ಕೆಜಿಎಫ್: ಚಾಪ್ಟರ್ 2 ಕಥೆ

  ಸಾರಾಂಶ - ನರಾಚಿ ಸಾಮ್ರಾಜ್ಯದ ದೊರೆ ಗರುಡನನ್ನು ಕೊಂದ ಮೇಲೆ ರಾಕಿಯ ಮುಂದಿನ ಪಯಣ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಮೂಡಿ ಬಂದಿದೆ. ರಾಕಿ ಮತ್ತು ಅಧೀರನ ಹೋರಾಟ ಮತ್ತು ಮುಂದೆ ರಾಕಿಯ ಅಂತ್ಯಕ್ಕೆ ಸ್ವತಃ ದೇಶದ ಪ್ರಧಾನಿಯೇ ವಾರಂಟ್ ಹೊರಡಿಸುವವರೆಗೆ ಚಿತ್ರದ ಕಥೆ ಸಾಗಲಿದೆ.

   

  ಕಥೆ

  ಕೆಜಿಎಫ್; ಚಾಪ್ಟರ್ 1'ನಲ್ಲಿ ರಾಕಿಭಾಯ್‌ಗೆ ಗರುಡನನ್ನು ಹೊಡೆಯಬೇಕೆನ್ನುವ ಸ್ಪಷ್ಟ ಗುರಿ ಇದೆ, ಅಲ್ಲಿ ರಾಕಿಭಾಯ್‌ಗೆ ಗರುಡನೊಬ್ಬನೇ ಎದುರಾಳಿ. ಆದರೆ ಒಮ್ಮೆ ಗರಡುನನ್ನು ಹೊಡೆದು ಕೆಜಿಎಫ್‌ನ ಚಿನ್ನದ ಭೂಮಿಯ ಒಡೆಯನಾದ ಮೇಲೆ ದುಶ್ಮನ್‌ಗಳ ಸಂಖ್ಯೆ ಹೆಚ್ಚಾಗುತ್ತದೆ. ಒಬ್ಬ ಕ್ರೂರಿ, ಒಬ್ಬ ಚಾಣಾಕ್ಷ, ಅಸೂಯೆ ತುಂಬಿದ ಹಳೆ ಗೆಳೆಯನೊಬ್ಬ, ಜೊತೆಗೆ ಇದ್ದು ರಾಕಿಭಾಯ್ ಪತನ ಬಯಸುವವನೊಬ್ಬ, ಒಬ್ಬಾಕೆ ಹಠವಾದಿ ಹೀಗೆ ಒಂದೊಂದು ಬಗೆಯ ವೈರಿಗಳು ರಾಕಿಭಾಯ್‌ ಮೇಲೆ ಒಬ್ಬೊಬ್ಬರಾಗಿ ಮುಗಿಬೀಳುತ್ತಾರೆ. ಆದರೆ ರಾಕಿಭಾಯ್ ಗಟ್ಟಿಗ ಜೊತೆಗೆ ಚಾಣಾಕ್ಷ ಸಹ. ಎಲ್ಲರನ್ನೂ ಎದುರಿಸುತ್ತಾನೆ, ವೈರಿಗಳ ವಿರುದ್ಧ ಗೆದ್ದು, ಸ್ವ ಇಚ್ಚೆಯಿಂದ ಸೋಲುತ್ತಾನೆ.

   

  ಬೆಳವಣಿಗೆ:

  1. ಕೆಜಿಎಫ್ Chapter 2, 2018 ರಲ್ಲಿ ತೆರೆಕಂಡ 70 ರ ದಶಕದ ಕಥೆಯುಳ್ಳ ಬ್ಲಾಕ್‌ಬ್ಲಸ್ಟರ್ ಚಿತ್ರ. ಇದು ಕೆ.ಜಿ.ಎಫ್ ಚಿತ್ರದ ಎರಡನೇ ಭಾಗವಾಗಿದ್ದು, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮತ್ತು ಕೆ.ಜಿ.ಎಫ್ ಚಿತ್ರದ ಬಹುತೇಕ ತಾರಾಗಣ ಈ ಚಿತ್ರದಲ್ಲೂ ಮುಂದುವರೆಯಲಿದೆ.

   

  2. ಎರಡನೇ ಭಾಗದ ಚಿತ್ರದ ಶೂಟಿಂಗ್ ಮೇ 2. 2019 ರಿಂದ ಆರಂಭವಾಗಿದೆ. ಮೊದಲನೆ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿಯೇ ಎರಡನೇ ಭಾಗದ ಸುಮಾರು 30 ಪ್ರತಿಶತ ಚಿತ್ರೀಕರಣವಾಗಿದೆ.

   

  3. ನಿರೀಕ್ಷೆಯಂತೆ ಸಂಜಯ್ ದತ್ತ್ ಅಧೀರನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಂಜಯ್ ದತ್ತ್ ರ ಜನ್ಮದಿನ 29 ಜುಲೈ 2019 ರಂದು ಅಧೀರ ಪಾತ್ರದ ಫರ್ಸ್ಟ್ ಲುಕ್ ಬಿಡುಗಡೆಯಾಯಿತು..

   

  4. 2019 ,ಸೆಪ್ಟಂಬರ್ 13 ರಂದು ಬೆಂಗಳೂರಿನ ವಿಜಯನಗರದ ಕೋದಂಡರಾಮ ಮಂದಿರದಲ್ಲಿ ಚಿತ್ರದ ಮುಹೂರ್ತ ನೇರವೇರಿತು. 2019, ಜೂನ್ 6 ರಿಂದ ನಟ ಯಶ್ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡರು. ಮೈಸೂರಿನಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಯಿತು.

   

  5. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಡಿಸೆಂಬರ್ 21, 2019 ರಂದು ಬಿಡುಗಡೆಯಾಯಿತು.

   

  6. ಚಿತ್ರದ ಟೀಸರ್ ಯಶ್ ಜನ್ಮದಿನ ಪ್ರಯುಕ್ತ ಜನೇವರಿ 8, 2020 ರಂದು ಬಿಡುಗಡೆಯಾಗುವುದಾಗಿ ಘೋಷಣೆಯಾಗಿತ್ತು. ಆದರೆ ಚಿತ್ರದ ಚಿತ್ರೀಕರಣದ ಕಾರಣದಿಂದ ಚಿತ್ರದ ಇನ್ನೊಂದು ಲುಕ್ ಬಿಡುಗಡೆಯಾಯಿತು. ಯಶ್ ಜನ್ಮದಿನ ಯಶ್ ಹ್ಯಾಮರ್ ಹಿಡಿದುಕೊಂಡ ಲುಕ್ ಬಿಡುಗಡೆಯಾಯಿತು.

   

  7. ಚಿತ್ರದ ಚಿತ್ರೀಕರಣ ಕೋಲಾರದ ಗೋಲ್ಡ್ ಫೀಲ್ಡ್ ನಲ್ಲಿ ನೆಡೆಯುತ್ತಿದ್ದಾಗ, ಅಲ್ಲಿನ ಸ್ಥಳೀಯರೊಬ್ಬರು ನೀಡಿದ ದೂರಿನ ಅನುಸಾರ ಕೆಲ ಕಾಲ ಚಿತ್ರಕ್ಕೆ ಕೋರ್ಟ್ ನಿರ್ಬಂಧ ಹೇರಲಾಗಿತ್ತು. ಮುಂದಿನ ಹಂತದ ಚಿತ್ರೀಕರಣ ಆಂಧ್ರಪ್ರದೇಶದ ಕಡಪದಲ್ಲಿ ನೆಡೆಯುತ್ತಿದೆ.

   

  8. ಚಿತ್ರದ ಸೆಕೆಂಡ್ ಲುಕ್ ನ್ನು, ಯಶ್ ಬರ್ತಡೇ ಪ್ರಯುಕ್ತ ನಾಯಂಡಹಳ್ಳಿಯ ನಂದಿ ಲಿಂಕ್ಸ್ ಮೈದಾನದಲ್ಲಿ 216 ಅಡಿ ಕಟೌಟ್ ನಿರ್ಮಾಣ ಮಾಡಲು ತೀರ್ಮಾನಿಸಲಾಗಿತ್ತು. ಕಟೌಟ್ ಹಾಕಿದ ತರುವಾಯ ಗಾಳಿಗೆ ಮುಖದ ಭಾಗ ಕೆಳೆಗೆ ಬಿದ್ದ ಕಾರಣ, ಮುಂದೆ ಯಾರಿಗೂ ಆಪಾಯವಾಗುವುದು ಬೇಡವೆಂದು ಸಂಫೂರ್ಣ ಕಟೌಟ್ ನ್ನು ಕೆಳೆಗೆ ತೆಗೆಯಲಾಯಿತು.

   

  9. 2021, ಜನೇವರಿ 7 ರಂದು ಯಶ್ ಜನ್ಮದಿನ ಪ್ರಯುಕ್ತ ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು. ಟೀಸರ್ ಸುಮಾರು 240 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದ್ದು, 9 ಮಿಲಿಯನ್ ಗೂ ಅಧಿಕ ಲೈಕ್ಸ್ ಪಡೆದಿದೆ.

   

  10. ಚಿತ್ರದ ಟ್ರೇಲರ್ ಮಾರ್ಚ್ 27 ರಂದು ಬಿಡುಗಡೆಯಾಯಿತು.

  **Note:Hey! Would you like to share the story of the movie ಕೆಜಿಎಫ್: ಚಾಪ್ಟರ್ 2 with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X