ಕಥೆ- ಇಂದಿರಾ (ಕಲ್ಪನಾ) ಬೆಳ್ಳಿಮೋಡ ಎಸ್ಟೇಟ್ ಮಾಲೀಕನ ಒಬ್ಬಳೇ ಮಗಳು. ಈ ಎಸ್ಟೇಟ್ ಆಸೆಗಾಗಿ ಅವಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಮೋಹನ್ (ಕಲ್ಯಾಣ ಕುಮಾರ್) ಅಮೇರಿಕಾ ಗೆ ವಿಧ್ಯಾಭ್ಯಾಸಕ್ಕೆ ಹೋಗುತ್ತಾನೆ. ಅವನು ಮರಳಿ ಬಂದಾಗ ಇಂದಿರಾ ತಾಯಿ ತಂದೆಗೆ ಗಂಡು ಮಗುವೊಂದು ಹುಟ್ಟಿರುತ್ತದೆ. ಇನ್ನು ತನಗೆ ಆಸ್ತಿ ಸಿಗುವುದಿಲ್ಲವೆಂದರಿತ ಮೋಹನ್ ಇಂದಿರಾಳ ಜೊತೆಗಿನ ಮದುವೆಯನ್ನು ರದ್ದುಗೊಳಿಸುತ್ತಾನೆ.
ಕೆಲ ದಿನಗಳ ನಂತರ ಮೋಹನ್ ಒಂದು ಬೆಟ್ಟದಿಂದ ಕೆಳಗೆ ಬಿದ್ದು ಗಾಯಗೊಳ್ಳುತ್ತಾನೆ. ಆಗ ಇಂದಿರಾಳೆ ಅವನನ್ನು ಆರೈಕೆ ಮಾಡುತ್ತಾಳೆ. ಈ ಸಮಯದಲ್ಲಿ ಮೋಹನ್ ಗೆ ಅವಳ ಮೇಲೆ ನಿಜವಾದ ಪ್ರೀತಿ ಮೂಡುತ್ತದೆ. ಇಂದಿರಾಳ ಮೇಲೆ ಪ್ರೀತಿ ಮೂಡಿ ಮದುವೆಯಾಗಲು ಮೋಹನ್ ಮರು ಪ್ರಸ್ತಾಪಿಸಿದಾಗ, ಈ ಮೊದಲು ಕೇವಲ ತನ್ನ ಆಸ್ತಿಗಾಗಿ ಹಂಬಲಿಸಿದ್ದ ಮೋಹನ್ ನ್ನು ಇಂದಿರಾ ತಿರಸ್ಕರಿಸುತ್ತಾಳೆ.