ಒಮ್ಮೆ ತನ್ನ ಪತ್ನಿ ಮತ್ತು ಮಗು ತಿರುಪತಿಗೆ ಹೋದಾಗ ಬಾರ್ ಒಂದರಲ್ಲಿ ಕೆಲವು ಘಟನೆಗಳು ನಡೆದು ಬೆಳಿಗ್ಗೆ ಹೊತ್ತಿಗೆ ಗಾಂಧಿ ಹಣದ ಬ್ಯಾಗಿನೊಂದಿಗೆ ಮನೆಯಲ್ಲಿ ಕೆಟ್ಟ ಸ್ಥಿತಿಯಲ್ಲಿರುತ್ತಾನೆ. ಇದನ್ನು ನೋಡಿದ ಪತ್ನಿ ತನ್ನ ಮಗುವಿನೊಂದಿಗೆ ಅವನನ್ನು ತ್ಯಜಿಸುತ್ತಾಳೆ. ಮುಂದೆ ಇದೇ ಹಣದಿಂದ ಗಾಂದಿಯೊಂದು ಸಾರಾಯಿ ವ್ಯಾಪಾರ ಆರಂಭಿಸಿ ದೊಡ್ಡ ಬ್ಯುಸಿನೆಸ್ ಮೆನ್ ಆಗಿ ಬೆಳೆಯುತ್ತಾನೆ. ಮುಂದೆ ಹಲವು ವರ್ಷಗಳ ನಂತರ ಗಾಂಧಿ ಪುತ್ರನೇ ಪೋಲಿಸ್ ಅಧಿಕಾರಿಯಾಗಿ ಬಂದು ಗಾಂಧಿ ಮಹಾನ್ ನನ್ನು ಮಟ್ಟ ಹಾಕಲು ತೊಡಗುತ್ತಾನೆ. ಈ ತಂದೆ-ಮಗನ ಕಾಳಗ ಹೇಗಿರುತ್ತದೆ ಎಂಬುದು ಚಿತ್ರದ ಕಥೆ.
ರೀಲೀಸ್:
ಈ ಚಿತ್ರ ತಮಿಳು, ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಫೆಬ್ರವರಿ ರಂದು ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಯಿತು. ತಮಿಳು ಚಿತ್ರದ ಮೂಲ ಹೆಸರು ಮಹಾನ್.