ಯಶಸ್ವಿ ಬೆಲ್ ಬಾಟಮ್ ಚಿತ್ರದ ನಂತರ ಮತ್ತೊಮ್ಮೆ ಜಯತೀರ್ಥ ನಿರ್ದೇಶನದಲ್ಲಿ ರಿಷಭ್ ಶೆಟ್ಟಿ ಡಿಟೆಕ್ಟಿವ್ ದಿವಾಕರನ ಅವತಾರ ತಾಳಲಿದ್ದಾರೆ. ರಿಷಭ್ ಜೊತೆ ಹರಿಪ್ರಿಯಾ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಬಹುತೇಕ ಮೊದಲ ಚಿತ್ರದ ತಾರಾಗಣವಿರಲಿದೆ.
ಸಂತೋಷ್ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದರೆ, ಬಿ ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣವಿರಲಿದೆ. ಟಿ.ಕೆ.ದಯಾನಂದ ಚಿತ್ರದ ಕಥೆ ಬರೆದಿದ್ದಾರೆ.