ವೈಜನಾಥ್ ಬಿರಾದರ್ ಅಭಿನಯದ 500ನೇ ಸಿನಿಮಾ 90 ಬಿಡಿ ಮನೀಗ್ ನಡಿ. ಸಿನಿಮಾದಲ್ಲಿ ಬಿರಾದರ್ 70 ವಯಸ್ಸಿನಲ್ಲಿ ಹೀರೋ ಆಗಿ ನಟಿಸಿರುವುದು ವಿಶೇಷ. ಉಳಿದಂತೆ ಕರಿಸುಬ್ಬು, ಪ್ರಶಾಂತ್ ಸಿದ್ಧಿ, ನೀತಾ ಮೈಂದರಗಿ, ಧರ್ಮ ಬಿ ಮತ್ತು ಅಭಯ್ ವೀರ್ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ್ ಅರೆಹೊಳೆ ಜಂಟಿಯಾಗಿ ಕಥೆ ಬರೆದು ನಿರ್ದೇಶನ ಮಾಡಿದ್ದು, ರತ್ನ ಬಾದರದಿನ್ನಿ ಭಂಡವಾಳ ಹೂಡಿದ್ದಾರೆ. ಶಿವು ಬೇರ್ಗಿ ಮತ್ತು ಕಿರಣ್ ಶಂಕರ್ ಚಿತ್ರಕ್ಕೆ ಸಂಗೀತ ನೀಡಿದ್ದು, ಕುಲಭೂಷಣ್ ಛಾಯಾಗ್ರಹಣವಿದೆ.
ಕಥೆ: ಉತ್ತರ ಕರ್ನಾಟಕದ ಹಳ್ಳಿಯ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಸಿನಿಮಾ ಕಾಮಿಡಿ ಕ್ರೈಂ ಥ್ರಿಲ್ಲರ್ ಆಗಿದ್ದು, ಮದ್ಯಪಾನ ಸೇವನೆ ಮತ್ತು ಜುಜಾಟದ ಪರಿಣಾಮದ ಸುತ್ತ ಸುತ್ತುತ್ತದೆ.
ಬಿಡುಗಡೆ: 90 ಬಿಡಿ ಮನೇಗ್ ನಡಿ ಸಿನಿಮಾ ಜೂನ್ 29ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.