ರವೀಂದ್ರ ಕೊಟಕಿ ನಿರ್ದೇಶಿಸಿರುವ `ಮಜ್ಜಿಗೆ ಹುಳಿ' ಚಿತ್ರದಲ್ಲಿ ದಿಕ್ಷೀತ್ ವೆಂಕಟೇಶ್ ಮತ್ತು ರೂಪಿಕಾ ನಾಯಕ ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಮಚಂದ್ರ ಎಸ್ ನಿರ್ಮಸಿರುವ ಈ ಚಿತ್ರಕ್ಕೆ ಎಂ ಸಂಜೀವ್ ರಾವ್ ಸಂಗೀತ ನೀಡಿದ್ದಾರೆ. ಸುಚೇಂದ್ರ ಪ್ರಸಾದ್, ಮೋಹನ್‍ಜುನೇಜಾ, ಮಿಮಿಕ್ರಿ ದಯಾನಂದ್, ರಮೇಶ್ ಭಟ್, ತರಂಗ ವಿಶ್ವ, ಕೆಂಪೇಗೌಡ, ಕುರಿಸುನೀಲ್, ಯತಿರಾಜ್, ಶಂಕರ್ ನಾರಾಯಣ್ ಮುಂತಾದ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಮೊದಲರಾತ್ರಿಯ ಕೋಣೆಯೊಂದರಲ್ಲೇ ಒಟ್ಟು 28 ಪಾತ್ರಗಳೊಂದಿಗೆ ಚಿತ್ರವನ್ನು ನಿರ್ದೇಶಕರು ತಯಾರು ಮಾಡಿದ್ದಾರೆ.ಹೊಸದಾಗಿ ಮದುವೆಯಾದ ಜೋಡಿಯೊಂದು ಮೊದಲರಾತ್ರಿಗೆಂದು ಗೋವಾಗೆ ಹೋದಾಗ ಆ ರಾತ್ರಿ ಅವರ ಜೀವನದಲ್ಲಿ ಏನೆಲ್ಲಾ ಘಟನಾವಳಿಗಳು ನಡೆಯುತ್ತದೆ ಎಂಬುದು ಚಿತ್ರದ ಒನ್ ಲೈನ್ ಸ್ಟೋರಿ..