ಫ್ಯಾನ್ (2019)
ಫ್ಯಾನ್ ಕಥೆ
ದರ್ಶಿತ್ ಬಳುವಳ್ಳಿ ನಿರ್ದೇಶನದ ಫ್ಯಾನ್ ಚಿತ್ರದಲ್ಲಿ ಆರ್ಯನ್ ಗೌಡ, ಆದ್ವಿತಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶಶಿಕಿರಣ್ ಎಂ.ಇ ಬಂಡವಾಳ ಹೂಡಿದ್ದಾರೆ. ಜಯಂತ್ ಕಾಯ್ಕಿಣಿ, ದರ್ಶಿತ್ ಭಟ್ ಮತ್ತು ಯೋಗರಾಜ್ ಭಟ್ ಚಿತ್ರಕ್ಕೆ ಸಾಹಿತ್ಯ ಒದಗಿಸಿದ್ದಾರೆ.
ಆರ್ಯನ್ ಬೆಂಗಳೂರಿನಲ್ಲಿ ನೆಲೆಸಿರುವ ಸೀರಿಯಲ್ ಕಲಾವಿದ. ಶಂಕರನಾಗ್ ರ ಅಭಿಮಾನಿಯಾಗಿರುವ ಇವನಿಗೆ ಅಪಾರ ಮಹಿಳಾ ಅಭಿಮಾನಿಗಳು. ದೂರದ ಹೊನ್ನಾವರದಲ್ಲಿ ವಾಸಿಸುವ ಶಾಯಿರಿಗೆ ಸೀರಿಯಲ್ ನಾಯಕ ಆರ್ಯನ್ ಮೇಲೆ ಅಪಾರ ಅಭಿಮಾನ. ಇವನಂತವನೇ ತನಗೆ ಗಂಡನಾಗಿ ಬರಬೇಕೇಂಬ ಆಸೆಯು ಇರುತ್ತದೆ. ಸೋಷಿಯಲ್ ಮೀಡಿಯಾದ ಮೂಲಕ ಇಬ್ಬರು ಹತ್ತಿರಕ್ಕೆ ಬರುತ್ತಾರೆ. ಹೀಗೆ ನಾಯಕ ಕೂಡ ಧಾರಾವಾಹಿ ಶೂಟಿಂಗ್ ಮಾಡಲು ಶಾಯರಿ ಮನೆಗೆ ಸಂಪೂರ್ಣ ಸೀರಿಯಲ್ಲ ತಂಡದ ಜೊತೆ ಬರುತ್ತಾನೆ.
ಆಗ ಪರಸ್ಪರ ಪ್ರೀತಿ ಬೆಳೆಯುತ್ತದೆ. ಆದರೆ ಶಾಯರಿ ಮನೆಯಲ್ಲಿ ತಾವು ಮೊದಲೇ ಗೊತ್ತು ಮಾಡಿರುವಂತಹ ಹುಡಗನ ಜೊತೆ ಇವಳ ಮದುವೆ ನಿಶ್ಚಯ ಮಾಡುತ್ತಾರೆ.ಹಾಗಾದರೆ ಇವರ ಪ್ರೀತಿಯು ಇಲ್ಲಿಗೆ ಕೊನೆಯಾಗುತ್ತಾ ಅಥವಾ ಇವರು ಈ ಅಡ್ಡಿಯನ್ನು ದಾಟಿ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳುತ್ತಾರಾ ಎಂಬುದು ಚಿತ್ರದ ಅಂತಿಮ ಘಟ್ಟ.