1985 ರಲ್ಲಿ ತೆರೆಕಂಡ ಆ್ಯಕ್ಸಿಡೆಂಟ್ ಚಿತ್ರ ಭಾರತೀಯ ಚಿತ್ರರಂಗದಲ್ಲೊಂದು ಮೈಲಿಗಲ್ಲು. ಚಿತ್ರದ ಸಮಾಜಿಕ ಕಳಕಳಿ ಮತ್ತು ಸಂದೇಶಕ್ಕಾಗಿ 32 ನೇ ರಾಷ್ಟ್ರ ಪ್ರಶಸ್ತಿ ಪಡೆಯಿತು. ಶಂಕರನಾಗ್ ನಿರ್ದೇಶನದ ಈ ಚಿತ್ರದಲ್ಲಿ ಅನಂತನಾಗ್, ಶಂಕರನಾಗ್, ಅರುಂಧತಿನಾಗ್ ಮತ್ತು ರಮೇಶ್ ಭಟ್ ಮುಖ್ಯಪಾತ್ರದಲ್ಲಿ ನಟಿಸಿದರು. ಕೇವಲ ಎರಡು ತಿಂಗಳಲ್ಲಿ ಶಂಕರನಾಗ್ ಚಿತ್ರವನ್ನು ನಿರ್ದೇಶಿಸಿದ್ದರು. ಬಹುಶಃ ಹಿಟ್ ಆ್ಯಂಡ್ ರನ್ ಘಟನೆಯನ್ನು ಪರದೆಯ ಮೇಲೆ ತೋರಿಸಿದ ಮೊದಲ ಭಾರತೀಯ ಚಿತ್ರವೆಂದರೂ ತಪ್ಪಾಗಲಾರದು.
ಚಿತ್ರದಲ್ಲಿ ಭ್ರಷ್ಟಾಚಾರ, ಡ್ರಗ್ಸ್ ಮಾಫಿಯಾ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲಿತು. ಶ್ರೀಮಂತ ರಾಜಕಾರಣಿ ತನ್ನ ಹಣಬಲದಿಂದ ಸರ್ಕಾರ ಮತ್ತು ಮಾಧ್ಯಮದವರನ್ನು ತನ್ನ ಕಡೆ ಸೆಳೆದುಕೊಂಡು ತನ್ನ ಮಗನನ್ನು ಹೇಗೆ ಕೊಲೆ ಆರೋಪದಿಂದ ಪಾರು ಮಾಡುತ್ತಾನೆ ಎಂಬುದು ಚಿತ್ರ ತೋರಿಸಿತು.