X
ಗೌಳಿ
Action | 24 Feb 2023 | U/A | 142 Mins
Kannada

ಗೌಳಿ ಕಥೆ

ಶ್ರೀನಗರ ಕಿಟ್ಟಿ ಮುಖ್ಯಪಾತ್ರದಲ್ಲಿ ನಟಿಸಿರುವ 'ಗೌಳಿ' ಚಿತ್ರವನ್ನು ಸೂರ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ರಘು ಸಿಂಗಂರವರು ಸೋಹನ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಪಾವನಾ ಗೌಡ ನಾಯಕಿಯಾಗಿ ನಟಿಸಿದ್ದರೆ, ರಂಗಾಯಣ ರಘು ಮತ್ತು ಶರತ್ ಲೋಹಿತಾಶ್ವ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಹಿನ್ನಲೆ ಗಾಯಕ ಶಶಾಂಕ ಶೇಷಗಿರಿ ಸಂಗೀತ ನೀಡಿದ್ದು,  ಸಂದೀಪ್ ವಲ್ಲುರಿ ಛಾಯಾಗ್ರಹಣ ಮಾಡಿದ್ದಾರೆ.


ಕಥೆ: ಗೌಳಿ (ಶ್ರೀನಗರ ಕಿಟ್ಟಿ), ಗಿರಿಜಾ (ಪಾವನಾ ಗೌಡ) ಮತ್ತು ದಂಪತಿಯ ಮಗಳಾದ ಪುಟ್ಟವ್ವ ಒಂದು ಹಳ್ಳಿಯಲ್ಲಿ ಕುರಿ, ಹಸು ಸಾಕಿಕೊಂಡು ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿರುತ್ತಾರೆ. ಅದು ತುಂಬಾ ಹಿಂದುಳಿದ ಹಳ್ಳಿಯಾದ್ದರಿಂದ ನಾಯಕಿಯೇ ಅಲ್ಲಿನ ಮಕ್ಕಳಿಗೆ ಕೆಲ ಸಮಯ ಪಾಠ ಹೇಳಿಕೊಡುತ್ತಿರುತ್ತಾರೆ. ಅಲ್ಲಿನ ಪೊಲೀಸ್ (ಶರತ್ ಲೋಹಿತಾಶ್ವ) ಕ್ರೂರಿಯಾಗಿರುತ್ತಾನೆ. ಖಳನಾಯಕನ ಕೋರಿಕೆಯ ಮೇಲೆ ಅದೇ ಊರಿನ ಬಾಲಕಿಯೊಬ್ಬಳನ್ನು ಅಪರಿಸಲು ಒಪ್ಪಿಕೊಳ್ಳುತ್ತಾನೆ. ಇದಕ್ಕೆ ಅದೇ ಊರಿನ ಮೂವರು ಕಿಡಿಗೇಡಿಗಳ ಸಹಾಯವನ್ನು ಪಡೆಯುತ್ತಾನೆ. ನಾಯಕಿಯೂ ಪಾಠ ಹೇಳಿಕೊಡುವ ಮಕ್ಕಳ ಗುಂಪಿನ ಓರ್ವ ಬಾಲಕಿಯ ಅಪಹಣವೂ ಆಗುತ್ತದೆ.  ಬಾಲಕಿಯ ಅಪಹರಣವಾದ ಕಾರಣ ಪೊಲೀಸ್ ನಾಯಕಿಯ ವಿಚಾರಣೆ ಮಾಡುವ ನೆಪದಲ್ಲಿ ಆಕೆಯ ಮೇಲೆ ತನ್ನ ವಕ್ರಧೃಷ್ಟಿ ಬಿರುತ್ತಾನೆ. ಇದು ಪೊಲೀಸ್ ಮತ್ತು ಗೌಳಿಯ ನಡುವಿನ ಕಲಹಕ್ಕೆ ಕಾರಣವಾಗುತ್ತೆ.  ಹೇಗೆ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ ಗೌಳಿ ಕುಟುಂಬ ಆ ಸಮಸ್ಯೆ ಹೇಗೆ ಹೊರಬರುತ್ತೆ ಎನ್ನುವುದೇ ಚಿತ್ರದ ಕಥೆ. 

ಬಿಡುಗಡೆ: ಗೌಳಿ ಸಿನಿಮಾ 2023ರ ಫೆಬ್ರವರಿ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.  

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+