ಹರಿಪ್ರಿಯಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ `ಡಾಟರ್ ಆಫ್ ಪಾರ್ವತಮ್ಮ' ಚಿತ್ರವನ್ನು ಶಂಕರ್ ನಿರ್ದೇಶಿಸುತ್ತಿದ್ದು ,ಕೆ.ಎಂ.ಶಶಿಧರ್ ನಿರ್ಮಿಸುತ್ತಿದ್ದಾರೆ.ಕ್ರೈಮ್ ಥ್ರಿಲ್ಲರ್ ಕಥಾನಕವನ್ನು ಹೊಂದಿರುವ ಈ ಚಿತ್ರದಲ್ಲಿ ಸುಮಲತಾ ಅಂಬರೀಶ್ ಹರಿಪ್ರಿಯಾ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುರಾಜ ಗೌಡ,ಪ್ರಭು ಮುಂಡಕರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಿಐಡಿ ಆಫೀಸರ್ ವೈದೇಹಿ. ಯಾವುದೇ ಪ್ರಕರಣ ಆದ್ರೂ ಕೂಲ್ ಆಗಿ ಡೀಲ್ ಮಾಡೋ ರೆಬೆಲ್ ಅಧಿಕಾರಿ. ಒಂದು ಕೊಲೆ, ಅದರ ಸುತ್ತ ಹಲವು ಅನುಮಾನ. ಕ್ರಿಮಿನಲ್ ನಿರ್ಮಿಸಿಕೊಂಡಿದ್ದ ಚಕ್ರವ್ಯೂಹ ಭೇದಿಸಿ ಅದು ಕೊಲೆನಾ ಅಥವಾ ಆತ್ಮಹತ್ಯೆನಾ ಎಂದು ಇತಿಶ್ರೀ ಹಾಡುವ ಲೇಡಿ ಸಿಂಗಂ ಕಥೆ ಡಾಟರ್ ಆಫ್ ಪಾರ್ವತಮ್ಮ.
ಚಿತ್ರದ ಮೊದಲ ಟೀಸರ್ ಅಕ್ಟೋಬರ್ 6, 2018 ರಂದು ಬಿಡುಗಡೆಯಾಯಿತು.ಚಿತ್ರದ ಮೊದಲ ಲುಕ್‌ನ್ನು 2018 ಗೌರಿ ಗಣೇಶ ಹಬ್ಬದ ದಿನದಂದು ಬಿಡುಗಡೆ ಮಾಡಲಾಗಿತ್ತು.
ಇದು ಹರಿಪ್ರಿಯಾರವರ 25 ನೇ ಚಿತ್ರವಾಗಿದೆ.