ದ್ವಂದ್ವ ಸಿನಿಮಾವನ್ನು ಭರತ್ ಲಕ್ಷ್ಮಿಕಾಂತ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಉಗ್ರಂ ಖ್ಯಾತಿಯ ತಿಲಕ್ ನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ಆಸಿಯಾ ಫಿರ್ದೋಸೆ, ಬಾಲ ಕಲಾವಿದೆ ಹಾಸ್ಯ, ನಯನಾ ಮತ್ತು ಶೋಭರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಸೂರ್ಯಾಸ್ತ ಮತ್ತು ಸೂರ್ಯೋದಯದ ನಡುವಿನ ೧೨ ಗಂಟೆಗಳ ಕಾಲ ನಡೆಯುವ ಕಥೆಯಾಗಿದೆ.