ಜಾಕೋಬ್ ವರ್ಗೀಸ್ ನಿರ್ದೇಶನದಲ್ಲಿ ಸತೀಶ್ ನೀನಾಸಂ ಮತ್ತು ಸೋನು ಗೌಡ ಮುಖ್ಯಭೂಮಿಕೆಯಲ್ಲಿರುವ ಥ್ರಿಲ್ಲರ್ ಚಿತ್ರ`ಚಂಬಲ್'ದ ಟೀಸರ್‌ನ್ನು ತಮಿಳು ನಟ ಧನುಷ್ ಡಿಸೆಂಬರ್ 19, 2018 ರಂದು ಬಿಡುಗಡೆ ಮಾಡಿದರು. ಪವರಸ್ಟಾರ್ ಪುನೀತ್ ರಾಜಕುಮಾರ್ ಟೀಸರ್ ಮತ್ತು ಚಿತ್ರದಲ್ಲಿ ಹಿನ್ನಲೆ ಧ್ವನಿ ನೀಡಿದ್ದಾರೆ. ಚಂಬಲ್ ಚಿತ್ರದ ಟ್ರೇಲರ್‌ನ್ನು ಜನೇವರಿ 31,2019 ರಂದು ಪುನೀತ್ ರಾಜಕುಮಾರ ಬಿಡುಗಡೆ ಮಾಡಿದರು.ಕಥೆ
ಚಿತ್ರದ ನಾಯಕ ಸುಭಾಷ್ (ಸತೀಶ್ ನೀನಾಸಂ) ಒಬ್ಬ ನಿಷ್ಠಾವಂತ ಜಿಲ್ಲಾಧಿಕಾರಿ. ಇವರು ಕರ್ನಾಟಕದ ಒಂದು ಜಿಲ್ಲೆಗೆ ವರ್ಗವಾಗಿ ಬಂದಾಗ ಅಲ್ಲಿರುವ ಭ್ರಷ್ಟಾರಿಗೆ ತೆಲೆನೋವಾಗಿ ಪರಣಮಿಸುತ್ತಾರೆ. ಸಮಾಜ ಭ್ರಷ್ಟ ಶಕ್ತಿಗಳ ಮಟ್ಜಹಾಕಬೇಕೆಂದು ಹೋರಾಡುವ ನಾಯಕ ಒಂದು ಕಡೆ, ನಾಯಕನನ್ನು ಮಟ್ಟಹಾಕಭೇಕೆಂದು ಒಂದು ಗೂಡುವ ದುಷ್ಟಶಕ್ತಿಗಳು. ಇರ್ವರ ಹೋರಾಟದ ಪರಿಯನ್ನು ಚಿತ್ರ ವಿವರಿಸುತ್ತದೆ.