಿಸುತ್ತೇನೆ ಎಂದು ಹೇಳಿರುತ್ತಾನೆ. ಆ ರಾತ್ರಿ ರಾವಣನ ತಲೆಯಲ್ಲಿ ಓಡಾಡುವ ವಿಚಾರಗಳು, ಹಿಂದಿನ ಘಟನೆಗಳ ನೆನಪುಗಳು ಹೇಗೆ ಅವನನ್ನು ಆತ್ಮಾವಲೋಕನಕ್ಕೆ ಇಳಿಸುತ್ತವೆ ಎನ್ನುವುದೇ ಇಲ್ಲಿನ ಸಾರಾಂಶ.

    ವೇದಿಕೆ ಮೇಲೆ ನೀವೊಬ್ಬರೇ ಆದರೂ, ಇಂಥದೊಂದು ಬೃಹತ್ ಯೋಜನೆ ಕಾರ್ಯರೂಪಕ್ಕೆ ತರುವಲ್ಲಿ ಹಲವರ ಪಾತ್ರಗಳಿವೆ ಎನ್ನಬಹುದು ಅಲ್ಲವೇ?

    ವೇದಿಕೆ ಮೇಲೆ ನೀವೊಬ್ಬರೇ ಆದರೂ, ಇಂಥದೊಂದು ಬೃಹತ್ ಯೋಜನೆ ಕಾರ್ಯರೂಪಕ್ಕೆ ತರುವಲ್ಲಿ ಹಲವರ ಪಾತ್ರಗಳಿವೆ ಎನ್ನಬಹುದು ಅಲ್ಲವೇ?

    ಖಂಡಿತವಾಗಿ. ಅದಕ್ಕಾಗಿ ಅವರೆಲ್ಲರನ್ನು ಮಾರ್ಗದರ್ಶಕರಾಗಿ ಉಲ್ಲೇಖಿಸಿದ್ದೇನೆ. ಕೂಚಿಪುಡಿಯಲ್ಲಿ ನನಗೆ ವೀಣಾಮೂರ್ತಿಯವರು ಗುರುಗಳು. ಅವರು ಕೂಚಿಪುಡಿಯಲ್ಲಿನ ಸಾಂಪ್ರದಾಯಿಕ ನೃತ್ಯ ‘ಮಂಡೂಕ ಶಬ್ದಂ'ನಿಂದ ಒಂದಷ್ಟು ಉಲ್ಲೇಖಗಳನ್ನು ನೀಡಿ ಸಹಕರಿಸಿದ್ದಾರೆ. ಕಂಟೆಂಪರರಿಯ ಗುರುಗಳಾದ ಮಧು ನಟರಾಜ್, ಭರತನಾಟ್ಯದ ಗುರುಗಳಾದ ಚಂದ್ರಶೇಖರ ನಾವಡರು, ರಂಗಭೂಮಿಯಲ್ಲಿ ಖ್ಯಾತರಾಗಿರುವ ಜೀವನರಾಮ್ ಸುಳ್ಯ ಮೊದಲಾದವರೆಲ್ಲರ ಸಲಹೆ ಸೂಚನೆಗಳು ನನಗೆ ಇಂಥದೊಂದು ಏಕವ್ಯಕ್ತಿ ಪ್ರದರ್ಶನ ನೀಡುವುದರ ಹಿಂದಿನ ಶಕ್ತಿಯಾಗಿದೆ. ಜತೆಗೆ ಖ್ಯಾತ ಕೊಳಲು ವಾದಕ ಪ್ರವೀಣ್ ಡಿ ರಾವ್ ಅವರು ಈ ಬ್ಯಾಲೆಗೆಂದೇ ವಿಶೇಷವಾದ ಹಿನ್ನೆಲೆ ಸಂಗೀತದಲ್ಲಿ ಸಿದ್ಧಪಡಿಸಿದ್ದಾರೆ.

     ನಿಮಗೆ ಇಷ್ಟೊಂದು ವೈವಿಧ್ಯಮಯವಾದ ಕಲೆಗಳಲ್ಲಿ ಆಸಕ್ತಿ ಮೂಡಲು ಕಾರಣವಾದ ನಿಮ್ಮ ಹಿನ್ನೆಲೆಯ ಬಗ್ಗೆ ತಿಳಿಸಿ

    ನಿಮಗೆ ಇಷ್ಟೊಂದು ವೈವಿಧ್ಯಮಯವಾದ ಕಲೆಗಳಲ್ಲಿ ಆಸಕ್ತಿ ಮೂಡಲು ಕಾರಣವಾದ ನಿಮ್ಮ ಹಿನ್ನೆಲೆಯ ಬಗ್ಗೆ ತಿಳಿಸಿ

    ನಾನು ಮೂಲತಃ ಮಂಗಳೂರಿನ ಸುರತ್ಕಲ್ ನವನು. ನನ್ನ ತಂದೆ ಪುರುಷೋತ್ತಮ ರಾವ್ ಯಕ್ಷಗಾನ ಕಲಾವಿದರು. ಹಾಗಾಗಿ ನಾನು ನಾಲ್ಕನೇ ವರ್ಷದಿಂದಲೇ ಯಕ್ಷಗಾನ ಅಭ್ಯಾಸ ಆರಂಭಿಸಿದೆ. ಜ್ಯೂನಿಯರ್, ಸೀನಿಯರ್ ವಿದ್ವತ್ ಮಾಡಿದ ಬಳಿಕ 2001ರಲ್ಲಿ ಬೆಂಗಳೂರಿನಲ್ಲಿ ಡಾ.ಮಾಯಾರಾವ್ ಅವರ 'ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಆಂಡ್ ಕೊರಿಯಾಗ್ರಫಿ'ಯಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಇನ್ ಕೊರಿಯಾಗ್ರಫಿ ಮಾಡಿದೆ. ಬಳಿಕ ಬೆಂಗಳೂರು ವಿವಿಯಲ್ಲಿ ಮಾಸ್ಟರ್ ಇನ್ ಭರತನಾಟ್ಯಂ ಮಾಡಿದೆ. ಕೊರಿಯಾಗ್ರಫಿಯಲ್ಲಿ ಡಿಗ್ರಿ ಮಾಡುವಾಗ ಇತರ ಸಾಂಪ್ರದಾಯಿಕ ನೃತ್ಯಗಳು ಉದಾಹರಣೆಗೆ ಕಥಕ್, ಮಣಿಪುರದ ತಂಗ್ ತ, ಮತ್ತು ಅವುಗಳಿಗೆ ಪೂರಕವಾಗಿರುವ ಕೇರಳದ ಕಳರಿಪಯಟ್ಟ್ ಮೊದಲಾದ ಸಮರ ಕಲೆಗಳನ್ನು ಅಭ್ಯಾಸ ಮಾಡಲೇ ಬೇಕಿತ್ತು.

     ಯಕ್ಷಗಾನದ ಜತೆಗಿನ ನಿಮ್ಮ ಸಂಬಂಧ ಈಗ ಹೇಗಿದೆ?

    ಯಕ್ಷಗಾನದ ಜತೆಗಿನ ನಿಮ್ಮ ಸಂಬಂಧ ಈಗ ಹೇಗಿದೆ?

    ಯಕ್ಷಗಾನ ಎಂದರೆ ಮಂಗಳೂರಿಗರ ಪ್ರಿಯವಾದ ಕಲೆ. ಪಣಂಬೂರಿನ ಮಕ್ಕಳ ಮೇಳದಲ್ಲಿ ಎಂಟು ವರ್ಷಗಳ ಕಾಲ ವೇಷ ಹಾಕಿದ್ದೆ. ಬೆಂಗಳೂರಿಗೆ ಬಂದ ಮೇಲೆ ಶಿವಾನಂದ ಹೆಗಡೆಯವರ ಪರಿಚಯವಾಗಿ ಅವರ ಮೂಲಕ ನಾಲ್ಕೈದು ವರ್ಷಗಳ ಕಾಲ ಬಡಗುತಿಟ್ಟು ಯಕ್ಷಗಾನ ಕಲೆಯನ್ನು ಕರಗತಮಾಡಿಕೊಂಡೆ. ಬೆಂಗಳೂರು ಸೇರಿದಂತೆ ಹಲವಾರು ಕಡೆಗಳಲ್ಲಿ ನೂರಾರು ಯಕ್ಷಗಾನ ಪ್ರದರ್ಶನ ನೀಡಿದ್ದೇನೆ. ಒಟ್ಟು ನೃತ್ಯ ವಿಭಾಗಗಳಲ್ಲಿ ಇದುವರೆಗೆ ಪ್ರಪಂಚದಾದ್ಯಂತ ಸಾವಿರಾರು ಪ್ರದರ್ಶನಗಳನ್ನು ಮಾಡಿದ್ದೇನೆ. ಲಂಡನ್ ನ ಭಾರತೀಯ ವಿದ್ಯಾಭವನದಲ್ಲಿ ಪ್ರತಿ ವರ್ಷ ಗೆಸ್ಟ್ ಲೆಕ್ಚರರ್ ಆಗಿ ಹೋಗುತ್ತೇನೆ.

     ಸಿನಿಮಾರಂಗದಲ್ಲಿ ಹೆಚ್ಚಿನ ಪ್ರಯತ್ನ ನಡೆಸಿಲ್ಲವೇ?

    ಸಿನಿಮಾರಂಗದಲ್ಲಿ ಹೆಚ್ಚಿನ ಪ್ರಯತ್ನ ನಡೆಸಿಲ್ಲವೇ?

    ಆಪ್ತರಕ್ಷಕದಲ್ಲಿ ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ್ದು, ಆಪ್ತಮಿತ್ರದ ತೆಲುಗು ರಿಮೇಕ್ ನಲ್ಲಿ ವೆಂಕಟೇಶ್, ಅನುಷ್ಕಾ ಶೆಟ್ಟಿ ಜತೆಗೆ ನಟಿಸಿದ್ದು ನನಗೆ ಅವಿಸ್ಮರಣೀಯ ಅನುಭವ. ಅದರಲ್ಲಿಯೂ ಕನ್ನಡತಿಯಾಗಿದ್ದು ಕನ್ನಡಕ್ಕೆ ದಕ್ಕದೇ ಹೋದ ಅನುಷ್ಕಾ ಜತೆಗೆ ನಾನು ಕೂಡ ಕರಾವಳಿಯವನೆಂದು ಪರಿಚಯಿಸಿಕೊಂಡು ತುಳುವಲ್ಲಿ ಮಾತನಾಡಿದ್ದು ಖುಷಿ ನೀಡಿದಂಥ ಘಟನೆಯಾಗಿತ್ತು. ಕೊನೆಯದಾಗಿ ತುಳು ಸಿನಿಮಾ ‘ಪತ್ತನಾಜೆ'ಯಲ್ಲಿ ನಟಿಸಿದ್ದೆ. ಉಳಿದಂತೆ ನೃತ್ಯಕ್ಕೆ ಸಂಬಂಧಿಸಿದ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿದ್ದು ಬಿಟ್ಟರೆ ದೊಡ್ಡಮಟ್ಟದಲ್ಲಿ ನಟನೆಯ ಹಿಂದೆ ಹೋಗಲಿಲ್ಲ. ಅದಕ್ಕೆ ಪ್ರಮುಖ ಕಾರಣ ನನಗೆ ನಾಟ್ಯದಲ್ಲಿ ಹೆಚ್ಚು ಆಸಕ್ತಿಯಿರುವ ಕಾರಣ ಮೊದಲ ಆದ್ಯತೆ ಸದಾ ಅದಕ್ಕೆಂದೇ ಮೀಸಲಾಗಿರಿಸಿದ್ದೇನೆ.

     ನೃತ್ಯವಿಭಾಗದಲ್ಲಿ ನಿಮ್ಮ ಕನಸು ಯಾವುದು?

    ನೃತ್ಯವಿಭಾಗದಲ್ಲಿ ನಿಮ್ಮ ಕನಸು ಯಾವುದು?

    ಕನಸು, ಗುರಿಗಳು ತುಂಬಾ ಇವೆ. ಮುಖ್ಯವಾಗಿ ಗುರುಕುಲ ಮಾಡುವ ಕನಸಿದೆ. ಈಗಾಗಲೇ ಪತ್ನಿಯೊಂದಿಗೆ ಸೇರಿ 'ಮಹಾಮಾಯ ಆರ್ಟ್ ಫೌಂಡೇಶನ್' ಮೂಲಕ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದೇವೆ. ಮೂರು ವರ್ಷಗಳಿಂದ ಅದರ ವಾರ್ಷಿಕೋತ್ಸವವನ್ನು 'ಮಹಾಮಾಯ ಫೆಸ್ಟಿವಲ್' ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿದ್ದೇವೆ. 'ಬೆಳಕು' ಎಂಬ ಪ್ರಾಜೆಕ್ಟ್ ಮೂಲಕ ಸುಮಾರು 40ರಷ್ಟು ಅನಾಥ ಮಕ್ಕಳಿಗೆ ಮೂರು ವರ್ಷಗಳಿಂದ ಡಾನ್ಸ್ ಹೇಳಿಕೊಡುತ್ತಿದ್ದೇವೆ.

    English summary
    Theater artist Surya Narayana Rao interview. He also acted in Vishnuvardan's 'Aptharakshaka' movie.
    Wednesday, June 26, 2019, 11:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X