1986ರಲ್ಲಿ ತೆರೆಗೆ ಬಂದ ಕೃಷ್ಣಾ ನೀ ಬೇಗನೆ ಬಾರೋ ಸಿನಿಮಾವನ್ನು ಭಾರ್ಗವ ನಿರ್ದೇಶನ ಮಾಡಿದ್ದರು. ಸಿನಿಮಾದಲ್ಲಿ ವಿಷ್ಣುವರ್ಧನ್ ನಾಯಕನಾಗಿ ಹಾಗೂ ಭವ್ಯ ನಾಯಕಿಯಾಗಿ ನಟಿಸಿದ್ದರು. ಉಳಿದಂತೆ ಕಿಮ್, ಮುಖ್ಯಮಂತ್ರಿ ಚಂದ್ರು, ರಾಜಾನಂದ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಸೌತೆನ್' ಎನ್ನುವ ಹಿಂದಿ ಚಿತ್ರದಿಂದ ಪ್ರೇರಣೆಗೊಂಡು ಈ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ಮಾಡಲಾಗಿತ್ತು. ಬಪ್ಪಿ ಲಹರಿ ಸಂಗೀತ ಚಿತ್ರಕ್ಕೆ ಹೈಲೆಟ್ ಆಗಿತ್ತು.
ರೀ-ರಿಲೀಸ್: ಕೃಷ್ಣಾ ನೀ ಬೇಗನೆ ಬಾರೋ ಸಿನಿಮಾ ಮೇ ೧೭ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ರೀ-ರಿಲೀಸ್ ಆಗಲಿದೆ.