ಕಥೆ
ಈ ಚಿತ್ರದಲ್ಲಿ ಮೂವರು ಗಿರಿಗಳಿದ್ದಾರೆ. ಒಬ್ಬ ಗಿರಿ (ರಿಷಭ್ ಶೆಟ್ಟಿ) ನಿರ್ದೇಶಕನಾದರೆ, ಒಬ್ಬ ಗಿರಿ ವಿಲನ್ ಮತ್ತು ಇನ್ನೊಬ್ಬಳು ಗಿರಿಜಾ. ಎಲ್ಲರಿಗೂ ಸಿನಿಮಾರಂಗಕ್ಕೆ ಕಾಲಿಡಬೇಕು ಎನ್ನುವುದು ಮೂಲ ಉದ್ದೇಶ. ವಿಭಿನ್ನ ಹಿನ್ನಲೆ ಇರುವ ಇವರು ಸಂದರ್ಭವೊಂದರ ಸಹಾಯದಿಂದ ಒಂದೇ ಕಡೆ ಸೇರುತ್ತಾರೆ. ಸಿನಿಮಾ ಮಾಡಲು ಒದ್ದಾಡುವ ಈ ತಂಡ ಕ್ರೈಮ್ ಒಂದರಲ್ಲಿ ಸಿಲುಕಿ ಸ್ಟೇಷನ್ ಮೆಟ್ಟಿಲು ಹತ್ತಬೇಕಾಗುತ್ತದೆ. ಇಲ್ಲಿಂದ ಮೂವರು ಗಿರಿಗಳು ಹೇಗೆ ಪಾರಾಗುತ್ತಾರೆ ಎಂಬುದು ಚಿತ್ರದ ತಿರುಳು.
ಬೆಳವಣಿಗೆ
ಈ ಚಿತ್ರವನ್ನು ಮೊದಲು ಗಿರಿಕೃಷ್ಣ ನಿರ್ದೇಶನ ಮಾಡುವುದಾಗಿ ನಿರ್ಧಿರಿಸಿತ್ತು. ನಂತರ ಕರಣ್ ಅನಂತ ಮತ್ತು ಅನಿರುದ್ಧ ಮಹೇಶ್ ಚಿತ್ರದ ನಿರ್ದೇಶಕರಾಗಿ ಚಿತ್ರತಂಡ ಸೇರಿಕೊಂಡರು.
ರೀಲೀಸ್
ಈ ಚಿತ್ರ ಜೂನ್ 23 ರಂದು ರಾಜ್ಯಾದ್ಯಂತ ತೆರೆಕಂಡಿತು.