Updated: Saturday, February 8, 2020, 01:30 PM [IST]
2018 ರಲ್ಲಿ ತೆರೆಕಂಡ ಯಶ್ ಕೆಜಿಎಫ್ ಚಿತ್ರದಿಂದ ಕನ್ನಡದಲ್ಲಿ ನೂರು ಕೋಟಿ ಚಿತ್ರಗಳ ಶಕೆ ಆರಂಭವಾಯಿತು. 2019 ರಲ್ಲಿ ಪ್ಯಾನ್ ಇಂಡಿಯಾ ಬಿಡುಗಡೆಗೊಂಡ ಕುರುಕ್ಷೇತ್ರ ಮತ್ತು ಪೈಲ್ವಾನ್ ಚಿತ್ರಗಳು ಕೂಡ ನೂರು ಕೋಟಿ ಕ್ಲಬ್ ಸೇರಿದವು. 2020 ರಲ್ಲಿ ತೆರೆಕಾಣಲಿರುವ ಚಿತ್ರಗಳತ್ತ ಒಮ್ಮೆ ಗಮನಹರಿಸಿದರೆ, ಹಳೆ ಬಾಕ್ಸಾಫೀಸ್ ರೆಕಾರ್ಡ್ ಗಳು ಉಳಿವುದಂತು ಸಂಶಯ. 2020 ರಲ್ಲಿ ತೆರೆಕಾಣಲಿರುವ ಬಹುನಿರೀಕ್ಷಿತ ಕನ್ನಡ ಚಿತ್ರಗಳು ಇಲ್ಲಿವೆ. ದರ್ಶನ್ ರ ರಾಬರ್ಟ್, ಸುದೀಪ್ ರ ಕೋಟಿಗೊಬ್ಬ 3, ಪುನೀತ್ ರಾಜಕುಮಾರ್ ರ ಯುವರತ್ನ & ಜೇಮ್ಸ್, ಗಣೇಶ್ ರ ಗಾಳಿಪಟ 2 ಮತ್ತು ಯಶ್ ರ ಬಹುನಿರೀಕ್ಷೇಯ ಕೆಜಿಎಫ್ ಚಾಪ್ಟರ್ 2 ಮುಂತಾದ ಚಿತ್ರಗಳು ಈ ವರ್ಷ ತೆರೆ ಕಾಣಲಿವೆ.
ಭರ್ಜರಿ ನಂತರ ಸುಮಾರು ಎರಡು ವರ್ಷಗಳ ನಂತರ ತೆರೆಗೆ ಬರಲಿರುವ ಪೊಗರು ಚಿತ್ರದ ಮೇಲೆ ತುಂಬಾ ನಿರೀಕ್ಷೆಯಿದೆ. ಚಿತ್ರದ ಡೈಲಾಗ್ ಟ್ರೇಲರ್ ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು..2020 ರ ಸಂಕ್ರಾತಿಗೆ ಬಿಡುಗಡೆಯಾಗಲಿದೆ.
Most Anticipated Kannada Movies Of 2020-Pogaru/top-listing/most-anticipated-kannada-movies-of2020-pogaru-3-3776-333.html
ರಾಜಕುಮಾರ ಚಿತ್ರದ ಸೂಪರ್ ಹಿಟ್ ಕಾಂಬಿನೇಶನ್, ಪುನೀತ್ ರಾಜಕುಮಾರ್, ಸಂತೋಷ ಆನಂದರಾಮ್ ಮತ್ತು ವಿಜಯ್ ಕಿರಗಂದೂರ್ ಸಹಯೋಗದಲ್ಲಿ ಬರಲಿರುವ ಯುವರತ್ನ ಚಿತ್ರದ ಮೇಲೆ ತುಂಬಾ ನಿರೀಕ್ಷೆಯಿದೆ. ಅಭಿ ಚಿತ್ರದ ನಂತರ ಮತ್ತೊಮ್ಮೆ ಪುನೀತ್ ಈ ಚಿತ್ರದಲ್ಲಿ ಕಾಲೇಜು ಯುವಕನ ಪಾತ್ರದಲ್ಲಿ ಕಾಣಿಸಿಕೊಳಲ್ಲಿದ್ದಾರೆ.
Most Anticipated Kannada Movies Of 2020-Yuvarathnaa/top-listing/most-anticipated-kannada-movies-of2020-yuvarathnaa-3-3777-333.html
ಕೋಟಿಗೊಬ್ಬ 2 ಚಿತ್ರದ ನಂತರ ಮತ್ತೊಮ್ಮೆ ಸುದೀಪ್ ಮತ್ತು ಸೂರಪ್ಪ ಬಾಬು ಜೊತೆಯಾಗಿದ್ದಾರೆ. ಹೈ ವೋಲ್ಟೇಜ್ ಆಕ್ಷನ್ ಸೀನಗಳಿರುವ ಈ ಚಿತ್ರದಲ್ಲಿ ಸುದೀಪ್ ಧೂಮ್ ರೀತಿಯ ಸ್ಮಾರ್ಟ್ ಕಳ್ಳನಾಗಿ ಕಾಣಿಸಿಕೊಳ್ಳಲಿದ್ದಾರೆ.
Most Anticipated Kannada Movies Of 2020-Kotigobba 3/top-listing/most-anticipated-kannada-movies-of2020-kotigobba-3-3-3779-333.html