ಒಂದು ದಿನ ಪೂರ್ತಿ ನಿಮ್ಮ ಮೊಬೈಲ್ ಗೆ ಬರುವ ಕರೆಗಳೆನ್ನೆಲ್ಲಾ ಲೌಡ್ ಸ್ಪೀಕರ್ ಇಟ್ಟು ಮಾತನಾಡಿದರೆ ಆಗುವ ಆವಾಂತರಗಳೇನು ಎಂದು ತೋರಿಸುವ ಸುಂದರ ಪ್ರಯತ್ನ ಈ ಚಿತ್ರದಲ್ಲಿದೆ.ಇದು ಮೂರು ಜೋಡಿಗಳು ಮತ್ತು ಎಲ್ಲರಿಗೂ ಕಾಮನ್ ಫ್ರೆಂಡ್ ಆಗಿದ್ದ ವ್ಯಕ್ತಿ ಸೇರಿ ಒಟ್ಟು ಏಳು ಜನರ ಮಧ್ಯೆ ನಡೆಯುವ ಕಥೆ. ಈ ಏಲು ಜನರು ಸೇರಿ ಒಂದು ಅಪಾಯಕಾರಿ ಗೇಮ್ ಆಡ್ತಾರೆ. ಅದರ ಹೆಸರೇ ಲೌಡ್ ಸ್ಪೀಕರ್. ಈ ಏಳು ಜನರಲ್ಲಿ ಯಾರಿಗೇ ಫೋನ್ ಬಂದ್ರು, ಮೆಸೆಜ್ ಬಂದ್ರು ಎಲ್ಲರ ಮುಂದೆ ಸ್ಪೀಕರ್ ಆನ್ ಮಾಡಿ ಮಾತನಾಡಬೇಕು. ಹೀಗೆ ಶುರುವಾಗುವ ಆಟ ಹೇಗೆ ಏಳು ಜನರ ಜೀವನವನ್ನ ಬದಲಿಸುತ್ತೆ ಎಂಬುದೇ ಕಥೆ.