ಲಾ (2020)
Release date
17 Jul 2020
genre
ಲಾ ಕಥೆ
ರಘು ಸಮರ್ಥ್ ನಿರ್ದೇಶನದಲ್ಲಿ ಮೂಡಿಬಂದಿರುವ ಥ್ರಿಲ್ಲರ್ `ಲಾ' ಚಿತ್ರದಲ್ಲಿ ರಾಗಿಣಿ ಪ್ರಜ್ವಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಎಂ ಗೋವಿಂದ್ ಬಂಡವಾಳ ಹೂಡಿರುವ ಈ ಚಿತ್ರ ಪಿ.ಆರ್.ಕೆ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿದೆ. ಈ ಚಿತ್ರ 2020 ಜುಲೈ 17 ರಂದು ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಯಿತು.
ನಂದಿನಿ (ರಾಗಿಣಿ) ವಕೀಲ ವೃತ್ತಿಯಲ್ಲಿರುವ ಯುವತಿ. ಒಂದು ದಿನ ನಂದಿನಿ ಹೀನಾಯ ಗ್ಯಾಂಗ್ ರೇಪಿಗೆ ಬಲಿಯಾಗುತ್ತಾಳೆ. ಪೋಲೀಸ್ ಠಾಣೆಗೆ ದೂರು ನೀಡಲೂ ಹೋದರು ಅವಳಿಗೆ ತನ್ನನ್ನು ರೇಪ್ ಮಾಡಿದ್ದು ಯಾರು ಎಂಬುದರ ಪ್ರಜ್ಞೆಯೆ ಇರುವುದಿಲ್ಲ. ಕೋರ್ಟ್ನಲ್ಲಿ ತನ್ನ ಕೇಸನ್ನು ತಾನೇ ವಾದಿಸಲು ಅನುವಾಗುತ್ತಾಳೆ. ಆದರೆ ಇದಕ್ಕೆ ಪೋಲಿಸ್ ಇಲಾಖೆಯಿಂದಾಗಲಿ ಅಥವಾ ಅವಳ ತಂದೆಯಿಂದಾಗಲಿ ಯಾವುದೇ ಸಹಾಯ ದೊರೆಯುವುದಿಲ್ಲ. ತನ್ನ ಮೇಲೆ ಅತ್ಯಾಚಾರ ಎಸಗಿದ ಘಾತುಕರನ್ನು ನಂದಿನಿ ಹೇಗೆ ಕಂಡು ಹಿಡಿಯುತ್ತಾಳೆ ಮತ್ತು ಕೊನೆಗೆ ಹೇಗೆ ನ್ಯಾಯ ಪಡೆಯುತ್ತಾಳೆ ಎಂಬುದು ಚಿತ್ರದ ಕಥೆ.
**Note:Hey! Would you like to share the story of the movie ಲಾ with us? Please send it to us ([email protected]).