X
ಜೇಮ್ಸ್
Action | 17 Mar 2022 | U/A |
Kannada

ಜೇಮ್ಸ್ ಕಥೆ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೊನೆಯ ಬಾರಿ ನಾಯಕನಾಗಿ ನಟಿಸಿರುವ `ಜೇಮ್ಸ್' ಚಿತ್ರವನ್ನು ನಿರ್ದೇಶಕ ಬಹದ್ದೂರ್ ಚೇತನ್ ನಿರ್ದೇಶಿಸಿದ್ದಾರೆ. ಚಿತ್ರದ ಮೊದಲ ಮೋಷನ್ ಪೋಸ್ಟರ್ 2019, ಮಾರ್ಚ್ 16 ರಂದು ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಯಿತು. ಚಿತ್ರಕ್ಕೆ ಕಿಶೋರ್ ಪಥಿಕೊಂಡು ಬಂಡವಾಳ ಹೂಡಿದ್ದಾರೆ. ಪುನೀತ್ ಗೆ ರಾಜಕುಮಾರ್ ಚಿತ್ರದ ಜೋಡಿ ಪ್ರಿಯಾ ಆನಂದ್ ಸಾಥ್ ನೀಡಿದ್ದಾರೆ. ಜೇಮ್ಸ್ ಕಮರ್ಷಿಯಲ್ ಮನರಂಜನಾ ಚಿತ್ರವಾಗಿ ಮೂಡಿ ಬಂದಿದ್ದು, ಇದರ ಬಗ್ಗೆ ಚೇತನ್ ಕುಮಾರ್ `ಇದು ತಮ್ಮ ಕನಸಿನ ಪ್ರೊಜೆಕ್ಟ' ಎಂದು ಹೇಳಿದ್ದಾರೆ.

ಕಥೆ:  ಸತೋಷ್ ಕುಮಾರ್ ಅಲಿಯಾಸ್ ಜೇಮ್ಸ್ `ಜೇ ವಿಂಗ್ಸ್' ಸೆಕುರಿಟಿ ಕಂಪನಿಯ ಮ್ಯಾನೇಜರ್ ಆಗಿರುತ್ತಾರೆ.  ಕೆಲ ಕಾರಣಗಳಿಂದ ಜೇಮ್ಸ್  ಅಂತರಾಷ್ಟ್ರೀಯ ಡ್ರಗ್ ಮಾಫಿಯಾ ದುನಿಯಾಕ್ಕೆ ಎಂಟ್ರಿ ಕೊಡುತ್ತಾನೆ. ಅಲ್ಲಿಂದ ಚಿತ್ರಕ್ಕೆ ಹಲವು ಟ್ಟಿಸ್ಟ್‌ಗಳು ಸಿಗುತ್ತವೆ. ಎರಡನೇ ಭಾಗದಲ್ಲಿ ಪುನೀತ್ ಸೈನಿಕನಾಗಿದ್ದಾಗಿನ ಅಧ್ಯಾಯ ಆರಂಭವಾಗುತ್ತದೆ. ಅಷ್ಟಕ್ಕೂ ಮೇಜರ್ ಸಂತೋಷ್ ಸೈನಿಕನ ಕೆಲಸ ಬಿಟ್ಟು ಬೆಂಗಳೂರಿನಲ್ಲಿ ಏಕೆ ಸೆಕ್ಯುರಿಟಿ ಏಜೆನ್ಸಿ ಆರಂಭಿಸುತ್ತಾನೆ ಎಂಬುದು ಚಿತ್ರದ ಕಥೆ.

ಬೆಳವಣಿಗೆ

1. ಜನೇವರಿ 19, 2020 ರಂದು ಚಿತ್ರದ ಮುಹೂರ್ತ ನೆರವೇರಿತು..ಚಿತ್ರದ ಸ್ಯಾಟಲೈಟ್ ಹಕ್ಕು ಸ್ಟಾರ್ ಸುವರ್ಣ ವಾಹಿನಿಗೆ 15 ಕೋಟಿಯ ಮೊತ್ತಕ್ಕೆ ಮಾರಾಟವಾಗಿರುವ ಸುದ್ದಿಯಿದೆ. 

2. ಇದು ಪುನೀತ್ ರಾಜಕುಮಾರ್ ರವರ ಕೊನೆಯ ಚಿತ್ರವಾಗಿ ತೆರೆಯ ಮೇಲೆ ಮೂಡಿ ಬಂದಿದೆ. ಪುನೀತ್ ನಿಧನಕ್ಕೂಮುಂಚೆ ಚಿತ್ರದ ಹಾಡೊಂದನ್ನು ಹೊರತು ಪಡಿಸಿ ಉಳಿದೆಲ್ಲಾ ಭಾಗಗಳ ಚಿತ್ರೀಕರಣ ಮುಗಿಸಿದ್ದರು.

3. ತೆರೆಯ ಮೇಲೆ ಮೂರು ಸಹೋದರರು ಒಟ್ಟಿಗೆ ನಟಿಸಬೇಕೆಂಬ ಆಸೆ ಹಾಗೇ ಉಳಿದಿದ್ದರಿಂದ, ಈ ಚಿತ್ರದಲ್ಲಿ ಪುನೀತ್ ಆಸೆಯನ್ನು ಚೇತನ್ ಈಡೇರಿಸಲು ಸಂಕಲ್ಪ ಮಾಡಿದ್ದಾರೆ. ಚಿತ್ರದಲ್ಲಿ ಶಿವಣ್ಣ ಮತ್ತು ರಾಘಣ್ಣ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

4. ಚಿತ್ರದಲ್ಲಿ ಪುನೀತ್ ಪಾತ್ರದ ಡಬ್ಬಿಂಗ್ ಬಾಕಿ ಉಳಿದಿದ್ದರಿಂದ, ಆ ಪಾತ್ರಕ್ಕೆ ಚಿತ್ರೀಕರಿಸುವಾಗ ರಿಕಾರ್ಡ್ ಆದ ಪುನೀತ್ ಧ್ವನಿಯನ್ನು ಆಧುನಿಕ ತಂತ್ರಜ್ಙಾನದಿಂದ ಬಳಸಿಕೊಳ್ಳಲು ಚಿತ್ರತಂಡ ನಿರ್ಧರಿಸಿತ್ತು. ಅದು ಸಾಧ್ಯವಾಗದ ಕಾರಣ ಪುನೀತ್ ಪಾತ್ರಕ್ಕೆ ಈಗಾಗಲೇ ಡಬ್ ಮಾಡಿರುವ ಶಿವಣ್ಣ ಅವರ ಧ್ವನಿಯನ್ನೇ ಬಳಸಿಕೊಂಡಿದೆ.

ರಿಲೀಸ್

1. ಪುನೀತ್ ಜನ್ಮದಿನದಂದೂ ಇದುವರೆಗೂ ಒಂದು ಚಿತ್ರ ತೆರೆಕಂಡಿರಲಿಲ್ಲ. ಪುನೀತ್ ಇರುವಾಗಲೇ ಈ ಚಿತ್ರವನ್ನು ಜನ್ಮದಿನದಂದೂ ತೆರೆಗೆ ತರುವ ಬಗ್ಗೆ ಚಿತ್ರತಂಡ ಯೋಚನೆ ಮಾಡಿತ್ತು. ಪುನೀತ್ ಮತ್ತು ಲಕ್ಷಾಂತರ ಅಭಿಮಾನಿಗಳ ಆಸೆಯಂತೆ ಈ ಚಿತ್ರ 2022 ಮಾರ್ಚ್ 17 ರಂದು ಪುನೀತ್ ಜನ್ಮದಿನ ಪ್ರಯುಕ್ತ ಬಿಡುಗಡೆಯಾಗಿದೆ.

2. ಮೊದಲ ದಿನ ಪ್ರಪಂಚಾದ್ಯಂತ ಸುಮಾರು 4000 ಕ್ಕೂ ಹೆಚ್ಚು ಪರದೆಗಳಲ್ಲಿ ತೆರೆಕಂಡಿರುವ ಜೇಮ್ಸ್ ಚಿತ್ರಕ್ಕೆ ಬೆಂಗಳೂರು ಒಂದರಲ್ಲಿ ಮೊದಲ ದಿನ 950ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+