ಅಣ್ಣ From Mexico ಸಿನಿಮಾವನ್ನು ಬಡವ ರಾಸ್ಕಲ್ ಖ್ಯಾತಿಯ ಶಂಕರ್ ಗುರು ನಿರ್ದೇಶನ ಮಾಡುತ್ತಿದ್ದಾರೆ. ಡಾಲಿ ಧನಂಜಯ್ ಅಭಿನಯದ ಈ ಚಿತ್ರದಲ್ಲಿ ಅಜ್ಜಿ-ಮೊಮ್ಮಗನ ಕಥೆ ಇರಲಿದೆ. ಈ ಸಿನಿಮಾದ ಪೋಸ್ಟರ್‌ನಲ್ಲಿ ಧನಂಜಯ್ ಕೊರಳಿಗೆ ಕರ್ನಾಟಕ ಮ್ಯಾಪ್ ಇರುವ ಪೆಂಡೆಂಟ್ ಆಭರಣ ಹಾಗೂ ಸೂಟ್ ಧರಿಸಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಸತ್ಯ ರಾಯಲ್ ನಿರ್ಮಾಣದಲ್ಲಿ ಮೂಡಿಬರಲಿರುವ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಲಿದ್ದಾರೆ. ನವೆಂಬರ್ ತಿಂಗಳಿನಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ.