ಹಿನ್ನಲೆ - ದ್ವಾರಕೀಶ್ ರವರ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ 52 ನೇ ಚಿತ್ರವಿದು.ಚಿತ್ರಕ್ಕೆ ಮೊದಲು ಶಿವಣ್ಣನವರ ಮೊದಲ ಚಿತ್ರ ಹೆಸರು ಆನಂದ್ ಇಡಲಾಗಿತ್ತು. ಆಪ್ತಮಿತ್ರ ಚಿತ್ರದ ನಂತರ ನಿರ್ದೇಶಕ ಪಿ.ವಾಸು ಮತ್ತು ದ್ವಾರಕೀಶ್ ಒಂದಾಗಿದ್ದಾರೆ. ಹಾಗೇ `ಶಿವಲಿಂಗ' ಚಿತ್ರದ ನಂತರ ಶಿವಣ್ಣ ಮತ್ತು ಪಿ.ವಾಸುರ ಮುಂದಿನ ಚಿತ್ರವಿದು.ಚಿತ್ರದಲ್ಲಿ ನಾಯಕಿಯಾಗಿ ರಚಿತಾ ರಾಮ್ ನಟಿಸಿದ್ದರೆ, ನಿಧಿ ಸುಬ್ಬಯ್ಯ, ಪ್ರಭು,ಸುಹಾಸಿನಿ ಮುಂತಾದವರು ವಿಭಿನ್ನ ಪಾತ್ರಗಳ ಮೂಲಕ ಶಿವಣ್ಣನಿಗೆ ಸಾಥ್ ನೀಡಲಿದ್ದಾರೆ. 2018, ನವೆಂಬರ್ 9 ರಂದು ಚಿತ್ರದ ಮುಹೂರ್ತ ನೇರವೇರಿತು. ಡಿಸೆಂಬರ 10 ರಿಂದ ಮೊದಲ ಶೆಡ್ಯೂಲ್ ನ ಶೂಟಿಂಗ್ ಆರಂಭವಾಯಿತು. ಕ್ಲೈಮ್ಯಾಕ್ಸ್ ಮತ್ತು ಚಿತ್ರದ ಹಾಡೊಂದನ್ನು ಚಿತ್ರತಂಡ ಮಂಗಳೂರಿನಲ್ಲಿ ಚಿತ್ರೀಕರಿಸತು.ಚಿತ್ರದ ಟ್ರೇಲರ್ ಆಕ್ಟೋಬರ್ 26 ರಂದು ಬಿಡುಗಡೆಯಾಯಿತು.
ಒಂದು ದೊಡ್ಡ ಕುಟುಂಬದ ಹುಡುಗಿ ಲಕ್ಷ್ಮಿ (ರಚಿತಾ ರಾಮ್). ತನ್ನ ಜೀವನದಲ್ಲಿ ನಡೆದ ಆಘಾತದಿಂದ ಹುಚ್ಚಿ ಆಗಿರುತ್ತಾಳೆ. ಆಕೆಯನ್ನು ಮತ್ತೆ ಹಳೆಯ ಸ್ಥಿತಿಗೆ ಕೃಷ್ಣ (ಶಿವರಾಜ್ ಕುಮಾರ್) ತೆಗೆದುಕೊಂಡು ಬರುತ್ತಾನೆ. ಲಕ್ಷ್ಮಿ ಯಾಕೆ ಹುಚ್ಚಿ ಆದಳು. ಕೃಷ್ಣ ಯಾಕೆ ಅವಳ ರಕ್ಷಣೆಗೆ ಬಂದ. ಕೃಷ್ಣ ಯಾರು?. ಇದು ಚಿತ್ರದ ಮುಂದಿನ ಕಥೆ.