ಭೀಮಾ ಸಿನಿಮಾವನ್ನು ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿದ್ದಾರೆ. ಚಿತ್ರದಲ್ಲಿ ಅಶ್ವಿನಿ ಅಂಬರೀಶ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧೀರ್, ಕಲ್ಯಾಣಿ ರಾಜು, ಡ್ಯ್ಯಾಗನ್ ಮಂಜು, ಪ್ರಿಯಾ ಶತಮರ್ಷಣ ಮುಂತಾದವರು ತಾರಾಗಣದಲ್ಲಿದ್ದಾರೆ.
ಚರಣ್ ರಾಜ್ ಸಂಗೀತ, ಧನುಕುಮಾರ್ ಮತ್ತು ಶಿವಸೇನಾ ಛಾಯಾಗ್ರಣ, ದೀಪು ಎಸ್ ಕುಮಾರ್ ಸಂಕಲನ ಸಿನಿಮಾಗಿದೆ. ಭೀಮಾಗೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಕಥೆ: ಜೆ.ಸಿ ರಸ್ತೆ ಪಕ್ಕ ಗ್ಯಾರೇಜ್‌ವೊಂದರ ಸುತ್ತಾಮುತ್ತ ಈ ಸಿನಿಮಾದ ಕಥೆ ನಡೆಯುತ್ತದೆ. ಮೆಕಾನಿಕ್ ಜಾವಾ ರಾಮಣ್ಣನ ಗ್ಯಾರೇಜ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಡ್ರ್ಯಾಗನ್ ಮಂಜ ಗಾಂಜಾ ಸಪ್ಲೆಯರ್ ಆಗಿ ಇಡೀ ಏರಿಯಾ ಹುಡುಗರನ್ನು ನಶೆಯಲ್ಲಿ ತೇಲಿಸುತ್ತಿರುತ್ತಾನೆ. ಅದೇ ನಶೆಯಲ್ಲಿ ಮುಳುಗಿ ರಾಮಣ್ಣ ಮಗ ಸಾಯುತ್ತಾನೆ. ಆಗ ಗ್ಯಾರೇಜ್‌ಯಿಂದ ಮಂಜು ದೂರಾಗುತ್ತಾನೆ. ಅದೇ ಗ್ಯಾರೇಜ್‌ಗೆ ಅನಾಥ ಹುಡುಗ ಭೀಮಾ ಎಂಟ್ರಿ ಆಗುತ್ತದೆ.
ರಾಮಣ್ಣನ ಗ್ಯಾರೇಜ್ ಗಾಂಜಾ ದಂಧೆ ಕಾರಣಕ್ಕೆ ಕೆಟ್ಟ ಹೆಸರುಪಡೆದುಕೊಂಡಿರುತ್ತದೆ. ಆ ಕೆಟ್ಟ ಹೆಸರನ್ನು ಅಳಿಸಲು ಭೀಮಾ ಪಣ ತೊಡುತ್ತಾನೆ. ಈ ಹಾದಿಯಲ್ಲಿ ಏನೆಲ್ಲಾ ಆಗುತ್ತದೆ. ಯಾರನ್ನೆಲ್ಲಾ ಕಳೆದುಕೊಳ್ಳುತ್ತಾನೆ. ಅದಕ್ಕೆ ಹೇಗೆ ಪ್ರತಿಕಾರ ತೀರಿಸಿಕೊಳ್ಳುತ್ತಾನೆ? ಗಾಂಜಾ, ಡ್ರಗ್ಸ್ ದಂಧೆಯ ಕಿಂಗ್ ಪಿನ್ ಆಗಿ ಬೆಳೆಯುವ ಮಂಜನನ್ನು ಹೇಗೆ ಮಟ್ಟ ಹಾಕುತ್ತಾನೆ? ಕಾರ್ಪೋರೇಟ್ ಆಗುವ ಮಂಜನ ಆಸೆ ಈಡೇರುತ್ತಾ? ಇಲ್ವಾ? ಅನ್ನೋದನ್ನೆಲ್ಲಾ ತೆರೆಮೇಲೆ ನೋಡಬೇಕು.
ಬಿಡುಗಡೆ: ಭೀಮಾ ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ 2024ರ ಆಗಸ್ಟ್ 9ರಂದು ಬಿಡುಗಡೆ ಆಯಿತು.