ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋನಿಂದ ಗುರುತಿಸಿಕೊಂಡ ಪ್ರತಿಭೆಗಳಾದ ಶಿವರಾಜ್ ಕೆ.ಆರ್.ಪೇಟೆ ಮತ್ತು ನಯನಾ ಒಟ್ಟಿಗೆ ನಟಿಸಿರುವ ಸಿನಿಮಾ 'ಧಮಾಕ'. ಅನೇಕ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡುತ್ತಿದ್ದ ಶಿವರಾಜ್, 'ನಾನು ಮತ್ತು ಗುಂಡ' ಸಿನಿಮಾದಿಂದ ಹೀರೋಆದರು. ಈಗ 'ಧಮಾಕ' ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ನಯನಾ ಮಿಂಚಿದ್ದಾರೆ.ಮೋಹನ್ ಜುನೇಜಾ, ಕೋಟೆ ಪ್ರಭಾಕರ್, ಮಿಮಿಕ್ರಿ ಗೋಪಾಲ್, ಅರುಣಾ ಬಾಲರಾಜ್ ಮುಂತಾದವರು ಕಲಾಬಳಗ ಚಿತ್ರದಲ್ಲಿದ್ದಾರೆ.