ಅಳಿದು ಉಳಿದವರು (2019)
ಅಳಿದು ಉಳಿದವರು ಕಥೆ
ಅರವಿಂದ್ ಶಾಸ್ರೀ ನಿರ್ದೇಶನದ ಅಳಿದು ಉಳಿದವರು ಚಿತ್ರದಲ್ಲಿ ಅಶು ಬೇದ್ರ, ಪವನ್ ಕುಮಾರ್ ,ಸಂಗೀತಾ ಭಟ್ ಮತ್ತು ಅತುಲ್ ಕುಲಕರ್ಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನಾಯಕ ಅಶು ಬೇದ್ರ ಬಂಡವಾಳ ಹೂಡಿದ್ದರೆ, ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಅಭೀಷೇಕ್ ಕಾಸರಗೋಡು ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುರೇಶ್ ಆರ್ಮುಗಂ ಸಂಗೀತವಿದೆ.
ನಾಯಕ ಶೀಲಂ(ಅಶು ಬೆದ್ರ) ಸುದ್ದಿ ವಾಹಿನಿಯ ನಿರೂಪನಾಗಿರುತ್ತಾನೆ. 'ಕಾರಣ' ಎನ್ನುವ ಕಾರ್ಯಕ್ರಮ ನಡೆಸಿಕೊಡುತ್ತಿರುತ್ತಾರೆ. ಇದು ನಂಬಿಕೆ ಮತ್ತು ಮೂಢನಂಬಿಕೆ ನಡುವಿನ ವಿಶೇಷ ಕಾರಣಗಳನ್ನು ಹುಡುಕುವ ಸರಣಿ ಕಾರ್ಯಕ್ರಮ. 99 ಎಪಿಸೋಡ್ ಅನ್ನು ನಡೆಸಿಕೊಟ್ಟ ಶೀಲಂ 100ನೇ ಎಪಿಸೋಡ್ ಅನ್ನು ವಿಶೇಷವಾಗಿ ನಡೆಸಿಕೊಡಲು ನಿರ್ಧರಿಸುತ್ತಾರೆ. ಆಗ ಒಬ್ಬ ದೆವ್ವ ಇಲ್ಲ ಎನ್ನುವುದನ್ನು ಸಾಬೀತು ಮಾಡುವಂತೆ ಮಾರಾಟವಾಗದೆ ಇರುವ ಮನೆಯಲ್ಲಿ ದೆವ್ವ ಇಲ್ಲ ಎನ್ನುವುದುನ್ನು ನಿರೂಪಿಸಲು ಸವಾಲು ಹಾಕುತ್ತಾರೆ.ನಿರೂಪಕನಿಗೆ ದೆವ್ವದ ದರ್ಶನವಾಗುತ್ತಾ, 100ನೇ ಎಪಿಸೋಡ್ ಹೇಗಿರುತ್ತೆ ಎನ್ನುವುದು ಚಿತ್ರದ ಮುಂದಿನ ಕಥೆ.