ಕೃಷ್ಣಂ ಪ್ರಣಯ ಸಖಿ ಸಿನಿಮಾವನ್ನು ದಂಡುಪಾಳ್ಯ ಖ್ಯಾತಿಯ
ಶ್ರೀನಿವಾಸ್ ರಾಜು ನಿರ್ದೇಶನ ಮಾಡಿದ್ದಾರೆ. ಇದು ಗೋಲ್ಡನ್ ಸ್ಟಾರ್
ಗಣೇಶ್ ನಟಿಸುತ್ತಿರುವ 41ನೇ ಸಿನಿಮಾ. ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ. ರುದ್ರಪ್ಪ 'ಕೃಷ್ಣಂ ಪ್ರಣಯ ಸಖಿ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ 3ನೇ ಚಿತ್ರವಿದು.
ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಜೋಡಿಯಾಗಿ
ಮಾಳವಿಕ ನಾಯರ್ ನಟಿಸುತ್ತಿದ್ದಾರೆ. ಉಳಿದಂತೆ ಶರಣ್ಯ ಶೆಟ್ಟಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಸುಧಾರಾಣಿ, ಶ್ರೀನಿವಾಸಮೂರ್ತಿ, ಶಿವಧ್ವಜ್ ಶೆಟ್ಟಿ, ಬೆನಕ ಗಿರಿ ಮುಂತಾದ ಕಲಾವಿದರು ತಾರಾಗಣದಲ್ಲಿದ್ದಾರೆ.
ಬಿಡುಗಡೆ: ಕೃಷ್ಣಂ ಪ್ರಣಯ ಸಖಿ ಸಿನಿಮಾ 2024ರ ಆಗಸ್ಟ್ 15ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.
ಕಥೆ: ಚಿತ್ರದಲ್ಲಿ ಕೃಷ್ಣ (ಗಣೇಶ್) ಆಗರ್ಭ ಶ್ರೀಮಂತ ಮನೆತನದ ಹುಡುಗ. ಇವನಿಗೆ ಅನಾಥಶ್ರಮದಲ್ಲಿ ಪ್ರಣಯ (ಮಾಳವಿಕಾ) ಮೊದಲ ನೋಟದಲ್ಲೇ ಸಿಕ್ಕಾಪಟ್ಟೆ ಇಷ್ಟವಾಗ್ತಾಳೆ. ಅವಳ ಪ್ರೀತಿ ಪಡೆಯಲು ಕೃಷ್ಣ ತಾನು ಶ್ರೀಮಂತನಲ್ಲ. ನಾನೊಬ್ಬ ಬಡವ ಕ್ಯಾಬ್ ಡ್ರೈವರ್ ಅಂತ ಹೇಳಿಕೊಂಡು ಅವಳ ಆಶ್ರಮದಲ್ಲಿ ಡ್ರೈವಿಂಗ್ ಕೆಲಸಕ್ಕೆ ಸೇರುತ್ತಾನೆ. ಈ ಸಂದರ್ಭ ನಾಯಕಿಯ ಮನಸ್ಸನ್ನು ಗೆಲ್ಲುವ ಕೃಷ್ಣ, ಗ್ಯಾಪ್‌ನಲ್ಲಿ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಅಷ್ಟೊತ್ತಿಗಾಗಲೇ ಎರಡನೇ ನಾಯಕಿಯ (ಶರಣ್ಯ ಶೆಟ್ಟಿ) ಎಂಟ್ರಿ ಆಗಿರುತ್ತೆ. ಇಲ್ಲಿಂದ ಕಥೆಗೆ ಒಂದಿಷ್ಟು ಟ್ವಿಸ್ಟ್ ಅಂಡ್ ಟರ್ನ್‌ಗಳು ಸಿಗುತ್ತಾ ಹೋಗುತ್ತವೆ. ಕೆಲವೊಂದು ಆಕ್ಷನ್ ಸೀನ್‌ಗಳು ಬಂದು ಹೋಗುತ್ತವೆ. ಮುಂದೆ ಏನಾಗುತ್ತೆ? ಅನ್ನೋದೇ ಸಿನಿಮಾದ ಕಥೆ.