ಕುದ್ರು ಸಿನಿಮಾವನ್ನು ಭಾಸ್ಕರ್ ನಾಯ್ಕ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪ್ರಿಯಾ ಹೆಗ್ಡೆ, ಡೈನಾ ಡಿಸೋಜ, ಫರ್ಹಾನ್, ಹರ್ಷಿತ್ ಶೆಟ್ಟಿ, ಗಾಡ್ವಿನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಭಾಸ್ಕರ್ ನಾಯ್ಕ, ವಿನುತಾ ಗೌಡ, ಸತೀಶ್ ಆಚಾರ್ಯ ಫೋಷಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶ್ರೀಪುರಾಣಿಕ್ ಛಾಯಾಗ್ರಹಣ, ಪ್ರತೀಕ್ ಕುಂಡು ಸಂಗೀತ ನಿರ್ದೇಶನ ಸಿನಿಮಾಗಿದೆ. ಶ್ರೀನಿವಾಸ್ ಕುಲಾಲ್ ಸಂಕಲನ ಮಾಡಿದ್ದಾರೆ. ಕರಾವಳಿಯಲ್ಲಿ ಕೋಮು ಗಲಾಭೆ ಸುದ್ದಿ ಆಗಾಗಾ ಕೇಳಿಬರುತ್ತದೆ ಅದರ ಎಳೆಯನ್ನು ಈ ಸಿನಿಮಾ ಮಾಡಲಾಗಿದೆ.
ಕಥೆ: ಒಂದು ದ್ವೀಪದಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಹಿಂದು ಸಮುದಾಯದ ಕುಟುಂಬಗಳು ಸಹಬಾಳ್ವೆಯಿಂದ ಜೀವನ ನಡೆಸುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ವಾಟ್ಸಪ್ ಮೂಲಕ ಬರುವ ಒಂದು ಸಂದೇಶವು ಎಲ್ಲರ ನಡುವೆ ಮನಸ್ತಾಪಕ್ಕೆ ಕಾರಣವಾಘುತ್ತೆ. ಕಾಲೇಜಿನಲ್ಲಿ ಸಿನಿಮಾದ ಮೊದಲ ಭಾಗದ ಕಹಾನಿ ನಡೆಯುತ್ತೆ. ಬಳಿಕ ಕುತೂಹಲದ ಹಂತಕ್ಕೆ ಕಥೆ ತಲುಪುತ್ತದೆ. ಅದು ಏನು ಎಂಬುದೇ ಸಿನಿಮಾ ಕಥೆ.