''ಕೆಟ್ಟ ಜಾಗದಲ್ಲಿ ಕೂತ್ಕೊಂಡು ಒಳ್ಳೆ ಕೆಲಸನೂ ಮಾಡಬಹುದು'' - ಇದು 'ಚಕ್ರವರ್ತಿ' ಚಿತ್ರದ ಡೈಲಾಗ್ ಹೌದು... 'ಚಕ್ರವರ್ತಿ' ತುಳಿಯುವ ಹಾದಿಯೂ ಹೌದು... ಇಡೀ ಚಿತ್ರದ ಸಾರಾಂಶ ಕೂಡ ಹೌದು. ಭೂಗತ ಲೋಕದ ಕಥೆಯನ್ನ ವೈಭವೋಪೇತವಾಗಿ 'ಚಕ್ರವರ್ತಿ' ಮೂಲಕ ನಿಮ್ಮೆಲ್ಲರ ಮುಂದೆ ತಂದರೂ, ಅದರಲ್ಲಿ ದೇಶ ಪ್ರೇಮದ ಬೀಜ ಬಿತ್ತಿರುವ ನಿರ್ದೇಶಕ ಚಿಂತನ್ ರವರ ಜಾಣ್ಮೆ ಮೆಚ್ಚಬೇಕು.
ಕಥೆ
ಮಡಿಕೇರಿಯಲ್ಲಿ 'ಸಿಪಾಯಿ' ಪುತ್ರನಾಗಿ ಜನಿಸಿದ ಶಂಕರ್ (ದರ್ಶನ್)ಗೆ ನರಭಕ್ಷಕ ಹುಲಿಯನ್ನ ಬೇಟೆ ಆಡುವ ಹವ್ಯಾಸ. ಆ ಹವ್ಯಾಸ ಬಿಟ್ಟು ಜೀವನದಲ್ಲಿ ಸಾಧನೆ ಮಾಡಬೇಕು ಅಂತ ಅಪ್ಪನ ಮಾತಿಗೆ ಬೆಲೆ ಕೊಟ್ಟು ಬೆಂಗಳೂರಿಗೆ ಬರುವ ಶಂಕರ್ ಕಾಲಕ್ರಮೇಣ ಭೂಗತ ಲೋಕಕ್ಕೂ ಕಾಲಿಡುತ್ತಾನೆ.
ಬೆಂಗಳೂರಿಗೆ ಬರುವ ಶಂಕರ್ (ದರ್ಶನ್)ಗೆ ಭೂಗತ ಲೋಕದ ನಂಟು ಬೆಳೆಯುವುದು ಹೇಗೆ.? ಅಷ್ಟಕ್ಕೂ 'ರೌಡಿಸಂ' ಹಾದಿಯನ್ನ ಶಂಕರ್ ತುಳಿಯುವುದು ಯಾಕೆ.? ಎಂಬುದೇ 'ಚಕ್ರವರ್ತಿ' ಚರಿತ್ರೆ.!