ಜಂಟಲ್ ಮನ್ (2020)
ಜಂಟಲ್ ಮನ್ ಕಥೆ
ರುದ್ರತಾಂಡವ ಖ್ಯಾತಿ ಗುರು ದೇಶಪಾಂಡೆ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಥ್ರಿಲರ್ ಜಂಟಲ್ ಮನ್ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ಮಿಂಚಲಿದ್ದಾರೆ. ಜಡೇಶಕುಮಾರ್ ಹಂಪಿ ಚಿತ್ರದ ಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ. ಚಿತ್ರಕ್ಕೆ ಬಿ ಅಜನೀಶ್ ಲೋಕನಾಥ್ ಸಂಗೀತವಿರಲಿದೆ. ಚಿತ್ರದ ಪೋಸ್ಟರ್ 2019 ಜುಲೈ 3 ರಂದು ಬಿಡುಗಡೆಯಾಯಿತು. ಪ್ರಜ್ವಲ್ ದೇವರಾಜ್ ಜನ್ಮದಿನ ಪ್ರಯುಕ್ತ 2019 ಜುಲೈ 4 ರಂದು ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.
ಕಥೆ: ನಿದ್ರಾ ಖಾಯಿಲೆಯಲ್ಲಿ ಇರುವ ನಾಯಕ ಭರತ್ (ಪ್ರಜ್ವಲ್ ದೇವರಾಜ್) ದಿನದಲ್ಲಿ ಬರೀ 6 ಗಂಟೆ ಎಚ್ಚರವಾಗಿ ಇರುತ್ತಾನೆ. ಆರು ಗಂಟೆಗಳಲ್ಲಿ ಕೆಲಸ, ಪ್ರೇಮ, ಫ್ಯಾಮಿಲಿ ಎಲ್ಲವನ್ನು ನಿಭಾಯಿಸುತ್ತಿರುತ್ತಾನೆ. ಹೀಗಿದ್ದ ಭರತ್ ಜೀವನಕ್ಕೆ ವಿಲನ್ ಗಳ ಎಂಟ್ರಿಯಾಗುತ್ತದೆ. ತನ್ನ ಕುಟುಂಬದ ಪುಟ್ಟ ಹುಡುಗಿ ವರು (ಆರಾಧ್ಯ) ಳನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಈ ಪರಿಸ್ಥಿತಿಯನ್ನು ಭರತ್ ಹೇಗೆ ಗೆಲ್ಲುತ್ತಾನೆ ಎನ್ನುವುದೇ ಸಿನಿಮಾ.
ಚಿತ್ರದ ಟ್ರೇಲರ್ ಜನೇವರಿ 5, 2020 ರಂದು ಬಿಡುಗಡೆಯಾಯಿತು. ಟ್ರೇಲರ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಚಿತ್ರದಲ್ಲಿ ನಿದ್ದೆಯ ರೋಗದಿಂದ ಬಳಲುವ ನಾಯಕ, ಇವನ ಮೇಲೆ ಅವಲಿಂಬಿತವಾಗಿರುವ ಪುಟ್ಟ ಬಾಲಕಿ, ಇವನನ್ನು ಮನಸಾರೆ ಪ್ರೀತಿಸುವ ನಾಯಕಿ, ಇವರನ್ನು ಕಾಪಾಡಬೇಕಾದ ಅನಿವಾರ್ಯತೆಯಲ್ಲಿ ಬಳಲುವ ನಾಯಕ ,ಹೀಗೆ ಚಿತ್ರ ಸಾಗುತ್ತದೆ.