ಮನಸೋರೆ ನಿರ್ದೇಶನದಲ್ಲಿ ಮೂಡಿಬಂದಿರವ ಆ್ಯಕ್ಟ್ 1978 ಚಿತ್ರವನ್ನು ದೇವರಾಜ್ ಪಿ.ಆರ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಯಜ್ಞಾ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಶೃತಿ, ಬಿ ಸುರೇಶ್, ದತ್ತಣ್ಣ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಹುಲ್ ಶಿವಕುಮಾರ್ ಸಂಗೀತವಿರುವ ಈ ಚಿತ್ರದ ಹಾಡುಗಳು ಜಯಂತ್ ಕಾಯ್ಕಿಣಿ ಬರಹದಲ್ಲಿ ಮೂಡಿಬಂದಿವೆ.ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣವಿದೆ.
ಸುಮಾರು ಎಂಟು ತಿಂಗಳಗಳ ಕಾಲ ಕೋವಿಡ್ ಲಾಕ್ ಡೌನ್ ನಿಂದ ಮುಚ್ಚಿ ಹೋಗಿದ್ದ ಚಿತ್ರಮಂದಿರಗಳು ಮತ್ತೆ ಓಪನ್ ಆದಾಗ ತೆರೆಕಂಡ ಮೊದಲ ಸಿನಿಮಾ ಇದಾಗಿದೆ.
ಕಥೆ : ಮರದಿಂದ ಬಿದ್ದು ಸತ್ತ ರೈತ ತಂದೆಗೆ ಬರಬೇಕಾದ ಪರಿಹಾರದ ಹಣ ಸಿಕ್ಕರೆ ತನ್ನ ಗಂಡನ ಚಿಕಿತ್ಸೆಗೆ ಸಹಾಯವಾಗುತ್ತದೆ ಎಂಬ ನಿರೀಕ್ಷೆಯೊಂದಿಗೆ ಸರ್ಕಾರಿ ಕಚೇರಿ ಅಲೆದು ಹೈರಾಣಾದ ಗರ್ಭಿಣಿ, ಕೊನೆಗೆ ತನ್ನ ಗುರಿ ಈಡೇರಿಸಿಕೊಳ್ಳಲು ತೆಗೆದುಕೊಳ್ಳುವ ನಿರ್ಧಾರ ಪ್ರಶ್ನೆಗಳನ್ನು ಮೂಡಿಸದೆ ಇರದು. ಆದರೆ ಅದು ಹಿಂಸಾತ್ಮಕ ಮಾರ್ಗ ಎಂಬ ಭಾವನೆ ಮೂಡದಂತೆ ಮತ್ತೊಂದು ಆಲೋಚನಾ ದಿಕ್ಕಿನೆಡೆಗೆ ಪ್ರೇಕ್ಷಕನ ಮನಸ್ಸನ್ನು ಹೊರಳಿಸುವಷ್ಟು ಸಶಕ್ತವಾಗಿದೆ.