ಲಾಕ್ ಡೌನ್ ನಂತರ ಮತ್ತೆ ತೆರೆಗೆ ಬರಲಿರುವ ಕನ್ನಡ ಚಿತ್ರಗಳು

  2020 ರಲ್ಲಿ ಜಗತ್ತು ಕೊರೊನಾ ಭಾಧೆಯಿಂದ ತತ್ತರಿಸಿತು. ಚಿತ್ರ ಮಂದಿರ, ಮಾಲ್, ದೇವಸ್ಥಾನ ಸೇರಿದಂತೆ ಇಡಿ ಜಗತ್ತು ಸ್ತಬ್ದಗೊಂಡಿತು. ಹಂತ ಹಂತವಾಗಿ ಲಾಕ್ ಡೌನ್ ಗೆ ಒಳಪಟ್ಟ ಭಾರತ ದೇಶ ನಂತರ ನಿಧಾನವಾಗಿ ಅನ್ ಲಾಕ್ ಆಯಿತು. ಏಳು ತಿಂಗಳ ಕಾಲ ಮುಚ್ಚಿದ್ದ ಚಿತ್ರಮಂದಿರಗಳು ತೆರೆಯುತ್ತಿವೆ. ಈ ಸಂದರ್ಭದಲ್ಲಿ ಮರಳಿ ತೆರೆಗೆ ಬರುತ್ತಿರುವ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.

  1. ದಿಯಾ

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Romance

  ಬಿಡುಗಡೆ ದಿನಾಂಕ

  07 Feb 2020

  ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ ಮತ್ತು ಖುಷಿ ರವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ದಿಯಾ ಚಿತ್ರ ತ್ರಿಕೋನ ಪ್ರೇಮಕಥೆ ಮತ್ತು ತಾಯಿ-ಮಗನ ಬಾಂಧವ್ಯದ ಕಥೆ ಪ್ರೇಕ್ಷಕರ ಗಮನ ಸೆಳೆಯಿತು.

  2. ಲವ್ ಮಾಕ್ಟೇಲ್

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Romance

  ಬಿಡುಗಡೆ ದಿನಾಂಕ

  31 Jan 2020

  ಡಾರ್ಲಂಗ್ ಕೃಷ್ಣ, ಮಿಲನಾ ನಾಗರಾಜ್ ಮತ್ತು ಅಮೃತಾ ಅಯ್ಯಂಗಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ಲವ್ ಮಾಕಟೇಲ್ ವ್ಯಕ್ತಿಯ ಜೀವನದ ಮೂರು ಹಂತಗಳಲ್ಲಿ ಮೂಡುವ ಪ್ರೇಮ ಕಥೆಗಳನ್ನು ತಿಳಿ ಹಾಸ್ಯದೊಂದಿಗೆ ಸುಂದರವಾಗಿ ವಿವರಿಸಿತ್ತು.

  3. ಜಂಟಲ್ ಮನ್

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Action

  ಬಿಡುಗಡೆ ದಿನಾಂಕ

  07 Feb 2020

  ಗುರು ದೇಶಪಾಂಡೆ ನಿರ್ಮಾಣ , ಜಡೇಶ್ ಕುಮಾರ್ ಹಂಪಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಜಂಟಲಮನ್ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ನಿಶ್ವಿಕಾ ನಾಯ್ಡು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ವಿಪರೀತ ನಿದ್ದೆಯ ಸಮಸ್ಯೆಯಿಂದ ಬಳಲುವ ವ್ಯಕ್ತಿಯೊಬ್ಬ ತನ್ನ ಜವಾಬ್ದಾರಿಯಲ್ಲಿರುವ ಮಗುವನ್ನು ಹೇಗೆ ರಕ್ಷಿಸುತ್ತಾನೆ ಎಂಬುದು ಮನೋಘ್ನವಾಗಿ ಮೂಡಿ ಬಂದಿತ್ತು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X