X
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ
Comedy | 21 Jul 2023 | U/A | 144 Mins
Kannada

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಕಥೆ

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ನಿರ್ದೇಶನ ಮಾಡಿದ್ದಾರೆ. ವರುಣ್ ಸ್ಟುಡಿಯೋಸ್ ಮತ್ತು ಗುಲ್ ಮೊಹರ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಮೊದಲ ಸಿನಿಮಾ ಇದು. ಈ ಸಿನಿಮಾದ ವಿಶೇಷವೆಂದರೆ ಇದರ ಪೋಸ್ಟರ್ ಅನ್ನು ಡಾ.ಪುನೀತ್ ರಾಜ್ ಕುಮಾರ್ ಲಾಂಚ್ ಮಾಡಿದ್ದರು. ಮೊದಲ ಬಾರಿಗೆ ಈ ಸಿನಿಮಾದ ಕಥೆ ಕೇಳಿದವರು ನಟ ಪುನೀತ್ ಅವರು. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಕಥೆ ಕೇಳಿದ್ದ ಅಪ್ಪು ಅವರು ನಿರ್ದೇಶಕರ ಬೆನ್ನುತಟ್ಟಿದ್ದರು. 


ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಹಲವು ರಂಗಭೂಮಿ ಪ್ರತಿಭೆಗಳಿದ್ದು, ಇದರ ಜೊತೆಗೆ ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ರಮ್ಯಾ, ರಿಷಭ್ ಶೆಟ್ಟಿ, ದಿಗಂತ್ ಮಂಚಾಲೆ, ಶೈನ್ ಶೆಟ್ಟಿ, ಪವನ್ ಕುಮಾರ್, ಅಭಿಷೇಕ್ ದಾಸ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಇದೊಂದು ಯೂಥ್ ಸಬ್ಜೆಕ್ಟ್ ಸಿನಿಮಾವಾಗಿದ್ದು, ಬಿ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಅರವಿಂದ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನವಿದೆ.  


ಬಿಡುಗಡೆ: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ 2023ರ ಜುಲೈ 21ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.  


ಕಥೆ: ಅದು ನೂರಾರು ವಿದ್ಯಾರ್ಥಿಗಳಿರುವ ತುಂಗಾ ಹಾಸ್ಟೆಲ್. ಅಲ್ಲಿ ಹುಡುಗರ ಆಟ, ತುಂಟಾಟ, ತರಲೆ, ತಮಾಷೆ ಕೊಂಚ ಜಾಸ್ತಿನೇ ಇರುತ್ತೆ. ಭಾರೀ ಹಾವಳಿ ಕೊಡುವ ಹಾಸ್ಟೆಲ್‌ ಹುಡುಗರನ್ನು ಕಾಡುವ ಒಬ್ಬ ಸ್ಟ್ರಿಕ್ಟ್ ವಾರ್ಡನ್. ಸಿನಿಮಾ ನಿರ್ದೇಶಕನಾಗುವ ಕನಸು ಕಂಡ ಹಾಸ್ಟೆಲ್ ವಿದ್ಯಾರ್ಥಿ ಅಜಿತ್ ಒಂದು ಶಾರ್ಟ್ ಫಿಲ್ಮ್ ಪ್ಲ್ಯಾನ್ ಮಾಡ್ತಾನೆ. ಇದ್ದಕ್ಕಿದಂತೆ ಆ ವಾರ್ಡನ್ ಒಂದಷ್ಡು ಹುಡುಗರ ಹೆಸರನ್ನು ಸುಸೈಡ್ ನೋಟ್‌ನಲ್ಲಿ ಬರೆದಿಟ್ಟು ಸುಸೈಡ್ ಮಾಡಿಕೊಂಡರೆ ಮುಂದೆ ಏನೆಲ್ಲಾ ಏನಾಗುತ್ತದೆ? ಅನ್ನೋದನ್ನು ಲೈವ್‌ನಲ್ಲಿ ಶೂಟ್ ಮಾಡೋದು ಅವನ ಐಡಿಯಾ. ಆದರೆ, ಈ ಹಾದಿಯಲ್ಲಿ ಏನಾಲ್ಲಾ ಆಗುತ್ತೆ ಅನ್ನೋದು ಸಿನಿಮಾ ಒನ್‌ಲೈನ್ ಸ್ಟೋರಿ. 


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+