X
ಭೀಮಾ

ಭೀಮಾ

Action | Thriller | 09 Aug 2024 | A | 148 Mins
Kannada

2.5 /5 Users

0 /5 Filmibeat

ಭೀಮಾ ಕಥೆ

ಭೀಮಾ ಸಿನಿಮಾವನ್ನು  ದುನಿಯಾ ವಿಜಯ್  ನಿರ್ದೇಶಿಸಿ, ನಟಿಸಿದ್ದಾರೆ. ಚಿತ್ರದಲ್ಲಿ  ಅಶ್ವಿನಿ ಅಂಬರೀಶ್  ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧೀರ್, ಕಲ್ಯಾಣಿ ರಾಜು, ಡ್ಯ್ಯಾಗನ್ ಮಂಜು, ಪ್ರಿಯಾ ಶತಮರ್ಷಣ ಮುಂತಾದವರು ತಾರಾಗಣದಲ್ಲಿದ್ದಾರೆ.  ಚರಣ್ ರಾಜ್  ಸಂಗೀತ, ಧನುಕುಮಾರ್ ಮತ್ತು ಶಿವಸೇನಾ ಛಾಯಾಗ್ರಣ, ದೀಪು ಎಸ್ ಕುಮಾರ್ ಸಂಕಲನ ಸಿನಿಮಾಗಿದೆ. ಭೀಮಾಗೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.    ಕಥೆ: ಜೆ.ಸಿ ರಸ್ತೆ ಪಕ್ಕ ಗ್ಯಾರೇಜ್‌ವೊಂದರ ಸುತ್ತಾಮುತ್ತ  ಈ ಸಿನಿಮಾದ ಕಥೆ ನಡೆಯುತ್ತದೆ. ಮೆಕಾನಿಕ್ ಜಾವಾ ರಾಮಣ್ಣನ ಗ್ಯಾರೇಜ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಡ್ರ್ಯಾಗನ್ ಮಂಜ ಗಾಂಜಾ ಸಪ್ಲೆಯರ್ ಆಗಿ ಇಡೀ ಏರಿಯಾ ಹುಡುಗರನ್ನು ನಶೆಯಲ್ಲಿ ತೇಲಿಸುತ್ತಿರುತ್ತಾನೆ. ಅದೇ ನಶೆಯಲ್ಲಿ ಮುಳುಗಿ ರಾಮಣ್ಣ ಮಗ ಸಾಯುತ್ತಾನೆ. ಆಗ ಗ್ಯಾರೇಜ್‌ಯಿಂದ ಮಂಜು ದೂರಾಗುತ್ತಾನೆ. ಅದೇ ಗ್ಯಾರೇಜ್‌ಗೆ ಅನಾಥ ಹುಡುಗ ಭೀಮಾ ಎಂಟ್ರಿ ಆಗುತ್ತದೆ.  ರಾಮಣ್ಣನ ಗ್ಯಾರೇಜ್ ಗಾಂಜಾ ದಂಧೆ ಕಾರಣಕ್ಕೆ ಕೆಟ್ಟ ಹೆಸರುಪಡೆದುಕೊಂಡಿರುತ್ತದೆ. ಆ ಕೆಟ್ಟ ಹೆಸರನ್ನು ಅಳಿಸಲು ಭೀಮಾ ಪಣ ತೊಡುತ್ತಾನೆ. ಈ ಹಾದಿಯಲ್ಲಿ ಏನೆಲ್ಲಾ ಆಗುತ್ತದೆ. ಯಾರನ್ನೆಲ್ಲಾ ಕಳೆದುಕೊಳ್ಳುತ್ತಾನೆ. ಅದಕ್ಕೆ ಹೇಗೆ ಪ್ರತಿಕಾರ ತೀರಿಸಿಕೊಳ್ಳುತ್ತಾನೆ? ಗಾಂಜಾ, ಡ್ರಗ್ಸ್ ದಂಧೆಯ ಕಿಂಗ್ ಪಿನ್ ಆಗಿ ಬೆಳೆಯುವ ಮಂಜನನ್ನು ಹೇಗೆ ಮಟ್ಟ ಹಾಕುತ್ತಾನೆ? ಕಾರ್ಪೋರೇಟ್ ಆಗುವ ಮಂಜನ ಆಸೆ ಈಡೇರುತ್ತಾ? ಇಲ್ವಾ? ಅನ್ನೋದನ್ನೆಲ್ಲಾ ತೆರೆಮೇಲೆ ನೋಡಬೇಕು.  ಬಿಡುಗಡೆ: ಭೀಮಾ ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ 2024ರ ಆಗಸ್ಟ್ 9ರಂದು ಬಿಡುಗಡೆ ಆಯಿತು.
Read More

ಭೀಮಾ ಕಲಾವಿದರು ಮತ್ತು ಸಿಬ್ಬಂದಿ

ಭೀಮಾ ಕ್ರೂ ಮಾಹಿತಿ

ನಿರ್ದೇಶಕ ದುನಿಯಾ ವಿಜಯ್
ಸಂವಾದ ಮಾಸ್ತಿ
ಸಿನಿಮಾಟೋಗ್ರಫಿ ಶಿವಸೇನ
ಸಂಪಾದಕ ದೀಪು ಎಸ್ ಕುಮಾರ್
ಸಂಗೀತ ಚರಣ್ ರಾಜ್
ನಿರ್ಮಾಪಕ ಕೃಷ್ಣ ಸಾರ್ಥಕ್, ಜಗದೀಶ್ ಗೌಡ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಭೀಮಾ ವಿಮರ್ಶಕರ ವಿಮರ್ಶೆ

kannada.filmibeat.com
ಇವತ್ತಿನ ಅಂಡರ್‌ವರ್ಲ್‌, ಡ್ರಗ್ಸ್ ದಂಧೆ, ಅದರಿಂದ ಬಲಿಯಾಗುತ್ತಿರುವ ಯುವ ಜನತೆ. ಅದಕ್ಕೆಲ್ಲಾ ಕಡಿವಾಣ ಹಾಕಬೇಕು ಎನ್ನುವ ಆಶಯದೊಂದಿಗೆ 'ಭೀಮಾ' ಸಿನಿಮಾ ಕಥೆ ಸಾಗುತ್ತದೆ. ಹಿಂದೆ 'ಸಲಗ' ಸಿನಿಮಾ ಮಾಡಿ ಗೆದ್ದಿದ್ದ ದುನಿಯಾ ವಿಜಯ್ ಈ ಬಾರಿ ಮತ್ತಷ್ಟು ಲೋಕಲ್ ಕಥೆ ಹೇಳುವ ಸಾಹಸ ಮಾಡಿದ್ದಾರೆ. ಈ ಪ್ರಯತ್ನದಲ್ಲೇ ಅಂತೂ-ಇಂತೂ ಗೆದ್ದಿದ್ದಾರೆ. ಆದರೆ ಎಲ್ಲಾ ವರ್ಗದ ಪ್ರೇಕ್ಷಕರು ನೋಡುವಂತಹ ಸಿನಿಮಾ ಇದಲ್ಲ ಎಂದು ಹೇಳಬಹುದು.

ಭೀಮಾ ಟ್ರೇಲರ್

Video Thumbnail

ಭೀಮಾ ಪಾಟ್ಲುಗಳು

ಭೀಮಾ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಭೀಮಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+