twitter
    X
    Home ಚಲನಚಿತ್ರಗಳ ಒಳನೋಟ

    ಉದ್ಯಮಿಗಳನ್ನು ಮದುವೆಯಾಗಿ ಸೆಟಲ್ ಆದ ಟಾಪ್ ನಟಿಯರಿವರು..!

    Author Sowmya Bairappa | Published: Thursday, November 10, 2022, 06:04 PM [IST]

    ಸಿನಿಮಾ ನಾಯಕಿಯರು 8 ರಿಂದ 10 ವರ್ಷಗಳ ಚಿತ್ರರಂಗದಲ್ಲಿ ಬ್ಯುಸಿಯಾಗಿರುತ್ತಾರೆ. ನಂತರ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾಗುತ್ತಿದ್ದಂತೆ ಮಾಡುವೆ ಬಗ್ಗೆ ಯೋಚಿಸುತ್ತಾರೆ. ಅನೇಕ ನಟಿಯರು ಉದ್ಯಮಿಗಳನ್ನೇ ಮದುವೆಯಾಗಿ ಸೆಟಲ್ ಆಗಿದ್ದಾರೆ. ಉದ್ಯಮಿಗಳನ್ನೇ ವಿವಾಹವಾಗಿ ಸೆಟಲ್ ಆಗಿರುವ ನಟಿಯರ ಪಟ್ಟಿ ಇಲ್ಲಿದೆ.

    cover image
    ಪ್ರಣಿತಾ ಸುಭಾಷ್

    ಪ್ರಣಿತಾ ಸುಭಾಷ್

    1

    ನಟಿ ಪ್ರಣಿತಾ ಸಿನಿಮಾ ನಟಿಯಾಗಿ ಮಾತ್ರವಲ್ಲದೆ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದಾರೆ. ತಮ್ಮ ಪ್ರಣಿತಾ ಫೌಂಡೇಷನ್‌ ವತಿಯಿಂದ ಎಷ್ಟೋ ಜನರಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಇವರು ಕನ್ನಡ ಮಾತ್ರವಲ್ಲದೆ ಅನೇಕ ಭಾಷೆಗಳಲ್ಲಿ ನಟಿಸಿದ್ದಾರೆ. ಇವರು ಉದ್ಯಮಿ ನಿತಿನ್ ರಾಜು ಅವರನ್ನು 2021ರ ಮೇ 30ರಂದು ವಿವಾಹವಾಗಿದ್ದರು.  

     

    ಅಮೂಲ್ಯ

    ಅಮೂಲ್ಯ

    2

    ಚೆಲುವಿನ ಚಿತ್ತಾರ ನಟಿ ಅಮೂಲ್ಯ 2017ರ ಮೇ 12ರಂದು ಆದಿಚುಂಚನಗಿರಿಯಲ್ಲಿ ಉದ್ಯಮಿ ಜಗದೀಶ್‌ ಆರ್ ಚಂದ್ರ ಅವರನ್ನು ವಿವಾಹವಾದರು. ಮದುವೆಯಾದ ಬಳಿಕ ನಟನೆಯಿಂದ ದೂರ ಉಳಿದಿರುವ ನಟಿ ಅಮೂಲ್ಯ, ಅವರಿ ಗಂಡು ಮಕ್ಕಳಿಗೆ ತಾಯಿಯಾಗಿದ್ದಾರೆ.

    ಪ್ರಿಯಾಮಣಿ

    ಪ್ರಿಯಾಮಣಿ

    3

    ಬಹುಭಾಷಾ ನಟಿಯಾಗಿರುವ ಪ್ರಿಯಾಮಣಿ ಪತಿ ಮುಸ್ತಫಾ ರಾಜ್ ಉದ್ಯಮಿ. ಪ್ರಿಯಾಮಣಿ 2017ರಲ್ಲಿ ಮುಸ್ತಾಫ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮುಸ್ತಫಾ ರಾಜ್ ಪ್ರಿಯಾಮಣಿಗೂ ಮುನ್ನ ಆಯೆಷಾ ಎಂಬುವವರನ್ನು ಮದುವೆಯಾಗಿದ್ದರು. ನಂತರ ಪ್ರಿಯಾಮಣಿ ಅವರನ್ನು ಪ್ರೀತಿಸಿ ಮದುವೆಯಾದರು.   

     

    ಶಿಲ್ಪಾ ಶೆಟ್ಟಿ

    ಶಿಲ್ಪಾ ಶೆಟ್ಟಿ

    4

    ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಕೂಡ ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗುತ್ತಿದ್ದಂತೆ 2009ರಲ್ಲಿ ಖ್ಯಾತ ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾದರು.

     

    ಮೌನಿ ರಾಯ್

    ಮೌನಿ ರಾಯ್

    5

    ಕನ್ನಡದ ಕೆಜಿಎಫ್​ ಚಾಪ್ಟರ್​ 1ರಲ್ಲಿ 'ಗಲಿ ಗಲಿ' ಹಾಡಿಗೆ ಆಕರ್ಷಕವಾಗಿ ಸೊಂಟ ಬಳುಕಿಸಿದ್ದ ಬಾಲಿವುಡ್​ ನಟಿ ಮೌನಿ ರಾಯ್ ಕೂಡ ಉದ್ಯಮಿಯನ್ನು ಮದುವೆಯಾಗಿದ್ದಾರೆ. ಮೌನಿ ರಾಯ್ ಪತಿ ಸೂರಜ್‌ ನಂಬಿಯಾರ್‌ ಬೆಂಗಳೂರಿನವರಾಗಿದ್ದು, ದುಬೈನಲ್ಲಿ ಉದ್ಯಮಿಯಾಗಿದ್ದಾರೆ. ಈ ಜೋಡಿ 2022ರಲ್ಲಿ ಹಸೆಮಣೆ ಏರಿತ್ತು.  

     

    ಸೋನಂ ಕಪೂರ್

    ಸೋನಂ ಕಪೂರ್

    6

    ಬಾಲಿವುಡ್ ನಟಿ ಸೋನಂ ಕಪೂರ್ ಪತಿ ಕೂಡ ಉದ್ಯಮಿ. ಮೇ 8, 2018ರಲ್ಲಿ ಉದ್ಯಮಿ ಆನಂದ್ ಅಹುಜಾ ಅವರನ್ನ ಸೋನಂ ಕಪೂರ್ ವಿವಾಹವಾದರು. ಮದುವೆಯಾದ್ಮೇಲೆ ಪತಿ ಆನಂದ್ ಅಹುಜಾ ಹಾಗೂ ಸೋನಂ ಕಪೂರ್ ಲಂಡನ್‌ನಲ್ಲಿ ನೆಲೆಸಿದ್ದಾರೆ. ಆನಂದ್ ಅವರು ಭಾರತದ ಅತಿದೊಡ್ಡ ರಫ್ತು ಸಂಸ್ಥೆಗಳಲ್ಲಿ ಒಂದಾದ 'ಶಾಹಿ ಎಕ್ಸ್‌ಪೋರ್ಟ್ಸ್' ನ ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದಾರೆ.

     

    ವಿದ್ಯಾ ಬಾಲನ್

    ವಿದ್ಯಾ ಬಾಲನ್

    7

    ಬಾಲಿವುಡ್ ನಟಿ ವಿದ್ಯಾ ಬಾಲನ್ ತೆಲುಗಿನಲ್ಲೂ 2 ಚಿತ್ರಗಳಲ್ಲಿ ನಟಿಸಿದ್ದಾರೆ. ಈಗಲೂ ಅನೇಕ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. 2012ರಲ್ಲಿ ಟಾಪ್ ಹೀರೋಯಿನ್ ಆಗಿದ್ದ ಸಮಯದಲ್ಲೇ ಖ್ಯಾತ ಉದ್ಯಮಿ ಮತ್ತು ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಅವರನ್ನು ವಿವಾಹವಾದರು.

     

    ಹನ್ಸಿಕ ಮೊಟ್ವಾಣಿ

    ಹನ್ಸಿಕ ಮೊಟ್ವಾಣಿ

    8

    ಅಲ್ಲು ಅರ್ಜುನ್ ಚಿತ್ರ ದೇಶಮುದುರು ಚಿತ್ರದ ಮೂಲಕ ಟಾಲಿವುಡ್ ಗೆ ಕಾಲಿಟ್ಟ ನಟಿ ಹನ್ಸಿಕಾ ಮೋಟ್ವಾನಿ, ಕನ್ನಡದಲ್ಲೂ ಅಪ್ಪು ಜೊತೆ ಅಭಿನಯಿಸಿದ್ದಾರೆ. ಹನ್ಸಿಕಾ ತನ್ನ ಸ್ನೇಹಿತ ಮತ್ತು ಬ್ಯುಸಿನೆಸ್ ಮ್ಯಾನ್ ಸೋಹೆಲ್ ಕಥುರಿಯಾ ಅವರನ್ನು ಮದುವೆಯಾಗಲಿದ್ದಾರೆ. ಇವರ ಮದುವೆ ಡಿಸೆಂಬರ್ 4ರಂದು ನಡೆಯಲಿದೆ.    

     

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X