twitter
    Kannada»Movies»Kurukshetra»Critics Review

    ವಿಮರ್ಶಕರ ವಿಮರ್ಶೆ

    • ಮಹಾಭಾರತದ ಕಥೆ ಎಲ್ಲರಿಗೂ ತಿಳಿದಿದೆ. ಆದರೂ ಅದನ್ನು ಮತ್ತೆ ಮತ್ತೆ ನೋಡಿದರು ಬೇಸರ ಆಗುವುದಿಲ್ಲ. ಹೀಗಿರುವಾಗ, ಈ ಮಹಾ ಕಾವ್ಯವನ್ನು ಅದೆಷ್ಟು ಚೆನ್ನಾಗಿ ತೋರಿಸುತ್ತೇನೆ ಎನ್ನುವುದು ಬಹಳ ಮುಖ್ಯ. ಆ ವಿಚಾರದಲ್ಲಿ ನಿರ್ದೇಶಕ ನಾಗಣ್ಣ ಹಾಗೂ ನಿರ್ಮಾಪಕ ಮುನಿರತ್ನ ಇಬ್ಬರೂ ಗೆದ್ದಿದ್ದಾರೆ. ಅದ್ದೂರಿ ಸೆಟ್ ಗಳು, ಶ್ರೀಮಂತಿಕೆ ಚಿತ್ರದ ಸೌಂದರ್ಯ ಹೆಚ್ಚಿಸಿದೆ. ಪಾಂಡವ ಮತ್ತು ಕೌರವ ಸಾಮ್ರಾಜ್ಯವನ್ನು ತೆರೆ ಮೇಲೆ ನೋಡಲು ಸೊಗಸಾಗಿದೆ.

      ಕನ್ನಡದಲ್ಲಿ ಪೌರಾಣಿಕ ಸಿನಿಮಾ ಬಂದು ಎಷ್ಟೋ ಕಾಲ ಆಗಿದೆ. ಹಾಗಾಗಿ, ಒಂದು ಒಳ್ಳೆಯ ಅನುಭವ, ಸಿನಿಮಾ ನೋಡಿದ ಮೇಲೆ ಆಗುತ್ತದೆ. ಕೆಲವೊಂದು ಸಣ್ಣ ಪುಟ್ಟ ತಪ್ಪುಗಳು ಇದ್ದರೂ, ಯಾವುದು ಹೆಚ್ಚು ಕಿರಿಕಿರಿ ಎನಿಸುವುದಿಲ್ಲ. ಚಿತ್ರಮಂದಿರದ ಒಳಗೆ ದರ್ಶನ್ ಅಭಿಮಾನಿಯಾಗಿ ಹೋದರೂ, ಪೌರಾಣಿಕ ಚಿತ್ರದ ಪ್ರೇಮಿಯಾಗಿ ಹೋದರೂ, ಅಥವಾ ಸಾಮಾನ್ಯ ಪ್ರೇಕ್ಷಕನಾಗಿ ಹೋದರೂ ಸಿನಿಮಾ ಎಲ್ಲರನ್ನು ರಂಜಿಸುತ್ತದೆ.
    • ಪೌರಾಣಿಕ ಪಾತ್ರಗಳನ್ನು ಮಾಡುವುದು ಸುಲಭವಲ್ಲ. ಆ ಕಾಲ ಘಟ್ಟವನ್ನು ಹಿಡಿದಿಡುವುದು ಸುಲಭವಲ್ಲ. ಈ ಎಲ್ಲ ಎಲ್ಲೆಗಳನ್ನೂ ದಾಟಿಕೊಂಡು ತಮ್ಮ ಶಕ್ತಿಯನುಸಾರ ಸಿನಿಮಾ ಮಾಡಿದೆ ಇಡೀ ಚಿತ್ರತಂಡ. ಆಧುನಿಕ ಜನ ಜೀವನದ ಮಧ್ಯೆ ಕಳೆದು ಹೋಗಿರುವ ಪ್ರೇಕ್ಷಕರು, ಕುರುಕ್ಷೇತ್ರ ಚಿತ್ರದ ಮೂಲಕ ದ್ವಾಪರ ಯುಗಕ್ಕೊಮ್ಮೆ ಹೋಗಿ ಎಂಜಾಯ್‌ ಮಾಡಿಬರಬಹುದು.
    • ಇದು ದರ್ಶನ್ ಅವರ 50ನೇ ಸಿನಿಮಾ. ಇದರಿಂದ ಚಿತ್ರದ ಮೇಲೆ ನಿರೀಕ್ಷೆಯ ಭಾರ ಹೆಚ್ಚಿತ್ತು. ದುರ್ಯೋಧನನ ಪಾತ್ರದಲ್ಲಿ ಅವರು ತಮ್ಮ ನಿಲುವು, ಕಣ್ಣೋಟ, ಗತ್ತಿನಿಂದ ಮನ ಸೆಳೆಯುತ್ತಾರೆ. ಅವರ ಪ್ರಭಾವಳಿ ಮತ್ತು ವ್ಯಾಪಾರಿ ಸೂತ್ರ ಚೌಕಟ್ಟಿನಲ್ಲಿಯೇ ರೂಪುಗೊಂಡಿರುವ ಸಿನಿಮಾ ಇದು. ಹಾಗಾಗಿ ಪಾತ್ರದೊಳಗೆ ಅವರೆಷ್ಟು ಪರಕಾಯ ಪ್ರವೇಶ ಮಾಡಿದ್ದಾರೆಂಬ ಲೆಕ್ಕಾಚಾರ ಬದಿಗಿಟ್ಟು ಸಿನಿಮಾ ನೋಡುವುದು ಅನಿವಾರ್ಯ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X